Sunday, Nov 1 2020 | Time 00:29 Hrs(IST)
Entertainment Share

‘ಸರ್ಕಾರು ವಾರಿ ಪಾಟ’ ಸ್ಯಾಟ್ ಲೈಟ್ ಹಕ್ಕು ಅಧಿಕ ಮೊತ್ತಕ್ಕೆ ಮಾರಾಟ

ಹೈದರಾಬಾದ್, ಸೆ 15 (ಯುಎನ್‍ಐ) 'ಸರಿಲೇರು ನೀಕೆವ್ವರು' ಚಿತ್ರದ ಬಳಿಕ ಮಹೇಶ್ ಬಾಬು ನಟಿಸುತ್ತಿರುವ ಚಿತ್ರ 'ಸರ್ಕಾರು ವಾರಿ ಪಾಟ'. ಫಸ್ಟ್ ಲುಕ್ ಪೋಸ್ಟರ್, ಮೋಷನ್ ಪೋಸ್ಟರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಟಾಲಿವುಡ್ ಇಂಡಸ್ಟ್ರಿ ಪಾಲಿಗೆ ಹೊಸ ದಾಖಲೆ ಸೃಷ್ಟಿಸಿಲಿದೆ ಎಂದು ಹೇಳಲಾಗುತ್ತಿದೆ.

ಬರಿ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರಕ್ಕೆ ಭಾರಿ ಬೇಡಿಕೆ ಸಿಕ್ಕಿದ್ದು, ಶೂಟಿಂಗ್ ಮುಕ್ತಾಯವಾಗುವುದಕ್ಕೂ ಮೊದಲೇ ಸ್ಯಾಟ್‌ಲೈಟ್ ಹಕ್ಕು ದೊಡ್ಡ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿ ತೆಲುಗು ಸಿನಿನಗರಿಯಲ್ಲಿ ಚರ್ಚೆಯಾಗುತ್ತಿದೆ.

ಮಹೇಶ್ ಬಾಬು ನಟಿಸುತ್ತಿರುವ ಇನ್ನು ಬಿಡುಗಡೆಯಾಗದ ಸರ್ಕಾರು ವಾರಿ ಪಾಟು ಚಿತ್ರದ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು 35 ಕೋಟಿಗೆ ಸೇಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಮಹೇಶ್ ಬಾಬು ಚಿತ್ರಗಳ ಪೈಕಿ ಅತಿ ಹೆಚ್ಚು ಬೆಲೆ ಎಂದು ಹೇಳಲಾಗಿದೆ.

ಮಹೇಶ್ ಬಾಬು ನಟನೆಯಲ್ಲಿ ಕೊನೆಯದಾಗಿ ತೆರೆಕಂಡ ಸಿನಿಮಾ 'ಸರಿಲೇರು ನೀಕೆವ್ವರು'. ಬಾಕ್ಸ್ ಆಫೀಸ್‌ನಲ್ಲಿಯೂ ಕಲೆಕ್ಷನ್ ಜೋರಾಗಿ ಮಾಡಿತ್ತು. ಈ ಚಿತ್ರಕ್ಕೆ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು 24.5 ಕೋಟಿ ಗೆ ಮಾರಾಟವಾಗಿದೆ.

2019ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಮಹರ್ಷಿ. ವಂಶಿ ನಿರ್ದೇಶನ ಮಾಡಿದ್ದ ಈ ಚಿತ್ರವು ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಚಿತ್ರದ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು 27.5 ಕೋಟಿಗೆ ಮಾರಾಟವಾಗಿತ್ತು.
'ಗೀತಾ ಗೋವಿಂದಂ' ಚಿತ್ರ ನಿರ್ದೇಶನ ಮಾಡಿದ್ದ ಪರುಶರಾಮ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕೀರ್ತಿ ಸುರೇಶ್ ಚಿತ್ರಕ್ಕೆ ನಾಯಕಿ ಎಂದು ಹೇಳಲಾಗಿದ್ದು, ಎರಡನೇ ನಾಯಕಿಯಾಗಿ ಅನನ್ಯ ಪಾಂಡೆ ಇರಲಿದ್ದಾರೆ. ದಸರಾ ಹಬ್ಬದ ನಂತರ ಚಿತ್ರೀಕರಣ ಶುರುವಾಗಿ ಮುಂದಿನ ವರ್ಷದ ದಸರಾ ಹಬ್ಬಕ್ಕೆ ತೆರೆ ಕಾಣಲಿದೆ.
ಯುಎನ್‍ಐ ಎಸ್ಎ 1831
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..