Thursday, Dec 9 2021 | Time 00:43 Hrs(IST)
National Share

ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

ಮುಂಬೈ: ಅ, 24 (ಯುಎನ್‌ಐ) ವಿಶ್ವಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದ ಕೋವಿಡ್ -19 ಸಾಂಕ್ರಾಮಿಕವು, ಇದೀಗ ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿ ಜೀವಿತಾವಧಿಯಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಮುಂಬೈ ಮೂಲಕ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ (ಐಐಪಿಎಸ್) ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ಬಹಿರಂಗಪಡಿಸಿದೆ.

ಸಾಂಕ್ರಾಮಿಕ ರೋಗದಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿಯಲ್ಲಿನ ಕುಸಿತವನ್ನು ಸೂಚಿಸುವ ವಿಶ್ಲೇಷಣಾತ್ಮಕ ವರದಿಯು ಇತ್ತೀಚೆಗೆ 'ಬಿಎಂಸಿ ಪಬ್ಲಿಕ್ ಹೆಲ್ತ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಈ ವರದಿಯನ್ನು ಬರೆದಿದ್ದಾರೆ.

"2019 ರಲ್ಲಿ ಪುರುಷರ ಜೀವಿತಾವಧಿ 69.5 ವರ್ಷ ಇದ್ದು, ಇದೀಗ 67.5 ವರ್ಷಕ್ಕೆ ಕುಸಿದಿದೆ. ಮಹಿಳೆಯರ ಜೀವಿತಾವಧಿ 2020ರಲ್ಲಿ 72ದಿಂದ 67.5 ವರ್ಷ ಮತ್ತು 69.8 ವರ್ಷಗಳಿಗೆ ಇಳಿದಿದೆ" ಎಂದು ವರದಿ ಹೇಳಿದೆ.

ಶಿಶುವಿನ ಜನನದ ಸಮಯದಲ್ಲಿ ಮರಣದ ಮಾದರಿಗಳು ಭವಿಷ್ಯದಲ್ಲಿ ಸ್ಥಿರವಾಗಿದ್ದರೆ, ನವಜಾತ ಶಿಶು ಬದುಕುವ ನಿರೀಕ್ಷೆಯ ಸರಾಸರಿ ವರ್ಷಗಳ ಆಧಾರದ ಮೇಲೆ ಜನನದ ಜೀವಿತಾವಧಿಯನ್ನು ಲೆಕ್ಕ ಹಾಕಲಾಗುತ್ತದೆ.

ಪ್ರಾಧ್ಯಾಪಕ ಯಾದವ್ ಅವರು ಕೈಗೊಂಡ ಅಧ್ಯಯನವು 'ಲೆಂಥ್​ ಆಫ್​ ಲೈಫ್​​ ಇನ್​​ಇಕ್ವಾಲಿಟಿ' ಎಂದು ಕರೆಯಲ್ಪಡುವ ಅಂಶವನ್ನು ಒಳಗೊಂಡಿದೆ. ಕೋವಿಡ್ -19 ಸಾಂಕ್ರಾಮಿಕವೂ 39ರಿಂದ 69 ವಯಸ್ಸಿನ ಪುರುಷರ ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಸಾಮಾನ್ಯ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ 35-79 ವಯಸ್ಸಿನವರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಎಂಎಸ್ ಯಾದವ್ ಹೇಳಿದ್ದಾರೆ. ಈ ಅಧ್ಯಯನವು ದೇಶದಲ್ಲಿ ಸಾವಿನ ಮಾದರಿಗಳ ಮೇಲೆ ಕೋವಿಡ್ -19 ರ ಹೊರೆಯ ಪರಿಣಾಮಗಳನ್ನು ನೋಡಲು ನಡೆಸಲಾಯಿತು.

"ಜನರು ಪ್ರತಿ ಸಾರಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾಗ, ಜನನ ಅಂಕಿಅಂಶಗಳ ಜೀವಿತಾವಧಿ ಕ್ಷೀಣಿಸುತ್ತದೆ. ಉದಾಹರಣೆಗೆ, ಆಫ್ರಿಕಾ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕದ ನಂತರ, ಜೀವಿತಾವಧಿ ಕಡಿಮೆಯಾಯಿತು. ಒಮ್ಮೆ ಅದನ್ನು ನಿಯಂತ್ರಣಕ್ಕೆ ತಂದಾಗ ಜೀವಿತಾವಧಿಯು ಸಹ ಮರಳಿ ಮೊದಲಿನ ರೀತಿಗೆ ಬಂದಿದೆ" ಎಂದು ಐಐಪಿಎಸ್ ನಿರ್ದೇಶಕ ಡಾ ಕೆಎಸ್ ಜೇಮ್ಸ್ ಹೇಳಿದ್ದಾರೆ.
UNI, N.B