Wednesday, Feb 26 2020 | Time 10:10 Hrs(IST)
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

"ಪಶ್ಚಿಮ ಬಂಗಾಳ ಭೇಟಿಯ ಬಗ್ಗೆ ಉತ್ಸುಕನಾಗಿರುವೆ" : ಪ್ರಧಾನಿ ಮೋದಿ

ನವದೆಹಲಿ, ಜ 11 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿಯ ಬಗ್ಗೆ ಉತ್ಸುಕರಾಗಿದ್ದು, ಸ್ವಾಮಿ ವಿವೇಕಾನಂದ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ರಾಮಕೃಷ್ಣ ಮಠದಲ್ಲಿ ಸಮಯ ಕಳೆಯುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
"ನಾನು ಇಂದು ಮತ್ತು ನಾಳೆ ಪಶ್ಚಿಮ ಬಂಗಾಳದಲ್ಲಿರಲು ಉತ್ಸುಕನಾಗಿದ್ದೇನೆ. ರಾಮಕೃಷ್ಣ ಮಿಷನ್‌ನಲ್ಲಿ ಸಮಯ ಕಳೆಯುತ್ತಿರುವುದಕ್ಕೆ ನಾನು ಖುಷಿಪಟ್ಟಿದ್ದೇನೆ. ಅದೂ ನಾವು ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ. ಆ ಸ್ಥಳದ ಬಗ್ಗೆ ಅದೇನೋ ವಿಶೇಷತೆ ಇದೆ" ಎಂದು ಪ್ರಧಾನಿ ಸರಣಿ ಟ್ವೀಟ್‍ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
“ಆದರೆ ಒಂದು ಅಸಮಾಧಾನ. ಬೇಸವರವಂತೂ ಇದ್ದೇ ಇದೆ. ,ಏಕೆಂದರೆ "ಜನ ಸೇವೆಯೇ ಪ್ರಭು ಸೇವೆ ಎಂಬ ಉದಾತ್ತ ತತ್ವವನ್ನು ನನಗೆ ಕಲಿಸಿದ ವ್ಯಕ್ತಿ, ಪೂಜ್ಯ ಸ್ವಾಮಿ ಆತ್ಮಸ್ಥಾನಂದ ಜಿ ಅಲ್ಲಿ ಇರುವುದಿಲ್ಲ ".

"ರಾಮಕೃಷ್ಣ ಮಠದಲ್ಲಿರುವುದು ಮತ್ತು ಅಲ್ಲಿ ಅವರ ಅನುಪಸ್ಥಿತಿಯನ್ನು ಊಹಿಸಲಾಗದು” ಎಂದು ಟ್ವಿಟರ್‍ ನಲ್ಲಿ ಹೇಳಿಕೊಂಡಿದ್ದಾರೆ.

ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಕೋಲ್ಕತಾ ಪೋರ್ಟ್ ಟ್ರಸ್ಟ್‌ನ 150ನೇ ವರ್ಷಾಚರಣೆಯನ್ನು ಉದ್ಘಾಟಿಸಲಿದ್ದಾರೆ, ಇದು ಅತ್ಯಂತ ಹಳೆಯ ಕಾರ್ಯಾಚರಣೆಯ ಬಂದರು ಮತ್ತು ಭಾರತದ 12 ಪ್ರಮುಖ ಸರ್ಕಾರಿ ಸ್ವಾಮ್ಯದ ಬಂದರುಗಳಲ್ಲಿ ಮೊದಲನೆಯದಾಗಿದೆ.

ಕೋಲ್ಕತಾ ಬಂದರು ಟ್ರಸ್ಟ್‌ನ ನಿವೃತ್ತ ಮತ್ತು ಅಸ್ತಿತ್ವದಲ್ಲಿರುವ ನೌಕರರ ಪಿಂಚಣಿ ನಿಧಿಯ ಕೊರತೆಯನ್ನು ಪೂರೈಸಲು ಮೋದಿಯವರು ಅಂತಿಮ ಕಂತಿನ 501 ಕೋಟಿ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಪೋರ್ಟ್ ಗೀತೆಯನ್ನು ಉಡಾಯಿಸಲಿದ್ದು, ಮೂಲ ಬಂದರಿನ ಸ್ಥಳದಲ್ಲಿ 150 ವರ್ಷಗಳ ಸ್ಮರಣಾರ್ಥ ಸ್ಥಾಪನೆಯ ಫಲಕವನ್ನು ಅನಾವರಣಗೊಳಿಸಲಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1143