Sunday, Oct 24 2021 | Time 01:37 Hrs(IST)
Entertainment Share

“ಕಾಂತಾರಾ” ಇಂದಿನಿಂದ ಚಿತ್ರೀಕರಣ

“ಕಾಂತಾರಾ” ಇಂದಿನಿಂದ ಚಿತ್ರೀಕರಣ
ಬೆಂಗಳೂರು, ಆಗಸ್ಟ್ 28(ಯುಎನ್ಐ) ಹೊಂಬಾಳೆ ಫಿಲ್ಮ್ಸ್ ನ ಹನ್ನೊಂದನೇ ಚಿತ್ರ "ಕಾಂತಾರ" ಮುಹೂರ್ತ ನೆರವೇರಿಸಿಕೊಂಡಿದೆ.

ಶುಕ್ರವಾರ ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಅವರೇ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ರಿಷಬ್ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅಚ್ಯುತಕುಮಾರ್, ಕಿಶೋರ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

"ಕಾಂತಾರ" ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸುತ್ತಿದ್ದಾರೆ. ಅವರ ಸಹೋದರ ಮಂಜುನಾಥ್ ಮೊದಲ ಸನ್ನಿವೇಶಕ್ಕೆ ಆರಂಭಫಲಕ ತೋರಿದರು. ಕುಂದಾಪುರದ uva ಗ್ರೂಪ್ಸ್ ನ ಛೇರ್ಮನ್ ಉದಯ್ ಶೆಟ್ಟಿ ಕ್ಯಾಮೆರಾ ಚಾಲನೆ ಮಾಡಿದರು.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದ್ದು, ಚಿತ್ರದ ಪ್ರಚಾರ ನಿರ್ವಹಣೆ ಕೆಆರ್ ಜಿ ಕನೆಕ್ಟ್ಸ್ ವಹಿಸಿಕೊಂಡಿದೆ. ಇಂದಿನಿಂದ ಕೆರಾಡಿ ಮತ್ತು ಹೆಮ್ಮಾಡಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಈ ವರ್ಷಾಂತ್ಯದೊಳಗೆ ಚಿತ್ರ ಸಿದ್ದವಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
ಯುಎನ್ಐ 0750
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..