Thursday, Dec 9 2021 | Time 00:46 Hrs(IST)
Sports Share

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಅಬುಧಾಬಿ, ಅ 21(ಯುಎನ್ಐ) ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು. ವಾನಿಂದು ಹಸರಂಗ್ ಡಿ ಸಿಲ್ವಾ 71 ರನ್ ಹಾಗೂ ಪಾತುಮ್ ನಿಸಂಕಾ 61 ರನ್ ಗಳ ಅರ್ಧ ಶತಕಗಳ ಸಹಾಯದಿಂದ ಶ್ರೀಲಂಕಾ ಈ ಗೆಲುವು ಸಾಧಿಸಿತು.



ಕಳಪೆ ಆರಂಭದಿಂದ ಚೇತರಿಸಿಕೊಂಡ ಶ್ರೀಲಂಕಾ, ಹಸರಂಗ್ ಹಾಗೂ ನಿಸಂಕಾ 4ನೇ ವಿಕೆಟ್ ಗೆ 123 ರನ್ ಗಳ ಜೊತೆಯಾಟದ ಮೂಲಕ ಸವಾಲಿನ ಇನ್ನಿಂಗ್ಸ್ ಕಟ್ಟಿದರು. 7 ವಿಕೆಟ್ ಗಳ ನಷ್ಟದೊಂದಿಗೆ 171 ರನ್ ಗಳ ಸವಾಲಿನ ಮೊತ್ತವನ್ನು ಶ್ರೀಲಂಕಾ ಪೇರಿಸಿತು.



ನಂತರ ಗುರಿ ಬೆನ್ನತ್ತಿದ ಐರ್ಲೆಂಡ್, ಸತತ ವಿಕೆಟ್ ಕಳೆದುಕೊಂಡು ಸಾಗಿತು. 18.3 ಓವರ್ ಗಳಲ್ಲಿ 101 ರನ್ ಗಳನ್ನು ಗಳಿಸಲು ಮಾತ್ರ ಐರ್ಲೆಂಡ್ ಶಕ್ತವಾಯಿತು. ಐರ್ಲೆಂಡ್ ತಂಡದ ಪರವಾಗಿ ಆಂಡಿ ಬಾಲ್ಬಿರ್ನಿ 41 ಮತ್ತು ಕರ್ಟಿಸ್ ಕ್ಯಾಂಪರ್ 24 ರನ್ ಗಳನ್ನು ಗಳಿಸಿದರು. ಒಂದು ಹಂತದಲ್ಲಿ ಐರ್ಲೆಂಡ್ ತಂಡ 5.5 ಓವರ್ ಗಲ್ಲಿ 16 ರನ್ ಗಳಿಸಲು 6 ವಿಕೆಟ್ ಕಳೆದುಕೊಂಡು ಶ್ರೀಲಂಕಾದ ವಿರುದ್ಧ ಸೋಲಿನ ಕಹಿ ಅನುಭವಿಸಿತು.



ಸೂಪರ್ 12ರ ಘಟಕ್ಕೆ ಸೇರ್ಪಡೆಯಾಗಬೇಕಾದ್ರೆ ನಮಿಬಿಯಾ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲಲೇಬೇಕಾದ ಅನಿವಾರ್ಯತೆ ಉಂಟಾಗಿದೆ.