Sunday, Sep 26 2021 | Time 18:02 Hrs(IST)
Special Share

ಜುಲೈ 25 ರಿಂದ ರಾಷ್ಟ್ರಪತಿ ಜಮ್ಮು ಕಾಶ್ಮೀರ ಭೇಟಿ

ಜುಲೈ  25 ರಿಂದ ರಾಷ್ಟ್ರಪತಿ ಜಮ್ಮು ಕಾಶ್ಮೀರ ಭೇಟಿ
ಜುಲೈ 25 ರಿಂದ ರಾಷ್ಟ್ರಪತಿ ಜಮ್ಮು ಕಾಶ್ಮೀರ ಭೇಟಿ

ಜಮ್ಮು, ಜುಲೈ 18( ಯುಎನ್‌ ಐ) ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಜುಲೈ 25ರಿಂದ ಮೂರು ದಿನಗಳ ಕಾಲ ಕೇಂದ್ರಾಡಳಿ ಪ್ರದೇಶ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಜುಲೈ 26ರಂದು ನಡೆಯಲಿರುವ ಶ್ರೀನಗರ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿಗಳು, ಇತರ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜುಲೈ 26 ಬೆಳಗ್ಗೆ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿರುವ ಕಾರಣ ರಾಷ್ಟ್ರಪತಿಗಳು ಜುಲೈ 25ರಂದೇ ಶ್ರೀನಗರ ತಲುಪಲಿದ್ದಾರೆ.

ನವದೆಹಲಿಗೆ ಹಿಂದಿರುಗುವ ಮುನ್ನ ರಾಷ್ಟ್ರಪತಿಗಳು ಜುಲೈ 27ರಂದು ಮಾತಾ ವೈಶ್ಣೋದೇವಿ ಗುಹಾಂತರ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಯುಎನ್‌ ಐ ಕೆವಿಆರ್‌ 1227