Wednesday, Oct 20 2021 | Time 16:00 Hrs(IST)
Special Share

ದಿ ವೈರ್‌ ಸಂಸ್ಥೆಗೆ "ಫ್ರೀ ಮಿಡಿಯಾ ಪಯನೀರ್‌" ಪ್ರಶಸ್ತಿ

ನವದೆಹಲಿ, ಸೆ 1 ( ಯುಎನ್‌ ಐ) ದಿ ವೈರ್‌ ಸಂಸ್ಥೆ ಪ್ರಸಕ್ತ ಸಾಲಿನ "ಫ್ರಿ ಮೀಡಿಯಾ ಪಯನೀರ್‌ " ಪ್ರಶಸ್ತಿಗೆ ಆಯ್ಕೆಗೊಂಡಿದೆ ಎಂದು ಅಂತರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಬುಧವಾರ ಪ್ರಕಟಿಸಿದ್ದು, ಭಾರತದಲ್ಲಿ ಡಿಜಿಟಲ್ ಸುದ್ದಿ ಕ್ರಾಂತಿಯಲ್ಲಿ ಮೊದಲ ಸ್ಥಾನದ ಜೊತೆಗೆ ಯಾವುದೇ ಬೆದರಿಕೆ, ಒತ್ತಡಗಳಿಗೆ ಜಗ್ಗದೆ ಸ್ವತಂತ್ರ ಸಂಸ್ಥೆಯಾಗಿ ಗುಣಮಟ್ಟದ ಸುದ್ದಿಗಳನ್ನು ಬಿತ್ತರಿಸಿದೆ ಎಂದು ಐಪಿಐ ಹೇಳಿದೆ.
"ಈ ವರ್ಷದ ಐಪಿಐ-ಐಎಂಎಸ್ ಫ್ರೀ ಮೀಡಿಯಾ ಪಯೋನೀರ್ ಪ್ರಶಸ್ತಿಗೆ ವೈರ್ ಮಿಡಿಯಾ ಸಂಸ್ಥೆಯ ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ" ಎಂದು ಐಪಿಐ ಕಾರ್ಯನಿರ್ವಾಹಕ ನಿರ್ದೇಶಕಿ ಬಾರ್ಬರಾ ಟ್ರಯೊನ್ಸೆ ಹೇಳಿದ್ದಾರೆ. ಡಿಜಿಟಲ್ ಸುದ್ದಿ ಜಗತ್ತಿನಲ್ಲಿ ಗುಣಮಟ್ಟದ ಸುದ್ದಿಗಳನ್ನು ನೀಡುವುದಕ್ಕೆ ದಿ ವೈರ್‌ ಹೆಸರುವಾಸಿಯಾಗಿದೆ ಹಾಗೂ ಸ್ವತಂತ್ರ ಪತ್ರಿಕೋದ್ಯಮಕ್ಕೆ 'ವೈರ್' ಬದ್ಧತೆ ಐಪಿಐ ಸದಸ್ಯರಿಗೆ ಸ್ಫೂರ್ತಿ ನೀಡಿದೆ. ನಿರ್ಣಾಯಕ ವರದಿಗಾರಿಕೆಯಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ವೈರ್‌ ಸಿಬ್ಬಂದಿಯ ಕೊಡುಗೆಯನ್ನು ಬಾರ್ಬಾರ ಶ್ಲಾಘಿಸಿದ್ದಾರೆ. ರಾಜಕೀಯ ಒತ್ತಡ ಎದುರಾದಾಗ ತಾನು ಮಾಧ್ಯಮದ ಪರವಾಗಿ ನಿಲ್ಲುತ್ತೇನೆ ಎಂದು ಬಾರ್ಬರಾ ಹೇಳಿದ್ದಾರೆ. ಆಸ್ಟ್ರಿಯಾದ ವಿಯೆನ್ನಾದಲ್ಲಿ ಸೆಪ್ಟೆಂಬರ್ 16 ರಂದು ನಡೆಯುವ ಐಪಿಐ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು
ಯುಎನ್‌ ಐ ಕೆವಿಆರ್‌ 1728