Wednesday, Sep 29 2021 | Time 03:29 Hrs(IST)
business economy Share

ಸೆನ್ಸೆಕ್ಸ್ 110 ಅಂಕ ಕುಸಿತ

ಮುಂಬೈ, ಜುಲೈ 2 (ಯುಎನ್‌ಐ) ದೂರಸಂಪರ್ಕ, ಆಟೋ ಮತ್ತು ಮಾಹಿತಿ ತಂತ್ರಜ್ಞಾನ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 110.13 ಅಂಕ ಇಳಿಕೆ ಕಂಡು 52,208.47 ಕ್ಕೆ ಕುಸಿದಿದೆ.
ರಾಷ್ಟ್ರೀಯ ಷೇರು ವಿನಿಯಮ ಕೇಂದ್ರ(ಎನ್‍ ಎಸ್‍ ಇ)ದ ಸೂಚ್ಯಂಕ ನಿಫ್ಟಿ ಸಹ 15.30 ಅಂಕ ಕುಸಿದು 15,664.70 ಕ್ಕೆ ಇಳಿದಿದೆ.

ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ 52,436.83 ಮತ್ತು 52,200.47ರಲ್ಲಿತ್ತು.

ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ 15,711.20 ಮತ್ತು 15,649.60ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 11 ಏರಿಕೆ ಕಂಡಿದ್ದರೆ, 19 ಕಂಪೆನಿ ಷೇರುಗಳು ಕುಸಿದಿವೆ.
ನಷ್ಟ ಕಂಡ ಪ್ರಮುಖ ಕಂಪೆನಿಗಳ ಇನ್ಫೋಸಿಸ್ , ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜಿ ಮತ್ತು ಪವರ್‌ಗ್ರಿಡ್ ಸೇರಿವೆ.
ಉಳಿದಂತೆ ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್ , ಎಂ ಅಂಡ್ ಎಂ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆ ದಾಖಲಿಸಿವೆ.

ಯುಎನ್‍ ಐ ಎಸ್ಎಲ್ಎಸ್ 1035