Sunday, Mar 29 2020 | Time 00:26 Hrs(IST)
Entertainment Share

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು
‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ



ಸಣ್ಣ ಸಣ್ಣ ತುಣುಕುಗಳಲ್ಲಿ ಹಾಸ್ಯದ ಮಿಣುಕುಗಳನ್ನು ಹೊಂದಿರುವ ಟ್ರೇಲರ್ ಅನ್ನು ಖ್ಯಾತ ಹಾಸ್ಯ ನಟ ಶರಣ್ ಹಾಗೂ ನಿರ್ಮಾಪಕ ದಿನಕರ್ ತೂಗುದೀಪ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು ಫ್ರೆಂಡ್ಸ್ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹರಿ ಈ ಚಿತ್ರದ ನಾಯಕ



‘ಎಂಆರ್ ಪಿ’ ಕುರಿತು ನಿರ್ದೇಶಕ ಬಾಹುಬಲಿ ಮಾತನಾಡಿ, “ಚಿತ್ರದ ನಾಯಕ ಸ್ಥೂಲಕಾಯನಾದರೂ, ಕೇವಲ ಹೊಟ್ಟೆ ಕರಗಿಸಬೇಕು, ಸಣ್ಣ ಆಗಬೇಕು ಎಂದು ಕೊರಗುತ್ತ ಕೂರೋನಲ್ಲ ತಾನಿರೋದು ಹೀಗೇ ಎಂದು ಮನಗಂಡು, ತಾನಿರುವಂತೆಯೇ ಜನರು ತನ್ನನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾನೆ , ಎಲ್ಲರೂ ತನ್ನನ್ನು ಪ್ರೀತಿಸುವಂತೆ ಮಾಡ್ತಾನೆ ಚಿತ್ರದಲ್ಲಿ ಕಾಮಿಡಿ ಜತೆಗೆ ಸಂದೇಶವೂ ಇದೆ ನವರಸ ನಾಯಕ ಜಗ್ಗೇಶ್ ವಾಯ್ಸ್ ಓವರ್ ಇದೆ” ಎಂದರು



ಅಂದಹಾಗೆ ಈ ಚಿತ್ರದ ಮೂಲಕ ನಾಯಕ ನಟನಾಗುತ್ತಿರುವ ಹರಿ ಸಾಕಷ್ಟು ವರ್ಕೌಟ್ ಮಾಡಿದ್ದಾರಂತೆ ಹೊಡೆದಾಟದ ಸನ್ನಿವೇಶಗಳಲ್ಲಿ ಡೂಪ್ ಬಳಸಿಲ್ಲ, ಸ್ವತಃ ಡಬ್ಬಿಂಗ್ ಮಾಡಿದ್ದೇನೆ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನನ್ನ ಪಾಲಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿಕೊಂಡರು



ನಟ ಶರಣ್, ನಿರ್ಮಾಪಕ ದಿನಕರ್ ತೂಗುದೀಪ, ಸಾಹಿತಿ, ನಿರ್ದೇಶಕ ಕವಿರಾಜ್ ಎಂಆರ್ ಪಿ ಚಿತ್ರ ತಂಡಕ್ಕೆ ಶುಭ ಕೋರಿದರು



‘ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್’ ಎಂಬ ಅಡಿಬರಹವಿರುವ ‘ಎಂಆರ್ ಪಿ’ಗೆ ಎಂ ಡಿ ಶ್ರೀಧರ್, ಎ ವಿ ಕೃಷ್ಣಕುಮಾರ್, ಮೋಹನ್ ಕುಮಾರ್ ಎನ್ ಜಿ, ರಂಗಸ್ವಾಮಿ ಕೆ ಆರ್ ಬಂಡವಾಳ ಹೂಡಿದ್ದಾರೆ



ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ಬಾಹುಬಲಿ ಹೊತ್ತಿದ್ದು, ಹರ್ಷವರ್ಧನ್ ರಾಜ್ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ, ಎಲ್ ಎಂ ಸೂರಿ, ಎ ವಿ ಕೃಷ್ಣಕುಮಾರ್ ಛಾಯಾಗ್ರಹಣವಿದೆ 3 ಹಾಡುಗಳಿದ್ದು, ಸಂಚಿತ್ ಹೆಗಡೆ, ರವೀಂದ್ರ ಸೋರಗಾವಿ ಹಾಡಿದ್ದಾರೆ



ತಾರಾಗಣದಲ್ಲಿ ಹರಿ, ಚೈತ್ರಾರೆಡ್ಡಿ, ವಿಜಯ್ ಚೆಂಡೂರ್,ಸುಧಾ ಬೆಳವಾಡಿ, ಪ್ರಕಾಶ್ ತುಮಿನಾಡು, ಬಾಲರಾಜವಾಡಿ, ಮೋಹನ್ ಜುನೇಜಾ ಮೊದಲಾದವರಿದ್ದಾರೆ.



ಯುಎನ್‍ಐ ಎಸ್‍ಎ ವಿಎನ್ 1815