Wednesday, May 27 2020 | Time 02:37 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Entertainment Share

'ಸತ್ತೆ ಪೆ ಸತ್ತಾ' ರಿಮೇಕ್ ನಲ್ಲಿ ಹೃತಿಕ್-ದೀಪಿಕಾ!

ಮುಂಬೈ, ಜುಲೈ 10 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ 'ಸತ್ತೆ ಪೆ ಸತ್ತಾ' ಚಿತ್ರದ ಅವತರಣಿಕೆಯಲ್ಲಿ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ.
ರೋಹಿತ್ ಶೆಟ್ಟಿ ಹಾಗೂ ಫರಾ ಖಾನ್ ಒಟ್ಟಾಗಿ 'ಸತ್ತೆ ಪೆ ಸತ್ತಾ' ಅವತರಣಿಕೆ ಹೊರತರುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮುಖ್ಯ ಭೂಮಿಕೆಯಲ್ಲಿ 'ಸತ್ತೆ ಪೆ ಸತ್ತಾ' ಚಿತ್ರದಲ್ಲಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಚಿತ್ರ ಯಶಸ್ವಿಯಾಗಿತ್ತು.
ಈ ಹಿಂದೆ ಅಮಿತಾಬ್ ಪಾತ್ರಕ್ಕಾಗಿ ಶಾರುಖ್ ಖಾನ್ ಹಾಗೂ ಹೇಮಾ ಮಾಲಿನಿ ಆಗಿ ಕತ್ರಿನಾ ಕೈಫ್ ಸಹಿ ಮಾಡಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್ ದಲ್ಲಿ ಹರಿದಾಡುತ್ತಿತ್ತು. ಆದರೀಗ ಹೃತಿಕ್ ಹಾಗೂ ದೀಪಿಕಾ ಈ ಚಿತ್ರ ಒಪ್ಪಿಕೊಂಡಿದ್ದಾರಂತೆ.
ದೀಪಿಕಾ ಹಾಗೂ ಹೃತಿಕ್ ಒಟ್ಟಿಗೆ ನಟಿಸುವ ಇಚ್ಛೆಯನ್ನು ಅನೇಕ ಬಾರಿ ವ್ಯಕ್ತಪಡಿಸಿದ್ದರು. ಈ ಚಿತ್ರದ ಮೂಲಕ ಇಬ್ಬರು ಜೊತೆಯಾಗಿ ಅಭಿನಯಿಸುವ ಅವಕಾಶ ಒಂದು ಅವರಿಗೆ ಒಲಿದು ಬಂದಿದೆ.
ಹೃತಿಕ್ ಮತ್ತು ದೀಪಿಕಾ ಈ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತಾರೆಂಬುದು ಫರಾ ಹಾಗೂ ರೋಹಿತ್‌ ಅವರ ಲೆಕ್ಕಾಚಾರವಂತೆ.
ಫರಾ ಖಾನ್ ಚಿತ್ರಕಥೆ ಹೇಳಿದ ತಕ್ಷಣವೇ ದೀಪಿಕಾ ಸಮ್ಮತಿ ಸೂಚಿಸಿದ್ದಾರೆಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿವೆ. ಆದರೆ, ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಂದಿಲ್ಲ.
ಯುಎನ್ಐ ಪಿಕೆ ಎಸ್ಎಚ್ 1902
More News
ಸ್ವಾಭಿಮಾನದ  ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

26 May 2020 | 4:40 PM

ಬೆಂಗಳೂರು, ಮೇ 26 (ಯುಎನ್‍ಐ) ಕನ್ನಡದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಾಧಿಸಿದ ಗೆಲುವಿಗೆ ಮೇ 23ಕ್ಕೆ ಒಂದು ವರ್ಷ ತುಂಬಿದೆ.

 Sharesee more..