Sunday, Nov 1 2020 | Time 01:21 Hrs(IST)
Entertainment Share

‘ಕಬ್ಜ’ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೆಂಬಲ

‘ಕಬ್ಜ’ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೆಂಬಲ
‘ಕಬ್ಜ’ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೆಂಬಲ

ಬೆಂಗಳೂರು, ಸೆ 15 (ಯುಎನ್‍ಐ) ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ‘ಕಬ್ಜ’ ಚಿತ್ರ ದೇಶದ ಚಿತ್ರರಂಗದಲ್ಲಿ ಬಹುದೊಡ್ಡ ಪ್ರಾಜೆಕ್ಟ್ ಎಂದು ಬಿಂಬಿತವಾಗಿದ್ದು, ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಚಿತ್ರ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದೂ ಸಹ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಭರ್ಜರಿ ಫೋಟೋಶೂಟ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಸದ್ದು ಮಾಡಿರುವ ‘ಕಬ್ಜ’ ಈಗ ಥೀಮ್ ಪೋಸ್ಟರ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದಕ್ಕೆ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಥ್ ನೀಡಿದ್ದಾರೆ.ಸೆಪ್ಟೆಂಬರ್ 18 ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಇದರ ವಿಶೇಷವಾಗಿ ಕಬ್ಜ ಚಿತ್ರತಂಡ ಥೀಮ್ ಪೋಸ್ಟರ್ ನ ಭರ್ಜರಿ ಉಡುಗೊರೆ ನೀಡುತ್ತಿದೆ.ನಾಡಿದ್ದು, ಸೆಪ್ಟೆಂಬರ್ 17 ರಂದು ಸಂಜೆ 5 ಗಂಟೆಗೆ ರಾಮ್ ಗೋಪಾಲ್ ವರ್ಮಾ ಕಬ್ಜ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.'ಕಬ್ಜ' ಚಿತ್ರದಲ್ಲಿ ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಜಗಪತಿ ಬಾಬು, ಪ್ರಕಾಶ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸುಮಾರು ನೂರು ಕೋಟಿ ಬಜೆಟ್‌ ಹೊಂದಿರಲಿದೆ.ಯುಎನ್‍ಐ ಎಸ್‍ಎ 1125

More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..