Sunday, Sep 26 2021 | Time 19:04 Hrs(IST)
Entertainment Share

'ಬಾಲಿಕಾ ವಧು' ಖ್ಯಾತಿಯ ಸುರೇಖಾ ಸಿಖ್ರಿ ಇನ್ನಿಲ್ಲ

'ಬಾಲಿಕಾ ವಧು' ಖ್ಯಾತಿಯ ಸುರೇಖಾ ಸಿಖ್ರಿ ಇನ್ನಿಲ್ಲ
'ಬಾಲಿಕಾ ವಧು' ಖ್ಯಾತಿಯ ಸುರೇಖಾ ಸಿಖ್ರಿ ಇನ್ನಿಲ್ಲ

ಮುಂಬೈ, ಜುಲೈ 16(ಯುಎನ್‌ ಐ) ಬಾಲಿಕಾ ವಧು ಖ್ಯಾತಿಯ ಲೆಜೆಂಡೆರಿ ನಟಿ ಸುರೇಖಾ ಸಿಖ್ರಿ (75) ನಿಧನಹೊಂದಿದ್ದಾರೆ. ಹೃದಯಾಘಾತದಿಂದ ಸಿಖ್ರಿ ಇಹ ಲೋಕ ತ್ಯಜಿಸಿದ್ದಾರೆ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ. 2020 ರಲ್ಲಿ ಆಕೆ ಎರಡನೇ ಬಾರಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದರು. ಅಂದಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ ಶುಕ್ರವಾರ ನಿಧನ ಹೊಂದಿದ್ದಾರೆ.

'ಕಿಸ್ಸಾ ಕುರ್ಸಿ ಕಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುರೇಖಾ ಸಿಖ್ರಿ ಅತ್ಯುತ್ತಮ ನಟನೆಗಾಗಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದರು. ಬಾಲಿಕಾ ವಧು ಧಾರಾವಾಹಿ ಮೂಲಕ ಸಿಖ್ರಿ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿದ್ದರು.

2018 ರಲ್ಲಿ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಸ್ನಾನದ ಕೊಠಡಿಯಲ್ಲಿ ಜಾರಿಬಿದ್ದ ನಂತರ ಸುರೇಖ ಸಿಖ್ರಿ ಮೊದಲ ಬಾರಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದರು. ನಂತರ ಚೇತರಿಸಿಕೊಂಡ ಎರಡು ವರ್ಷಗಳ ನಂತರ ಮತ್ತೊಮ್ಮೆ ಬ್ರೈನ್ ಸ್ಟ್ರೋಕ್ ಒಳಗಾಗಿದ್ದರಿಂದ ಆಕೆಯ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಅಂದಿನಿಂದ ನಟನೆಯಿಂದ ದೂರ ಸರಿದಿದ್ದ ಸುರೇಖಾ ಸಿಖ್ರಿ ಕೊನೆಯ ಬಾರಿಗ ಆಂಥಾಲಜಿ ಘೋಸ್ಟ್ ಸ್ಟೋರೀಸ್‌ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಯುಎನ್‌ ಐ ಕೆವಿಆರ್‌ 1132

More News

ಗಾನ ಕೋಗಿಲೆಯ ವಿದಾಯಕ್ಕೆ ಒಂದು ವರ್ಷ

25 Sep 2021 | 4:48 PM

 Sharesee more..

ಡಾರ್ಲಿಂಗ್ ಕೃಷ್ಣಾಗೆ ಮೇಘಾ ಶೆಟ್ಟಿ ಜೋಡಿ!

25 Sep 2021 | 3:59 PM

 Sharesee more..

"ಬಾಬು ಮಾರ್ಲಿ" ಮುಂದಿನ ತಿಂಗಳು ತೆರೆಗೆ

24 Sep 2021 | 4:45 PM

 Sharesee more..