Monday, Sep 20 2021 | Time 08:08 Hrs(IST)
Sports Share

ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು

ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು
ಟಿ-20: ಇಂಗ್ಲೆಂಡ್ ಸರಣಿ ಗೆಲುವಿನ ನಗು

ಮ್ಯಾಚಿಸ್ಟರ್, ಜು.21 (ಯುಎನ್ಐ)- ಆತಿಥೇಯ ಇಂಗ್ಲೆಂಡ್, ಪ್ರವಾಸಿ ಪಾಕಿಸ್ತಾನ ತಂಡದ ವಿರುದ್ಧ ಮಂಗಳವಾರ ರಾತ್ರಿ ನಡೆದ ಮೂರನೇ ಹಾಗೂ ಅಂತಿಮ ಟಿ-2೦ ಅಂತಾರ್‍ಟ್ರಾಯ ಪಂದ್ಯದಲ್ಲಿ ಮೂರು ವಿಕೆಟ್ ಜಯ ದಾಖಲಿಸಿ ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿದೆ.ಜಯ ಗಳಿಸಲು ನಿಗದಿತ 2೦ ಓವರ್‌ಗಳಲ್ಲಿ 155 ರನ್ ಸೇರಿಸುವ ಗುರಿ ಪಡೆದ ಇಂಗ್ಲೆಂಡ್, ಎರಡು ಎಸೆತಗಳು ಬಾಕಿ ಇರುವಂತೆ 19.4 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಜಯದ ಗುರಿ ಮುಟ್ಟಿತು.ಇಂಗ್ಲೆಂಡ್ ಪರ ಜಾಸನ್ ರಾಯ್ ಮಿಂಚಿನ 64, ಡೆವಿಡ್ ಮಲಾನ್ 31, ಜೋಸ್ ಬಟ್ಲರ್ 21 ಹಾಗೂ ನಾಯಕ ಇಯಾನ್ ಮಾರ್ಗನ್ 21 ರನ್ ಮಾಡಿದರು.ಪಾಕಿಸ್ತಾನ ಪರ ಮೊಹಮ್ಮದ್ ಹಫೀಜ್ 28 ಕ್ಕೆ ಮೂರು, ಶಹದಾಬ್ ಖಾನ್, ಐಮದ್ ವಾಸಿಂ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಉರುಳಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ನಿಗದಿತ 2೦ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಸೇರಿಸಿತು.ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಅಜೇಯ 76, ಫಖರ್ ಜಮಾನ್ 24 ಹಾಗೂ ಹಸನ್ ಅಲಿ ಅಜೇಯ 15 ರನ್ ಮಾಡಿದರು. ಇಂಗ್ಲೆಂಡ್ ಪರ ಅದಿಲ್ ರಶೀದ್ 35 ಕ್ಕೆ ನಾಲ್ಕು ವಿಕೆಟ್ ಉರುಳಿಸಿ ಯಶಸ್ಸಿ ಬೌಲರ್ ಎನಿಸಿದರು.ಮೊದಲ ಟಿ-2೦ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿತ್ತು. ಎರಡು ಹಾಗೂ ಮೂರನೇ ಟಿ-2೦ ಪಂದ್ಯದಲ್ಲಿ ಜಯ ಪಡೆದ ಆತಿಥೇಯ ಇಂಗ್ಲೆಂಡ್ ಸರಣಿಯನ್ನು 2-1 ರಿಂದ ತನ್ನ ಮಡಿಲಿಗೆ ಹಾಕಿಕೊಂಡಿತು. ಇದಕ್ಕೂ ಮುನ್ನ ಆಡಲಾದ ಮೂರು ಏಕದಿನ ಪಂದ್ಯಗಳನ್ನು ಸರಣಿಯನ್ನು ಇಂಗ್ಲೆಂಡ್ 3-೦ ರಿಂದ ತನ್ನದಾಗಿಸಿಕೊಂಡು ಹಿರಿಮೆ ಮೆರೆದಿತ್ತು.ಸಂಕ್ಷಿಪ್ತ ಸ್ಕೋರ್ಪಾಕಿಸ್ತಾನ 2೦ ಓವರ್‌ಗಳಲ್ಲಿ 6 ವಿಕೆಟ್ಗೆ 154ಇಂಗ್ಲೆಂಡ್ 19.4 ಓವರ್‌ಗಳಲ್ಲಿ 7 ವಿಕೆಟ್ ಗೆ 155ಯುಎನ್ಐ ವಿಎನ್ಎಲ್ 1805