Sunday, Sep 26 2021 | Time 19:08 Hrs(IST)
Sports Share

ಇಂಗ್ಲೆಂಡ್‌ಗೆ ಟಿ-20 ಸರಣಿ

ಕಾರ್ಡಿಫ್, ಜೂ.25 (ಯುಎನ್ಐ)- ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು, ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಗೆದ್ದು ಕೊಂಡಿತು.

ಇಲ್ಲಿನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದಿರುವ ಷ ಟಿ-20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯಕ್ಕೆ ಕೊಂಚ ಮಳೆ ಅಡ್ಡಿಯಾಗಿದ್ದು ಡಕ್ವರ್ತ ಲೂಯಿಸ್ ನಿಯಮದ ಪ್ರಕಾರ ಪಂದ್ಯದ 2 ಓವರ್ ಕಡಿತಗೊಳಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 111 ರನ್ ಗಳಿಸಲಷ್ಟೇ ಶಕ್ತವಾಯಿತು. ನೀಡಲಾಗಿದ್ದ ೧೦3 ರನ್ ಗೆಲುವಿನ ಗುರಿಯನ್ನು ಇಂಗ್ಲೆಂಡ್ 11 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

3.3 ಓವರ್‌ಗಳಲ್ಲಿಯೇ 18 ರನ್‌ಗಳಿಗೆ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ನಾಯಕ ಪೆರೆರಾ ಮತ್ತು ಮೆಂಡಿಸ್ 50 ರನ್‌ಗಳ ಜತೆಯಾಟ ನೀಡಿದರು. ಆದರೆ, ಇವರ ಬಳಿಕ ಯಾವೊಬ್ಬ ಆಟಗಾರನೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲದಿರುವುದರಿಂದ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣವಾಯಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲಿಯೇ ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ, 3ನೇ ವಿಕೆಟ್‌ಗೆ ಕ್ರೀಸ್‌ಗೆ ಬಂದ ನಾಯಕ ಇಯಾನ್ ಮಾರ್ಗನ್ 11ರನ್‌ಗಳಿಸಿ ಹೊರ ನಡೆದರು. ಅವರ ಹಿಂದೆಯೇ ಜೇಸನ್ ರಾಯ್ ಕೂಡಾ 17ರನ್‌ಗೆ ಆಟ ಮುಗಿಸಿದರು. ಬಳಿಕ ಬಂದ ಸ್ಯಾಮ್ ಬಿಲ್ಲಿಂಗ್ಸ್(24) ಲಿಯಾಮ್ ಲಿವಿಂಗ್ ಸ್ಟೋನ್ ಅಜೇಯ 29 ರನ್‌ಗಳ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು.

ಯುಎನ್ಐ ವಿಎನ್ಎಲ್ 1947