Sunday, Oct 24 2021 | Time 02:43 Hrs(IST)
Entertainment Share

"ಆಪರೇಶನ್ D" ಬಿರುಸಿನ ಚಿತ್ರೀಕರಣ

"ಆಪರೇಶನ್ D"  ಬಿರುಸಿನ ಚಿತ್ರೀಕರಣ
ಬೆಂಗಳೂರು, ಆಗಸ್ಟ್ 30(ಯುಎನ್ಐ) ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ 'ಆಪರೇಶನ್ D" ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ.

ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್ ತಿರುಪತಿ, ಬಣ್ಣಬಣ್ಣದ ಲೋಕ, ಮಸ್ತಿ, ಬೀರಬಲ್, ಭಗವಾನ್ ಶ್ರೀ ರಾಮನುಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟರುವ ತಿರುಮಲೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.
ವೇದಿಕ ಹಾಗೂ ದ್ವೈಪಾಯನ‌ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ.
ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ಜೆ.ಹರಿಪ್ರಸಾದ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವಿನೋದ್ ದೇವ್, ಕಮಲಿ ಧಾರಾವಾಹಿ ಖ್ಯಾತಿಯ ಸುಹಾಸ್ ಆತ್ರೇಯ, ರುದ್ರೇಶ್ ಬೂದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ, ಉಳಿದಂತೆ ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಯುಎನ್ಐ ಎಸ್ಎ 1134
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..