Sunday, Oct 24 2021 | Time 02:24 Hrs(IST)
Entertainment Share

‘ಅಣ್ಣಬೆಲ್ಲೆ ಸೇತುಪತಿ’ ಸೆ. 17ರಂದು ರಿಲೀಸ್

ಮುಂಬೈ, ಆಗಸ್ಟ್ 31(ಯುಎನ್ಐ) ವಿಜಯ್ ಸೇತುಪತಿ ಮತ್ತು ತಾಪ್ಸಿ ಪನ್ನು ಅಭಿನಯದ ಬಹುಭಾಷಾ ಫ್ಯಾಂಟಸಿ ಕಾಮಿಡಿ ಕಥಾಹಂದರದ 'ಅಣ್ಣಬೆಲ್ಲೆ ಸೇತುಪತಿ' ಸೆಪ್ಟೆಂಬರ್ 17 ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ದೀಪಕ್ ಸುಂದರರಾಜನ್ ನಿರ್ದೇಶಿಸಿರುವ ಈ ಚಿತ್ರವು ಸೇತುಪತಿ ಮತ್ತು ತಾಪ್ಸಿ ಪನ್ನು ಜೋಡಿಯ ಮೊದಲ ಚಿತ್ರವಾಗಿದೆ. ಈ ಚಿತ್ರದಲ್ಲಿ 43 ವರ್ಷ ವಯಸ್ಸಿನ ಸೇತುಪತಿ 'ರೊಮ್ಯಾಂಟಿಕ್ ಕಿಂಗ್' ಆಗಿ ಕಾಣಿಸಿಕೊಂಡಿದ್ದು, ಪನ್ನು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ಯುನ್ನತ ಪ್ರತಿಭಾನ್ವಿತ ಪಾತ್ರವರ್ಗ, ಶೀರ್ಷಿಕೆ, 'ವಿಶೇಷ ಕಥೆ' ಪ್ರೇಕ್ಷಕರನ್ನು ರಂಜಿಸಲಿದೆ. ಫ್ಯಾಂಟಸಿ, ಹಾಸ್ಯವಲವಲದೆ ನಗು ಅಳು, ಭಯ, ಪ್ರೀತಿ, ಪ್ರೇಮ, ರೋಮಾಂಚದ ಭಾವನೆಗಳು ಚಿತ್ರದಲ್ಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. " ಇದು ಅತಿದೊಡ್ಡ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ತನ್ನ ಪ್ರೀಮಿಯರ್ ಪ್ರೀಮಿಯರ್ ಅನ್ನು ಪ್ರದರ್ಶಿಸುವುದರಿಂದ ಹೆಚ್ಚಿನ ಜನರು ತಮ್ಮ ಮನೆಯಲ್ಲೇ ಕುಳಿತು ಚಿತ್ರವನ್ನು ಆನಂದಿಸಬಹುದು ಎಂದು ನಾನು ರೋಮಾಂಚನಗೊಂಡಿದ್ದೇನೆ ಎಂದು ನಿರ್ದೇಶಕ ದೀಪಕ್ ಸುಂದರರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ಯಾಶನ್ ಸ್ಟುಡಿಯೋಸ್ ನ ಸುಧನ್ ಸುಂದರಂ ಮತ್ತು ಜಯರಾಮ್ ನಿರ್ಮಿಸಿರುವ ಈ ಚಿತ್ರ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. 'ಅಣ್ಣಬೆಲ್ಲೆ ಸೇತುಪತಿ' 'ಅತಿದೊಡ್ಡ ಫ್ಯಾಮಿಲಿ ಎಂಟರ್‌ಟೈನರ್' ಆಗಲಿದೆ ಎಂಬ ವಿಶ್ವಾಸವನ್ನು ತಂಡ ಹೊಂದಿರುವುದಾಗಿ ಹೇಳಿದ್ದಾರೆ. ಸೋಮವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ಜಗಪತಿ ಬಾಬು, ರಾಜೇಂದ್ರ ಪ್ರಸಾದ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್, ಯೋಗಿ ಬಾಬು, ವೆನ್ನೆಲಾ ಕಿಶೋರ್, ಜಾರ್ಜ್ ಮರಿಯನ್ ಮತ್ತು ದೇವದರ್ಶಿನಿ ಮುಂತಾದವರಿದ್ದಾರೆ.

ಯುಎನ್ಐ ಎಸ್ಎ 1116
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..