Wednesday, Dec 1 2021 | Time 21:52 Hrs(IST)
Karnataka Share

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅ.18 (ಯು.ಎನ್.ಐ.) ರಾಜ್ಯದಲ್ಲಿ ಇದೇ ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.



1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.



ಭೌತಿಕ ತರಗತಿಗಳಲ್ಲಿನ ಹಾಜರಾತಿ ಶೇಕಡ 50ರಷ್ಟು ಮಾತ್ರ ಇರಬೇಕು. ತರಗತಿಯಲ್ಲಿ ಸಾಮಾಜಿಕ ಅಂತರ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳು ಬೌತಿಕ ತರಗತಿಗಳಿಗೆ ಹಾಜರಾಗಬೇಕಾದರೆ ಪೋಷಕರ ಲಿಖಿತ ಅನುಮತಿ ಕಡ್ಡಾಯ. ಮಕ್ಕಳು ಗುಂಪು ಸೇರುವುದು ಸಹಜವಾದ್ದರಿಂದ ಅವರು ಗುಂಪುಗೂಡದಂತೆ ಗಮನ ಹರಿಸಬೇಕು.



ಶಾಲೆ ಆರಂಭಕ್ಕೆ ಮುನ್ನ ಮತ್ತು ಬಿಡುವಾಗ ಸಂದಣಿ ಉಂಟಾಗದಂತೆ ವ್ಯವಸ್ಥೆ ಮಾಡಬೇಕು. ಪ್ರವೇಶದ್ವಾರ ಮತ್ತು ನಿರ್ಗಮಿತ ದ್ವಾರಗಳಲ್ಲಿ ಮಕ್ಕಳನ್ನು ಒಟ್ಟಿಗೆ ಬಿಡಬಾರದು. ಶಾಲೆ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಜರ್ ಇಟ್ಟಿರಬೇಕು.ಶಾಲಾ ಆವರಣ, ತರಗತಿಗಳ ಒಳಾವರಣ ಮತ್ತು ಶೌಚಾಲಯಗಳನ್ನು ಸೋಂಕು ನಿರೋಧಕ ದ್ರವಗಳನ್ನು ಬಳಸಿ ಶುಚಿ ಮಾಡಿರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.



ಶಾಲಾ ಆವರಣದಲ್ಲಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿರಲೇಬೇಕು. ಇಂಥವರನ್ನು ಮಾತ್ರ ಬೋಧಿಸಲು ತರಗತಿ ಒಳಗೆ ಪ್ರವೇಶ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. 50 ವರ್ಚ ಮೇಲ್ಪಟ್ಟ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಮಾಸ್ಕ್ ಜೊತೆ ಹೆಚ್ಚುವರಿ ಮುಖಗವಚ ಧರಿಸಿರಬೇಕು ೆಂದು ಹೇಳಲಾಗಿದೆ.



1 ರಿಂದ 5ನೇ ತರಗತಿಯ ಪುನರಾರಂಭಕ್ಕೆ ಅಗತ್ಯ ಕಾರ್ಯಸೂಚಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಿಡುಗಡೆ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

UNI, KR

More News

ಎಸ್ ಆರ್ ವಿಶ್ವನಾಥ್‌ಗೆ ಬಿಗಿಭದ್ರತೆ

01 Dec 2021 | 5:59 PM

 Sharesee more..
ಬೆಳಗಾವಿಯಲ್ಲಿ  ಸದ್ಯ ಅಧಿವೇಶನ ರದ್ದುಪಡಿಸಿ

ಬೆಳಗಾವಿಯಲ್ಲಿ ಸದ್ಯ ಅಧಿವೇಶನ ರದ್ದುಪಡಿಸಿ

01 Dec 2021 | 5:29 PM

ಸಚಿವಾಲಯದ ನೌಕರರ ಸಂಘದಿಂದ ಮನವಿ

 Sharesee more..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

01 Dec 2021 | 4:37 PM

ಕರ್ನಾಟಕದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವು ನದಿಗಳು ಬಾಕಿ ಇರುವುದರಿಂದ ದಿನದಿಂದ ದಿನಕ್ಕೆ ಚುರುಗೊಳ್ಳುತ್ತಿರುವ ಮತದಾರರ ಓಲೈಕೆ‌ ಪ್ರಕ್ರಿಯೆ.

 Sharesee more..