Sunday, Mar 29 2020 | Time 00:38 Hrs(IST)
Entertainment Share

‘ಊರೊಂದು ಕರೆದಂತೆ, ಹಿಂದೇನೋ ಮರೆತಂತೆ’

ಬೆಂಗಳೂರು, ಜ 22(ಯುಎನ್‍ಐ) ಸಾಮಾಜಿಕ ಜಾಲತಾಣ ಟ್ವಿಟರ್‍ ನಲ್ಲಿ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ‘ಊರೊಂದು ಕರೆದಂತೆ, ಹಿಂದೇನೋ ಮರೆತಂತೆ’ ಹಾಡು ಸದ್ದು ಮಾಡುತ್ತಿದೆ

ಪಿಆರ್​ಕೆ ಆಡಿಯೋ ಕಂಪನಿಯ ಯೂಟ್ಯೂಬ್ ತಾಣದಲ್ಲಿ ಬಿಡುಗಡೆಯಾದ 35 ಸೆಕೆಂಡ್‍ ಗಳ ಹಾಡನ್ನು, ಒಂದೇ ಗಂಟೆಯ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅಧಿಕ ಮಂದಿ ವೀಕ್ಷಿಸಿದ್ದಾರೆ. ಗಗನ್ ಬದೇರಿಯಾ ಅವರು ಸಂಗೀತ ಸಂಯೋಜಿಸಿರುವ ಈ ಹಾಡಿಗೆ ರಘು ದೀಕ್ಷಿತ್ ಮತ್ತು ವೈಷ್ಣವಿ ರವಿ ದನಿಯಾಗಿದ್ದಾರೆ.

ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ಪಾತ್ರ ನಿರ್ವಹಿಸಿರುವ ವಿಜಯ ರಾಘವೇಂದ್ರ ವೃದ್ಧನ ಗೆಟಪ್‍ ನಲ್ಲಿ ಗಮನ ಸೆಳೆಯುತ್ತಾರೆ. ಯುವತಿಯೊಂದಿಗಿನ ಈ ವೃದ್ಧನ ಸ್ನೇಹ ಸಂಬಂಧವೇ ಚಿತ್ರಕಥೆಯ ಹಂದರವಾಗಿದ್ದು, ಮುಂದಿನ ತಿಂಗಳು ತೆರೆಗೆ ಬರಲಿದೆ

ಸ್ವಯಂ ಪ್ರಭಾ ಎಂಟರ್​ಟೈನ್ಮೆಂಟ್ ಬ್ಯಾನರ್​ನಡಿ ಕೆ. ರತ್ನಾಕರ್ ಕಾಮತ್ ನಿರ್ಮಿಸಿರುವ ಮಾಲ್ಗುಡಿ ಡೇಸ್ ಸಿನಿಮಾವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸಿದ್ಧಾರೆ. 65 ವರ್ಷದ ಹಿರಿಯ ನಾಗರಿಕನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯವಿರುವ ಚಿತ್ರ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.

ಯುಎನ್‍ಐ ಎಸ್‍ಎ ವಿನ್ 1058