Friday, Sep 25 2020 | Time 14:24 Hrs(IST)
 • ಕರೋನ ಲಸಿಕೆ, ಅಕ್ಟೋಬರ್ ನಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ
 • ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
 • ಬಿಹಾರ ವಿಧಾನಸಭೆಗೆ ಮೂರು ಹಂತದ ಚುನಾವಣೆ: ನವೆಂಬರ್ 10 ರಂದು ಫಲಿತಾಂಶ
 • ಎಸ್ ಪಿ ಬಿ ಸ್ಥಿತಿ ಗಂಭೀರ, ಆಸ್ಪತ್ರೆ ಮುಂದೆ ಕುಟುಂಬ, ಗಣ್ಯರ ದಂಡು ಬಿಗಿಭದ್ರತೆ
 • ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ
 • 19 ವರ್ಷಗಳಿಂದ ರಾಮಸ್ವಾಮಿ ವರದಿ ಕೊಳೆಯುತ್ತಿದೆ: ರಾಮ್ ದಾಸ್
 • ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
Entertainment Share

`ರೈನ್‌ಬೋಲ್ಯಾಂಡ್’ ನಿಂದ `ಲಚ್ಚವ್ವ’ನ ಪರದಾಟದತನಕ ಏಳು `ಕಥಾಸಂಗಮ’

`ರೈನ್‌ಬೋಲ್ಯಾಂಡ್’ ನಿಂದ `ಲಚ್ಚವ್ವ’ನ ಪರದಾಟದತನಕ ಏಳು `ಕಥಾಸಂಗಮ’
`ರೈನ್‌ಬೋಲ್ಯಾಂಡ್’ ನಿಂದ `ಲಚ್ಚವ್ವ’ನ ಪರದಾಟದತನಕ ಏಳು `ಕಥಾಸಂಗಮ’

ಬೆಂಗಳೂರು, ಡಿ ೦೬ (ಯುಎನ್‌ಐ) ಚಲನಚಿತ್ರಗಳನ್ನು ಈ ಬಗೆಯ ವಿಶಿಷ್ಟ ದೃಷ್ಟಿಕೋನದಿಂದ ನೋಡಬಹುದು ಎಂದು ತೋರಿಸಿಕೊಟ್ಟ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ರಿಷಬ್ ಶೆಟ್ಟಿ ಒಂದೊಳ್ಳೆ ಚಿತ್ರ ಅರ್ಪಿಸಿದ್ದು, ಒಂದೇ ಟಿಕೆಟ್‌ನಲ್ಲಿ ೭ ಸಿನಿಮಾಗಳ ಸಂಗಮವನ್ನು ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ

ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ ಹೆಚ್ ಪ್ರಕಾಶ್ ಹಾಗೂ ಪ್ರದೀಪ್ ಎನ್ ಆರ್ ನಿರ್ಮಿಸಿರುವ ’ಕಥಾ ಸಂಗಮ’ ಬಿಡುಗಡೆಯಾಗಿದ್ದು, ಮೊದಲ ದಿನ ತುಂಬಿದ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ

ನಿತ್ಯ ನಮ್ಮ ಸುತ್ತ ಅಥವಾ ನಮ್ಮ ಮನೆಗಳಲ್ಲಿ ನಡೆಯುವ ಕಥೆಗಳನ್ನು ಅತ್ಯಂತ ಸಹಜವಾಗಿ, ಮನೋಜ್ಞವಾಗಿ, ಹೃದಯಕ್ಕೆ ಮುಟ್ಟುವಂತೆ ೭ ಕಥಾಚಿತ್ರಗಳೂ ಮೂಡಿಬಂದಿವೆ

ಪುಟ್ಟ ಮಗಳಲ್ಲಿ ಕಣ್ಣಲ್ಲಿ ಮೂಡುವ ಸಂತಸದ ಕಾಮನಬಿಲ್ಲು ಕಾಣಲು ತವಕಿಸುವ ಅಪ್ಪ ಸೃಷ್ಟಿಸುವ ’ರೈನ್‌ಬೋ ಲ್ಯಾಂಡ್’, ನಿವೃತ್ತಿಯ ನೋವಿನಲ್ಲಿ, ಭ್ರಮೆಯಲ್ಲಿ ಮುಳುಗುವ ವ್ಯಕ್ತಿಯ ’ಸತ್ಯಕಥಾ ಪ್ರಸಂಗ’, ಕನಸಿನಲ್ಲಿ ಕಂಡ ಘಟನೆಯೇ ಮರುದಿನ ಸತ್ಯವಾಗಿ ಗಿರಕಿ ಹೊಡೆಸುವ ’ಗಿರಗಿಟ್ಲೆ’, ಬಣ್ಣಕಟ್ಟಿದ ಚರ್ಚೆಗಳ ನಡುವೆ ವಾಸ್ತವಕ್ಕೇಕೆ ಬೆಲೆಯಿಲ್ಲವೆಂದು ಪ್ರಶ್ನಿಸುವ ’ಉತ್ತರ’, ಸ್ವಾತಂತ್ರ್ಯ ಸಂಗ್ರಾಮದ ಅವಧಿಯ ಕಥೆ ’ಪಡುವಾರಹಳ್ಳಿ’, ವೇಷ ನೋಡಿ ಮೋಸ ಹೋಗದಿರು ಎಂಬ ಸಂದೇಶ ಸಾರುವ ’ಸಾಗರ ಸಂಗಮ’, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ಕಳೆದು ಹೋಗುವ ’ಲಚ್ಚವ್ವ’ನ ಕಥೆಗಳು ಚಿಂತನೆಗೆ ಹಚ್ಚುತ್ತವೆ, ಮನರಂಜಿಸುತ್ತವೆ, ಪಾತ್ರಗಳು ಹೃದಯಕ್ಕೆ ಹತ್ತಿರವಾಗುತ್ತವೆ.

ಪ್ರತಿಯೊಂದು ಕಥೆಗಳನ್ನೂ ಎಚ್ಚರಿಕೆಯಿಂದ ಆಯ್ದುಕೊಳ್ಳಲಾಗಿದೆ.

ಕೊನೆಯ ಕಥೆ ’ಲಚ್ಚವ್ವ’ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಹುಶಃ ಸಹಜತೆ, ಮುಗ್ಧತೆಯ ಜತೆಗೆ ಎಂದೂ ಬಣ್ಣ ಹಚ್ಚದ ಲಚ್ಚವ್ವನ ಪಾತ್ರಧಾರಿಯ ಅಭಿನಯವೇ ಈ ಕಥೆಯ ಹೈಲೈಟ್

ಏಳು ಚಿತ್ರಕಥೆಗಳ ಏಳು ನಿರ್ದೇಶಕರ ಪರಿಶ್ರಮ, ಅವರೆಲ್ಲರನ್ನೂ ಕಲೆಹಾಕಿ ಚಿತ್ರ ನಿರ್ಮಿಸಿದ ರಿಷಬ್ ಶೆಟ್ಟಿ ಪ್ರಯತ್ನ ಸಾರ್ಥಕವಾಗಿದೆ ಎನ್ನಬಹುದು.

ಕಿಶೋರ್, ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ, ಪ್ರಕಾಶ್ ಬೆಳವಾಡಿ, ಸೌಮ್ಯ, ಜಗನ್ಮೂರ್ತಿ, ವಸು ದೀಕ್ಷಿತ್, ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್, ಅವಿನಾಶ್, ಹರಿ ಸಮಶ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.

ಯುಎನ್‌ಐ ಎಸ್‌ಎ ವಿಎನ್ ೧೬೩೬