Sunday, Oct 24 2021 | Time 02:08 Hrs(IST)
Entertainment Share

"ಆನ್ ಲೈನ್ ಕ್ಲಾಸ್"

ಬೆಂಗಳೂರು, ಆಗಸ್ಟ್ 30(ಯುಎನ್ಐ) ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೊರೋನಾ ಹೆಚ್ಚಿನ ಪರಿಣಾಮ ಬೀರಿದ್ದು, ಶಾಲೆ ಮುಖ ನೋಡಿ ವರ್ಷಗಳೇ ಕಳೆದಿದೆ. ಆನಲೈನ್ ಕ್ಲಾಸ್ ಗೆ ಮಕ್ಕಳು ಮೊರೆ ಹೋಗಿದ್ದಾರೆ. ಅದರಿಂದ ಆಗುವ ಪರಿಣಾಮವನ್ನು ಹಾಡಿನ ಮೂಲಕ ಹೇಳ ಹೊರಟಿದ್ದಾರೆ ರ್ಯಾಪರ್ ಗಜೇಂದ್ರ ಗುರು.
ಪ್ರಖ್ಯಾತ ಡಿಸೈನರ್ ಲಕ್ಷ್ಮೀಕೃಷ್ಣ ಪುತ್ರ ವಿಯಾನ್ ಕೃಷ್ಣ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗಜೇಂದ್ರ ಗುರು ಅವರು ಮೈಸೂರಿನ ಬಗ್ಗೆ ಮಾಡಿದ್ದ ರ್ಯಾಪ್ ಸಾಂಗ್ ಕೂಡ ಭಾರಿ ಹಿಟ್ ಆಗಿತ್ತು.
ಪ್ರಸ್ತುತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತಾಗಿರುವ " ಆನ್ ಲೈನ್ ಕ್ಲಾಸ್" ಹೆಸರಿನ ರ್ಯಾಪ್ ಸಾಂಗ್, "ಏನಪ್ಪ ಗತಿ ಬಂತು ವಿದ್ಯಾರ್ಥಿಗಳಿಗೆ" ಎಂದು ಆರಂಭವಾಗುತ್ತದೆ.
ರಂಗನಾಯಕಿ, ಅಮೃತಮತಿ, ಗಿಫ್ಟ್ ಬಾಕ್ಸ್ ಸೇರಿದಂತೆ ಕನ್ನಡದ 70ಕ್ಕೂ ಅಧಿಕ ಚಲನಚಿತ್ರಗಳಿಗೆ ಪ್ರಚಾರಕಲೆ(ಡಿಸೈನರ್) ನೀಡಿರುವ ಲಕ್ಷ್ಮೀ ಕೃಷ್ಣ ಪುತ್ರ ವಿಯಾನ್ ಕೃಷ್ಣ ಈ ಸಾಂಗ್ ನ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಲಕ್ಷ್ಮೀ ಕೃಷ್ಣ ಹಾಗೂ ಅವರ ಪತಿ ಕೃಷ್ಣಕಾಂತ್ ರವಿ ಕೂಡ ಮಗನ ಜೊತೆ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ದಿಶಾ ರವಿ, ರೋಹನ್, ಸಿಂಚನ ಮುಂತಾದವರ ಅಭಿನಯ ಕೂಡ ಈ ಹಾಡಿನಲ್ಲಿದೆ. ಶ್ರೀಮೂರ್ತಿ ಛಾಯಾಗ್ರಹಣವಿದ್ದು, ಮನು ರಾವ್ ಸಂಗೀತ ನೀಡಿದ್ದಾರೆ.

ಯುಎನ್ಐ ಎಸ್ಎ 1123
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..