Monday, Jul 22 2019 | Time 20:13 Hrs(IST)
  • ಸೋನಿಯಾ, ರಾಹುಲ್‌ ಕುರಿತು ಟೀಕೆ: ಸತ್‌ ಪಾಲ್‌ ವಿರುದ್ಧ ಬಾಲಿ ಆಕ್ರೋಶ
  • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
  • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
  • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
  • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
  • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
  • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
  • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
  • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
  • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
  • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
  • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
  • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
  • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
  • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
Entertainment Share

'ದಬಾಂಗ್ 3' ಸಿಕ್ವೆಲ್ ಅಲ್ಲ ಪ್ರೀಕ್ವಿಲ್ : ಸೋನಾಕ್ಷಿ

ಮುಂಬೈ, ಜುಲೈ 11 (ಯುಎನ್ಐ) 'ದಬಾಂಗ್-3' ಚಿತ್ರ ಸಿಕ್ವೆಲ್ ಅಲ್ಲ ಪ್ರೀಕ್ವಿಲ್ ಎಂದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2010ರಲ್ಲಿ ಸೋನಾಕ್ಷಿ ಸಿನ್ಹಾ 'ದಬಾಂಗ್' ಚಿತ್ರದ ಮೂಲಕ ಬಿಟೌನ್ ಗೆ ಪಾದಾರ್ಪಣೆ ಮಾಡಿದ್ದರು. 2012ರಲ್ಲಿ 'ದಬಾಂಗ್-2' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಈಗ ಮೊಗದೊಮ್ಮೆ ಸಲ್ಮಾನ್ ಖಾನ್ ಅವರೊಂದಿಗೆ 'ದಬಾಂಗ್-3' ಅವತರಣಿಕೆಯಲ್ಲಿ ನಟಿಸುತ್ತಿದ್ದಾರೆ.
'ದಬಾಂಗ್ -3' ಚಿತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿಕ್ವೆಲ್ ಅಲ್ಲ ಪ್ರಿಕ್ವಿಲ್ ಆಗಿದೆ. ಚುಲ್ ಬುಲ್ ಪಾಂಡೆಯ ಹಿಂದಿನ ಜೀವನದ ರೋಚಕ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುವುದು ಎಂದಿದ್ದಾರೆ.
ಈ ಬಾರಿ ತೆರೆಯ ಮೇಲೆ ಸಲ್ಮಾನ್ ಹಾಗೂ ಸೋನಾಕ್ಷಿಯನ್ನು ಕಡಿಮೆ ವಯಸ್ಸಿನಲ್ಲಿ ತೋರಿಸಲಾಗುತ್ತದೆಯಂತೆ. ಕೇವಲ 15ವರ್ಷದ ಯುವಕನ ಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಕುರಿತು ಒಂದು ಬಾರಿ ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದರು
'ದಬಾಂಗ್-3' ಚಿತ್ರವನ್ನು ನೃತ್ಯ ಸಂಯೋಜಕ ಪ್ರಭುದೇವ್ ನಿರ್ದೇಶನಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ದಬಾಂಗ್' ಚಿತ್ರದ ಎರಡು ಅವತರಣಿಕೆಯಲ್ಲಿ ಚುಲ್ ಬುಲ್ ಪಾಂಡೆಯ ಮಲತಂದೆಯಾಗಿ ವಿನೋಧ ಖನ್ನಾ ಅಭಿನಯಿಸಿದ್ದರು. ಆದರೀಗ ಅವರು ನಿಧನ ಹೊಂದಿದ್ದರಿಂದ ಆ ಸ್ಥಾನಕ್ಕೆ ಅವರ ಸಹೋದರ ಪ್ರಮೋದ್ ಖನ್ನಾ ಅವರನ್ನು ಕರೆತರಲಾಗಿದೆಯಂತೆ.
ಈ ವರ್ಷದ ಕ್ರಿಸ್ ಮಸ್ ಹಬ್ಬದಂದು 'ದಬಾಂಗ್-3' ಚಿತ್ರ ಬಿಡುಗಡೆಗೊಳ್ಳಲಿದೆ.
ಯುಎನ್ಐ ಪಿಕೆ ಎಸ್ಎಚ್ 1656
More News
ಈ ವಾರ ತೆರೆಗೆ `ದಶರಥ’

ಈ ವಾರ ತೆರೆಗೆ `ದಶರಥ’

22 Jul 2019 | 5:57 PM

ಬೆಂಗಳೂರು, ಜುಲೈ 22 (ಯುಎನ್ಐ) ಎಂ ಎಸ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ನಿರ್ಮಿಸಿರುವ `ದಶರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..

ಜುಲೈ 24ರಂದು `ನನ್ನ ಪ್ರಕಾರ’ ಹಾಡು ಬಿಡುಗಡೆ

22 Jul 2019 | 5:35 PM

 Sharesee more..

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

22 Jul 2019 | 5:28 PM

 Sharesee more..

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

22 Jul 2019 | 4:50 PM

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

 Sharesee more..

ಈ ವಾರ ‘ಮಹಿರ’ ತೆರೆಗೆ

22 Jul 2019 | 4:17 PM

 Sharesee more..