Tuesday, Nov 12 2019 | Time 04:53 Hrs(IST)
Sports Share

'ಮೇರಿ ಕೋಮ್ ನನಗೆ ಸ್ಪೂರ್ತಿ': ಛೆಟ್ರಿ

ನವದೆಹಲಿ, ಜು 11 (ಯುಎನ್ಐ)- ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಮೇರಿ ಕೋಮ್ ಅವರು ನನಗೆ ಸ್ಪೂರ್ತಿ ಎಂದು ಭಾರತ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ತಿಳಿಸಿದ್ದಾರೆ.
ಎಐಎಫ್‌ಎಫ್ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ಆಯ್ಕೆಯಾದ ಛೆಟ್ರಿ, ಪ್ರಶಸ್ತಿ ಆಟದ ಗುಣಮಟ್ಟ ಹೆಚ್ಚಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಛೆಟ್ರಿ ಅವರು 2007, 2011, 2013, 2014 ಹಾಗೂ 2017ರಲ್ಲಿ ಎಐಎಫ್‌ಎಫ್ ಫುಟ್ಬಾಲ್ ಪ್ರಶಸ್ತಿ ಪಡೆದಿದ್ದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಬಾರಿಸಿದ ಲೆಕ್ಕಾಚಾರದಲ್ಲಿ ಛೆಟ್ರಿ ಅವರು, ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗಿಂತಲೂ ಮುಂಚೂಣಿಯಲಿದ್ದಾರೆ.
' ದೇಶದ ಪರ ಆಟ ಆಡುತ್ತಿರುವುದ ಖುಷಿ ನೀಡಿದೆ. ನಾನು ದೇಶದ ಪರ 100 ಪಂದ್ಯಗಳನ್ನು ಆಡುವ ಬಗ್ಗೆ, ಆರನೇ ಪ್ರಶಸ್ತಿಯ ಪಡೆಯುವ ಬಗ್ಗೆ ಯೋಚಿಸಿಲ್ಲ. ಯಾವಾಗ ನಿವೃತ್ತಿ ಹೊಂದುತ್ತೇನೊ ಆಗಾ ೀ ಬಗ್ಗೆ ವಿಚಾರಿಸುವೆ' ಎಂದಿದ್ದಾರೆ.
ಯುಎನ್ಐ ವಿಎನ್ಎಲ್ ಕೆಎಸ್ವಿ 2239
More News

ಎನ್ ಸಿಎ ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ

11 Nov 2019 | 10:58 PM

 Sharesee more..
“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

11 Nov 2019 | 10:02 PM

ನಾಗಪುರ, ನ.11 (ಯುಎನ್ಐ)- ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಬಗ್ಗೆ ಕನಸಿನಲ್ಲಿಯೂ ಕಂಡಿರಲಿಲ್ಲ ಎಂದು ಟೀಮ್ ಇಂಡಿಯಾದ ಯುವ ವೇಗಿ ದೀಪಕ್ ಚಹಾರ್ ತಿಳಿಸಿದ್ದಾರೆ.

 Sharesee more..