Monday, Sep 16 2019 | Time 06:13 Hrs(IST)
Entertainment Share

'ರಾಕ್ ಸ್ಟಾರ್' ಚಿತ್ರದ ಮೊದಲ ಆಯ್ಕೆ ದೀಪಿಕಾ ಆಗಿದ್ದರು: ಇಮ್ತಿಯಾಜ್

ಮುಂಬೈ, ಜುಲೈ 10 (ಯುಎನ್ಐ) ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಅಲಿ, ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ನನ್ನ 'ರಾಕ್ ಸ್ಟಾರ್' ಚಿತ್ರದ ಮೊದಲ ಆಯ್ಕೆ ಆಗಿದ್ದರು ಎಂದು ಹೇಳಿದ್ದಾರೆ.
ಇಮ್ತಿಯಾಜ್ ಅಲಿ, ರಣಬೀರ್ ಕಪೂರ್ ಹಾಗೂ ನರ್ಗೀಸ್ ಫಕ್ರಿ ಜೋಡಿಯಲ್ಲಿ 'ರಾಕ್ ಸ್ಟಾರ್' ಚಿತ್ರ ತೆರೆಗೆ ತಂದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಇಮ್ತಿಯಾಜ್, ''ಹೋಟೆಲ್ ನಲ್ಲಿ ನಿಂತಿದ್ದಾಗ ಕಾರಿನಿಂದ ಇಳಿದ ಯುವತಿಯೊಬ್ಬಳು ನನ್ನನ್ನು ನೋಡಿದಾಗ ತಕ್ಷಣವೇ ನನಗೆ ಅರ್ಥವಾಯಿತು ಆಕೆ ನನ್ನನ್ನೇ ಭೇಟಿ ಆಗಲು ಬಂದಿದ್ದಳೆಂದು. ಅವಳಿಗೂ ನಾನೇ ನಿರ್ದೇಶಕ ಎಂಬುದು ಗೊತ್ತಾಗಿತ್ತು. ಆ ಸಂದರ್ಭದಲ್ಲಿ ದೀಪಿಕಾಳದು ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. 'ರಾಕ್ ಸ್ಟಾರ್' ಚಿತ್ರಕ್ಕಾಗಿ ಆಕೆಯನ್ನು ಭೇಟಿ ಮಾಡಿದ್ದೆ. ಆದರೆ, ಹಲವು ವರ್ಷಗಳವರೆಗೆ ಆ ಚಿತ್ರದ ತಯಾರಿ ಮಾಡಲು ಸಾಧ್ಯವಾಗಲಿಲ್ಲ. ಬೇರೆ ಅನೇಕ ಚಿತ್ರಗಳನ್ನು ದೀಪಿಕಾ ಅವರೊಂದಿಗೆ ಮಾಡಿದ್ದೇನೆ. ಹಲವು ವರ್ಷಗಳಲ್ಲಿ ಅನೇಕ ಘಟನೆಗಳು ಘಟಿಸಿವೆ. ಕೆಲವೊಂದು ಮರೆತಿದ್ದೇನೆ. ಆದರೆ, ಕಾರಿನಲ್ಲಿ ಬಂದಿಳಿದ್ದ ಆ ಯುವತಿಯನ್ನು ಎಂದಿಗೂ ಮರೆಯಲಾರೆ ಎಂದು ಅವರು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1752
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..