Monday, Sep 20 2021 | Time 08:21 Hrs(IST)
National Share

"ನಾನು ತಮಿಳು ಭಾಷೆ, ಸಂಸ್ಕೃತಿಯ ಅಭಿಮಾನಿ": ಮೋದಿ

ನವದೆಹಲಿ, ಜೂ 27 (ಯುಎನ್ಐ) ತಾವು "ತಮಿಳು ಸಂಸ್ಕೃತಿ ಮತ್ತು ಭಾಷೆಯ" ದೊಡ್ಡ ಅಭಿಮಾನಿ ಮತ್ತು ಪ್ರತಿಯೊಬ್ಬ ಭಾರತೀಯರು ವಿಶ್ವದ ಅತ್ಯಂತ ಪ್ರಾಚೀನ ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್” ಮೂಲಕ ದೇಶವಾಸಿಗಳೊಂದಿಗೆ ಮಾತನಾಡಿದ ಅವರು, “ನಾನು ತಮಿಳು ಸಂಸ್ಕೃತಿ, ಭಾಷೆಯ ದೊಡ್ಡ ಅಭಿಮಾನಿ. ಅದು ವಿಶ್ವದ ಅತ್ಯಂತ ಹಳೆಯ ಭಾಷೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆ ನಮ್ಮ ದೇಶಕ್ಕೆ ಸೇರಿದೆ" ಎಂದು ಹೆಮ್ಮೆ ಪಡುತ್ತೇನೆ.
ಚೆನ್ನೈನ ಗುರು ಪ್ರಸಾದ್ ಅವರ ರೇಡಿಯೊ ಕಾರ್ಯಕ್ರಮದ ನಿಯಮಿತ ಕೇಳುಗರಿಂದ ತನಗೆ ಬಂದ ಪತ್ರದ ಕುರಿತು ಮಾತನಾಡಿದ ಪ್ರಧಾನಿ, ಅವರು ತಮಿಳುನಾಡಿನ ಬಗ್ಗೆ 'ಮನ್ ಕಿ ಬಾತ್' ನಲ್ಲಿ ಮಾತನಾಡಿದ್ದನ್ನೆಲ್ಲ ಸಂಕಲಿಸುವ ಮೂಲಕ ಇ-ಬುಕ್ ಸಿದ್ಧಪಡಿಸಿದ್ದಾರೆ. ಅದನ್ನು ನಮೋ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ಎಂದರು.
ಯುಎನ್ಐ ಎಸ್ಎಚ್ 1815