Thursday, Dec 9 2021 | Time 00:18 Hrs(IST)
Entertainment Share

“ಕನ್ನೇರಿ” ಚಿತ್ರದ "ಬೆಟ್ಟದ ಕಣಿವೆಗಳ" ಸಾಂಗ್ ರಿಲೀಸ್

“ಕನ್ನೇರಿ” ಚಿತ್ರದ
ಬೆಂಗಳೂರು, ಅ. 23(ಯುಎನ್ಐ) ನೀನಾಸಂ ಮಂಜು ನಿರ್ದೇಶನದ ಕನ್ನೇರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರದ ಹಾಡನ್ನು ಚಂದನವನದ ದಂತದ ಗೊಂಬೆ ಶ್ರುತಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.ಬೆಟ್ಟದ ಕಣಿವೆಗಳ ಎಂಬ ಜನಪದ ಗೀತೆಗೆ ಮಾಡ್ರನ್ ಟಚ್ ಕೊಟ್ಟು ಹಾಡನ್ನು ತಯಾರಿಸಲಾಗಿದೆ. ಅದ್ಭುತ ಮ್ಯೂಸಿಕ್, ಕ್ಯಾಚಿ‌ ಲಿರಿಕ್ಸ್ ನ ಬೆಟ್ಟದ ಕಣಿವೆಗಳ ಹಾಡು ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ.ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ.

ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.

ಯುಎನ್ಐ ಎಸ್ಎ 1703
More News
ಜಾಕ್ವೆಲಿನ್ ಫರ್ನಾಂಡಿಸ್ ವಿದೇಶಿ ಪ್ರವಾಸಕ್ಕೆ ತಡೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ

ಜಾಕ್ವೆಲಿನ್ ಫರ್ನಾಂಡಿಸ್ ವಿದೇಶಿ ಪ್ರವಾಸಕ್ಕೆ ತಡೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ

06 Dec 2021 | 7:01 AM

ಮುಂಬೈ, ಡಿ 6 (ಯುಎನ್ಐ) ಭಾನುವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳದಂತೆ ತಡೆಹಿಡಿಯಲಾಗಿದೆ.

 Sharesee more..