Thursday, Dec 9 2021 | Time 00:21 Hrs(IST)
Sports Share

ಟೆನಿಸ್: ರಿಷಿ ಸೆಮೀಸ್ ಗೆ

ಬೆಂಗಳೂರು ಸೆ.29 (ಯುಎನ್ಐ)- ಭರವಸೆಯ ಯುವ ಆಟಗಾರ ರಿಷಿ ರೆಡ್ಡಿ ರಾಜಸ್ಥಾನದ ರಿಷಿರಾಜ್ ಶೇಕಾವತ್ ಅವರನ್ನು ಮಣಿಸಿ ಎಐಟಿಎ ಪುರುಷರ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್ಸ್ ತಲುಪಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ರಿಷಿ 6-1, 6-2 ರಿಂದ ರಿಷಿರಾಜ್ ಅವರನ್ನು ಮಣಿಸಿ ಮುನ್ನಡೆದರು. ಉಳಿದಂತೆ ಮಧ್ಯಮ ಪ್ರದೇಶದ ಯಶ್ ಯಾದವ್, ಕಬೀರ್ ಹನ್ಸ್, ವಿವೇಕ್ ಗೌತಮ್, ವಿಷ್ಣು ವರ್ಧನ್, ಮಾನವ್ ಜೈನ್ ಮುನ್ನಡೆ ಸಾಧಿಸಿದ್ದಾರೆ.

ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕದ ಮೋಹಿತ್ ಮಯೂರ್ ಹಾಗೂ ಮಧ್ಯ ಪ್ರದೇಶದ ಯಶ್ ಯಾದವ್ ಜೋಡಿ ಮುನ್ನಡೆ ಸಾಧಿಸಿದೆ. ಉಳಿದಂತೆ ರಾಜ್ಯದ ಮಾನವ್ ಜೈನ್ ಹಾಗೂ ರಿಶಿ ರೆಡ್ಡಿ ಸಹ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಯುಎನ್ಐ ವಿಎನ್ಎಲ್ 2050