Wednesday, Sep 29 2021 | Time 03:44 Hrs(IST)
business economy Share

ಸೆನ್ಸೆಕ್ಸ್ 600 ಅಂಕ ಏರಿಕೆ

ಸೆನ್ಸೆಕ್ಸ್ 600 ಅಂಕ ಏರಿಕೆ
ಸೆನ್ಸೆಕ್ಸ್ 600 ಅಂಕ ಏರಿಕೆ

ಮುಂಬೈ, ಜುಲೈ 22 (ಯುಎನ್‌ಐ)- ಬಹುತೇಕ ಎಲ್ಲ ವಲಯಗಳ ಷೇರುಗಳಿಗೆ ಖರೀದಿ ಬೆಂಬಲ ಹೆಚ್ಚಿದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಯಮ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 633 ಅಂಕ ಏರಿಕೆ ಕಂಡು 52,837 ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 177 ಅಂಕ ಏರಿಕೆ ಕಂಡು 15,809.95 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 52,837.65 ಮತ್ತು 52,471.23ರಲ್ಲಿತ್ತು.

ನಿಫ್ಟಿ ಬೆಳಗಿನ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 15,813.25 ಮತ್ತು 15,720.40ರಲ್ಲಿತ್ತು.

ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 25 ಏರಿಕೆ ಕಂಡರೆ 5 ಕಂಪೆನಿಗಳ ಷೇರುಗಳು ಕುಸಿದಿವೆ.



ಲಾಭ ಗಳಿಸಿದ ಪ್ರಮುಖ ಷೇರುಗಳ ಪೈಕಿ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್ ಮತ್ತು ಟೈಟಾನ್ ಸೇರಿವೆ.

ನಷ್ಟ ಕಂಡ ಷೇರುಗಳ ಪೈಕಿ ಏಷ್ಯನ್ ಪೇಂಟ್ಸ್, ಪವರ್‌ಗ್ರಿಡ್, ನೆಸ್ಲೆ ಇಂಡಿಯಾ ಮತ್ತು ಎಚ್‌ಸಿಎಲ್ ಟೆಕ್ನಾಲಜಿ ಸೇರಿವೆ.

ಯುಎನ್ಐ ಎಸ್ಎಲ್ಎಸ್ 1353