Monday, Sep 16 2019 | Time 06:14 Hrs(IST)
Entertainment Share

‘ಡಾನ್ಸ್ ವಿತ್ ಹೃತಿಕ್’ ಫೇಸ್ ಬುಕ್ ಗ್ರೂಪ್ ಗೆ ಹೃತಿಕ್ ಚಾಲನೆ

ನವದೆಹಲಿ, ಜುಲೈ 09 (ಯುಎನ್ಐ) ಸ್ವಯಂ ಅಭಿವ್ಯಕ್ತಿ ಉತ್ತೇಜಿಸುವ ಸಲುವಾಗಿ ರೂಪಿಸಿರುವ ‘ಡಾನ್ಸ್ ವಿತ್ ಹೃತಿಕ್’ ಫೇಸ್ ಬುಕ್ ಗ್ರೂಪ್ ಗೆ ನಟ ಹೃತಿಕ್ ರೋಷನ್ ಚಾಲನೆ ನೀಡಿದ್ದಾರೆ ಹೃತಿಕ್ ಅವರ ವಿಶಿಷ್ಟ ಪರಿಕಲ್ಪನೆ ಹಾಗೂ ಹೃದಯವಂತಿಕೆಯನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದಾರೆ
ಬಾಲಿವುಡ್ ನಲ್ಲಿ ತಮ್ಮ ನಾಟ್ಯ ಹಾಗೂ ನಟನೆಯ ಮೂಲಕ ಹಲವು ವರ್ಷಗಳಿಂದ ಯುವಜನತೆಗೆ ಸ್ಫೂರ್ತಿಯಾಗಿರುವ ಹೃತಿಕ್, ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಸಲುವಾಗಿ ಡಾನ್ಸ್ ವಿತ್ ಹೃತಿಕ್’ ಆರಂಭಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ
ಬಡ ಹಾಗೂ ದೀನ ದಲಿತ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರೇತರ ಸಂಸ್ಥೆ ‘ಡಾನ್ಸ್ ಔಟ್ ಆಫ್ ಪಾವರ್ಟಿ’ಯೊಂದಿಗೆ ‘ಡಾನ್ಸ್ ವಿತ್ ಹೃತಿಕ್’ ಜೋಡಿಸಿಕೊಂಡಿದ್ದು, 30 ಯುವ ಅಭಿಮಾನಿಗಳೊಂದಿಗೆ ಹೃತಿಕ್ ನೃತ್ಯದ ವಿಡಿಯೋವನ್ನು ಡಾನ್ಸ್ ಔಟ್ ಆಫ್ ಪಾವರ್ಟಿ ಶೇರ್ ಮಾಡಿದೆ.
ನೃತ್ಯದ ಬಗ್ಗೆ ಆಸಕ್ತಿಯಿದ್ದು, ಕಲಿಯಲು ಸಾಧ್ಯವಿಲ್ಲದ ಮಕ್ಕಳಿಗೆ ‘ಡಾನ್ಸ್ ವಿತ್ ಹೃತಿಕ್’ ಉತ್ತಮ ಅವಕಾಶ ಕಲ್ಪಿಸಲಿದೆ. ಉಚಿತವಾಗಿ ನೃತ್ಯ ಶಿಕ್ಷಣವನ್ನು ಈ ಮೂಲಕ ನೀಡಲಾಗುವುದು ಎಂದು ಡಾನ್ಸ್ ವಿತ್ ಹೃತಿಕ್’ ಗ್ರೂಪ್ ತಿಳಿಸಿದೆ.
ಯುಎನ್ಐ ಎಸ್ಎ ಎಸ್ಎಚ್ 1931
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..