Sunday, Oct 24 2021 | Time 03:13 Hrs(IST)
Entertainment Share

'ತುರಿಯಾ ಮಾತುಕತೆ’ ಗಾಯಕಿ ಅನುರಾಧಾ ಪೌಡ್ವಾಲ್ ಜೊತೆ

ಕೋಲ್ಕತ್ತಾ, ಆಗಸ್ಟ್ 30 (ಯುಎನ್ಐ) ತುರಿಯಾ ಟಾಕ್ಸ್ ನ ಸೀಸನ್ 8 ರ "ಸಾರ್ವಕಾಲಿಕ ಪ್ರಸಿದ್ಧ ಬಾಲಿವುಡ್ ಗಾಯಕರೊಂದಿಗೆ ಸಂಭಾಷಣೆಯ 11 ನೇ ಸಂಚಿಕೆಯಲ್ಲಿ ಅನುರಾಧಾ ಪೌಡ್ವಾಲ್ ಅತಿಥಿಯಾಗಿದ್ದು, ತಮ್ಮ ಸಂಗೀತ ಹಾಗೂ ಸಮಾಮುಖಿ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅನುರಾಧಾ ಪೌಡ್ವಾಲ್ ಬಾಲಿವುಡ್ ಹಿನ್ನೆಲೆ ಗಾಯಕಿ. ಪದ್ಮಶ್ರೀ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಅವರ ವೃತ್ತಿಜೀವನದಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಹಾಡಿರುವ ಭಜನೆಗಳು, ದೇವರನಾಮಗಳನ್ನು ಕೇಳದವರೇ ಇಲ್ಲ ಎನ್ನಬಹುದು. ಇಂತಹ ಅದ್ಭುತ ಪ್ರತಿಭಾನ್ವಿತೆಯಾದ ಈಕೆ, ಕೆಲ ವೈದ್ಯಕೀಯ ಕೇಂದ್ರಗಳ ಸಂಸ್ಥಾಪಕಿ ಮಾತ್ರವಲ್ಲದೆ ಭಾರತದಾದ್ಯಂತ ಹಿಂದುಳಿದ ಸಮುದಾಯಗಳಿಗೆ ದೇಣಿಗೆ ನೀಡುವ ಹಲವಾರು ಕಲ್ಯಾಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ತುರಿಯಾ ಟಾಕ್ಸ್ ಜೊತೆಗೆ ತಮ್ಮ ಹಾಡುಗಾರಿಕೆ ಆರಂಭದ ದಿನಗಳನ್ನು ನೆನಪಿಸಿಕೊಂಡಿರುವ ಅವರು, ಹಿನ್ನೆಲೆ ಗಾಯನದಂತಹ ವೃತ್ತಿಜೀವನದ ಆರಂಭದಲ್ಲಿ ಎದುರಿಸಬೇಕಾಗಿದ್ದ ಕಷ್ಟಗಳು ಮತ್ತು ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಗಾಯಕರು ಯಾರು ಮತ್ತು ಅವರು ಯಾವ ಗಾಯಕರನ್ನು ಬಾಲ್ಯದಲ್ಲಿ ಆರಾಧಿಸಿದರು ಎಂಬ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಶಾಲೆಗಳಿಗಾಗಿ ಅವರ ಪ್ರಸ್ತುತ ನಿಧಿಸಂಗ್ರಹ ಅಭಿಯಾನ ಆರಂಭಿಸಿರುವ ಪೌಡ್ವಾಲ್, ರಾಜ್ಯದಲ್ಲಿ ಇತ್ತೀಚಿನ ಚಂಡಮಾರುತ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ಈ ಶಾಲೆಗಳು ತೀವ್ರವಾಗಿ ಪ್ರಭಾವಿತವಾಗಿದ್ದು, ಈ ಸಂಬಂಧ ಜನರು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು, ಸಹಾಯ ಸಹಕಾರ ನೀಡಬಹುದು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಯುಎನ್ಐ ಎಸ್ಎ 1947
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..