Wednesday, Sep 23 2020 | Time 03:13 Hrs(IST)
Special Share

'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್.. ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ

ನವದೆಹಲಿ, ಆಗಸ್ಟ್ ೨(ಯುಎನ್‌ಐ) ‘ರಕ್ಷಾ ಬಂಧನ’ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಪ್ರಧಾನಿ ಕೂಡ ಭಾವೋದ್ವೇಗದ ಉತ್ತರ ನೀಡಿದ್ದಾರೆ. ‘ಪ್ರಧಾನಿ ನರೇಂದ್ರ ಭಾಯ್ .. ನೀವು ದೇಶಕ್ಕೆ ಬಹಳ ಒಳ್ಳೆಯ ಸೇವೆ ಮಾಡುತ್ತಿದ್ದೀರಿ, ಆದರೆ ಈ ವರ್ಷ “ರಕ್ಷಾ ಬಂಧನ” ಸಂದರ್ಭದಲ್ಲಿ ನಾನು ನಿಮಗೆ ‘ರಾಖಿ’ ಕಳುಹಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಏನು ಎಂಬುದು ನೀವೂ ಸೇರಿದಂತೆ ಇಡೀ ದೇಶಕ್ಕೆ ತಿಳಿದಿದೆ. ನನ್ನೊಂದಿಗೆ, ದೇಶದ ಲಕ್ಷಾಂತರ, ಕೋಟ್ಯಾಂತರ ಮಹಿಳೆಯರು ಸಹ ನಿಮಗೆ ‘ರಾಖಿ’ ಕಟ್ಟಲು ಹಂಬಲಿಸುತ್ತಿದ್ದಾರೆ. ನಮ್ಮೆಲ್ಲರಿಗೂ ಈ ಪರ್ವದಿನದಂದು ನೀವು ಒಂದು ಮಾತು ನೀಡಬೇಕು. ದೇಶವನ್ನು ಇನ್ನಷ್ಟು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತೇನೆ ಹಾಗೂ ಅದಕ್ಕಾಗಿ ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು ”ಎಂದು ಲತಾ ಮಂಗೇಶ್ಕರ್ ತಮ್ಮ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ‘ಲತಾ ದೀದಿ, ರಕ್ಷಾ ಬಂಧನ ಕುರಿತು ನಿಮ್ಮ ಸಂದೇಶ ನನಗೆ ಅತ್ಯಂತ ಹೆಚ್ಚಿನ ಪ್ರೇರಣೆ ಹಾಗೂ ಶಕ್ತಿಯನ್ನು ನೀಡುತ್ತಿದೆ. ದೇಶದ ಕೋಟ್ಯಾಂತರ ತಾಯಂದಿರು ಹಾಗೂ ಸಹೋದರಿಯರ ಆಶೀರ್ವಾದದಿಂದ ದೇಶ ಖಂಡಿತವಾಗಿಯೂ ಅತ್ಯುನ್ನತ ಶಿಖರವನ್ನು ತಲುಪಲಿದೆ. ಹೊಸ ಆವಿಷ್ಕಾರಗಳನ್ನು ನಡೆಸುತ್ತಿದೆ ಎಂದು ಮೋದಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಇದಲ್ಲದೆ, ಲತಾ ಮಂಗೇಶ್ಕರ್ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಕರುಣಿಸಲಿ ಎಂದು ಮನಸ್ಸು ಪೂರ್ವಕವಾಗಿ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯುಎನ್‌ಐ ಕೆವಿಆರ್ ೨೧.೧೨
More News
ಪ್ರಧಾನಿ ಮೋದಿ ಜೀ   ಚಹಕ್ಕಾಗಿ ರೈತರ ಪರ ಹೋರಾಟ ನಡೆಸುತ್ತಿಲ್ಲ: ಎಎಪಿ ಸಂಸದ ಸಂಜಯ್ ಸಿಂಗ್ ಟ್ವೀಟ್

ಪ್ರಧಾನಿ ಮೋದಿ ಜೀ ಚಹಕ್ಕಾಗಿ ರೈತರ ಪರ ಹೋರಾಟ ನಡೆಸುತ್ತಿಲ್ಲ: ಎಎಪಿ ಸಂಸದ ಸಂಜಯ್ ಸಿಂಗ್ ಟ್ವೀಟ್

22 Sep 2020 | 8:39 PM

ನವದೆಹಲಿ, ಸೆ 22(ಯುಎನ್ಐ) ಸದನದಿಂದ ಅಮಾನತ್ತಿಗೊಳಗಾಗಿ ನಿರಶನ ನಡೆಸುತ್ತಿದ್ದ ಮೇಲ್ಮನೆಯ 8 ಸಂಸದರಿಗೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಿಂಗ್ ಚಹಾ ನೀಡಿದ್ದನ್ನು ಪ್ರಧಾನಿ ಮೋದಿ ಪ್ರಶಂಸಿಸರುವ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸ್ಪಂದಿಸಿದ್ದಾರೆ.

 Sharesee more..
ಡ್ರಗ್ಸ್ ಜಾಲ; ಮುಂಬೈ ಖ್ಯಾತ ನಟಿಯರ ಮೇಲೆ ಎನ್‌ಸಿಬಿ ಕಣ್ಣು; ರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ

ಡ್ರಗ್ಸ್ ಜಾಲ; ಮುಂಬೈ ಖ್ಯಾತ ನಟಿಯರ ಮೇಲೆ ಎನ್‌ಸಿಬಿ ಕಣ್ಣು; ರಿಯಾ ಚಕ್ರವರ್ತಿ ಜಾಮೀನು ನಿರಾಕರಣೆ

22 Sep 2020 | 8:32 PM

ಮುಂಬೈ, ಸೆ 22 (ಯುಎನ್ಐ) ಬಾಲಿವುಡ್‌ ಚಿತ್ರೋದ್ಯಮದಲ್ಲಿ ಡ್ರಗ್‌ ದಂಧೆಯನ್ನು ಎಳೆಎಳೆಯಾಗಿ ಹೊರಗೆಳೆಯುತ್ತಿರುವ ಮದ್ಯವ್ಯಸನ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಹಲವು ದೊಡ್ಡ ಚಿತ್ರ ನಟರು ಮತ್ತು ಅವರ ಪ್ರಚಾರ ಏಜೆಂಟರ ವ್ಯವಹಾರಗಳ ಮೇಲೆ ಕಣ್ಣಿರಿಸಿದೆ.

 Sharesee more..
ಕೋವಿಡ್‌19 ; ಯಡಿಯೂರಪ್ಪ ಸೇರಿ 7  ಸಿಎಂಗಳ  ಜೊತೆ  ಪ್ರಧಾನಿ ನಾಳೆ ವರ್ಚುವಲ್ ಸಮಾಲೋಚನೆ

ಕೋವಿಡ್‌19 ; ಯಡಿಯೂರಪ್ಪ ಸೇರಿ 7 ಸಿಎಂಗಳ ಜೊತೆ ಪ್ರಧಾನಿ ನಾಳೆ ವರ್ಚುವಲ್ ಸಮಾಲೋಚನೆ

22 Sep 2020 | 8:22 PM

ನವದೆಹಲಿ, ಸೆ 22(ಯುಎನ್ಐ) ಕೋವಿಡ್ -19 ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೈಗೊಂಡಿರುವ ಸಿದ್ದತೆ ಹಾಗೂ ಸ್ಥಿತಿಗತಿಗಳ ಪರಾಮರ್ಶೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಉನ್ನತ ಮಟ್ಟದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

 Sharesee more..