Sunday, Sep 19 2021 | Time 21:39 Hrs(IST)
National Share

ಕೋವಿಡ್‍ -19: ದೇಶದಲ್ಲಿ 4 ಲಕ್ಷ ದಾಟಿದ ಸಾವಿನ ಸಂಖ್ಯೆ

ಕೋವಿಡ್‍ -19: ದೇಶದಲ್ಲಿ 4 ಲಕ್ಷ ದಾಟಿದ ಸಾವಿನ ಸಂಖ್ಯೆ
ಕೋವಿಡ್‍ -19: ದೇಶದಲ್ಲಿ 4 ಲಕ್ಷ ದಾಟಿದ ಸಾವಿನ ಸಂಖ್ಯೆ

ನವದೆಹಲಿ, ಜುಲೈ 2 (ಯುಎನ್‌ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 853ಕ್ಕೂ ಹೆಚ್ಚು ಸಾವುಗಳು ವರದಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,00,312 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 46,617 ಹೊಸ ಕೊವಿಡ್‍ -19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,04,58,251 ಕ್ಕೆ ಏರಿದೆ. ಸದ್ಯ ದೇಶದಲ್ಲಿ ಸಾವಿನ ಪ್ರಮಾಣ ಶೇ 1.31 ರಷ್ಟಿದೆ.



ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತ, ನಾಲ್ಕು ಲಕ್ಷ ಸಾವಿನ ಸಂಖ್ಯೆ ದಾಟಿದ ಮೂರನೇ ರಾಷ್ಟ್ರವೆನಿಸಿದೆ. ಅಮೆರಿಕದಲ್ಲಿ ಕೋವಿಡ್ ನಿಂದ ಈವರೆಗೆ 6,04,000 ಮಂದಿ, ಬ್ರೆಜಿಲ್‍ ನಲ್ಲಿ 5,18,000 ಜನರು ಸಾವನ್ನಪ್ಪಿದ್ದಾರೆ.

ಆಶಾದಾಯಕ ಬೆಳವಣಿಗೆಯಲ್ಲಿ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 59,384 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಇದರೊಂದಿಗೆ ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 2,95,48,302ಕ್ಕೆ ಏರಿದೆ.



ಇದರೊಂದಿಗೆ ಚೇತರಿಕೆ ಪ್ರಮಾಣ ಶೇ 97.01 ಕ್ಕೆ ಏರಿದೆ. ಸದ್ಯ, ದೇಶಾದ್ಯಂತ ಸಕ್ರಿಯ ಪ್ರಕರಣಗಳು 5,09,637 ಕ್ಕೆ ಇಳಿದಿವೆ, ಇವು ಈವರೆಗೆ ಧೃಡಪಟ್ಟ ಒಟ್ಟು ಪ್ರಕರಣಗಳಲ್ಲಿ ಶೇ 1.67 ರಷ್ಟಿವೆ.

ಈ ಮಧ್ಯೆ, ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣ ಶೇ 2.57 ರಷ್ಟಿದ್ದು. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 2.48 ರಷ್ಟಿದೆ. ಸತತ 25 ದಿನಗಳಿಂದ ಈ ಪ್ರಮಾಣ ಶೇ5ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ಈವರೆಗೆ ಒಟ್ಟು 41,42,51,520 ಕೋವಿಡ್‍ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ 18,80,026 ಪರೀಕ್ಷೆಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.



ಈ ಮಧ್ಯೆ, ಈ ವರ್ಷದ ಜನವರಿ 16 ರಿಂದ 34,00,76,232 ಕೋವಿಡ್‍ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಈ ಪೈಕಿ 42,64,123 ಡೋಸ್‌ಗಳನ್ನು ಕಳೆದ 24 ಗಂಟೆಗಳಲ್ಲಿ ನೀಡಲಾಗಿದೆ.



ಯುಎನ್‍ಐ ಎಸ್ಎಲ್ಎಸ್ 1300