Sunday, Oct 24 2021 | Time 02:10 Hrs(IST)
Entertainment Share

‘ಭಜರಂಗಿ’ ದರ್ಶನ ಸದ್ಯಕ್ಕಿಲ್ಲ

ಬೆಂಗಳೂರು, ಆಗಸ್ಟ್ 30(ಯುಎನ್ಐ) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ರಿಲೀಸ್ ಸದ್ಯಕ್ಕಿಲ್ಲ ಎಂದು ತಿಳಿದುಬಂದಿದ್ದು, ಮತ್ತೊಮ್ಮೆ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಕುರಿತು ನಟ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ''ಹೊರರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗಿದೆ. ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಬೇರೆ ಇದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದು ನಿರ್ಮಾಪಕರ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ, ಸದ್ಯಕ್ಕೆ ಭಜರಂಗಿ 2 ಆಗುತ್ತಿಲ್ಲ'' ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
''ಥಿಯೇಟರ್ ತುಂಬಾ ಜನ ಇದ್ದಾಗ ಆ ಸಿನಿಮಾ ನೋಡೋಕೆ ಒಂದು ಮಜಾ ಇರುತ್ತೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗ್ತಿಲ್ಲ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಆದಷ್ಟೂ ಬೇಗ ಬಿಡುಗಡೆ ಮಾಡಲು ನಾವು ಪ್ರಯತ್ನ ಪಡ್ತೇವೆ. ತುಂಬಾ ವಿಳಂಬವನ್ನೂ ಮಾಡಲ್ಲ'' ಎಂದು ಶಿವರಾಜ್ ಕುಮಾರ್ ವಿನಂತಿಸಿದ್ದಾರೆ.
''ಸೆಪ್ಟೆಂಬರ್ 1ಕ್ಕೆ ಭಜರಂಗಿ 2 ಟ್ರೈಲರ್ ಹಾಗೂ ಸೆಪ್ಟೆಂಬರ್ 10ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೀಗ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಹೇಳ್ತೇವೆ, ಟ್ರೈಲರ್ ಬಿಡುಗಡೆ ಮಾಡಿದಾಗ ಅದರಲ್ಲೇ ರಿಲೀಸ್ ದಿನಾಂಕ ಪ್ರಕಟಿಸುತ್ತೇವೆ'' ಎಂದು ಹ್ಯಾಟ್ರಿಕ್ ಹೀರೋ ಮಾಹಿತಿ ನೀಡಿದ್ದಾರೆ.
ಈ ಚಿತ್ರಕ್ಕಾಗಿ ಎಲ್ಲರೂ ಕಷ್ಟಪಟ್ಟಿದ್ದಾರೆ. ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಕಲಾವಿದರು, ತಂತ್ರಜ್ಞರು ಎಲ್ಲರೂ ಶ್ರಮ ಹಾಕಿದ್ದಾರೆ. ಈ ಕೋವಿಡ್ ಸಮಯದಲ್ಲೂ ಅದನ್ನೆಲ್ಲಾ ಮೀರಿ ಸಿನಿಮಾ ಮುಗಿಸಿದ್ದೇವೆ. ಆಂಜನೇಯ ಸ್ವಾಮಿ ಆಶೀರ್ವಾದದಿಂದ ಭಜರಂಗಿ ಮುನ್ನುಗ್ಗಿ ಬಂದಿದೆ. ನಾವು ಪಟ್ಟ ಕಷ್ಟ ನಿಮಗೆ ಆಗಬಾರದು, ನೀವು ಆರಾಮಾಗಿ ಬಂದು ಸಿನಿಮಾ ನೋಡ್ಬೇಕು. ನಮ್ಮ ಕಷ್ಟಕ್ಕೆ ನೀವು ತಕ್ಕ ಪ್ರತಿಫಲ ನೀಡ್ತೀರಾ ಎಂಬ ಭರವಸೆ ಇದೆ'' ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಯುಎನ್ಐ ಎಸ್ಎ 1510
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..