Monday, Jul 22 2019 | Time 19:52 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
Parliament Share

2006ರ ಮುಂಬೈ ರೈಲು ಸ್ಫೋಟ: ಕಾಂಗ್ರೆಸ್ ವಿರುದ್ಧ ಪಿಯೂಶ್ ಗೋಯಲ್ ಟೀಕಾಪ್ರಹಾರ

2006ರ ಮುಂಬೈ ರೈಲು ಸ್ಫೋಟ: ಕಾಂಗ್ರೆಸ್ ವಿರುದ್ಧ ಪಿಯೂಶ್ ಗೋಯಲ್ ಟೀಕಾಪ್ರಹಾರ
2006ರ ಮುಂಬೈ ರೈಲು ಸ್ಫೋಟ: ಕಾಂಗ್ರೆಸ್ ವಿರುದ್ಧ ಪಿಯೂಶ್ ಗೋಯಲ್ ಟೀಕಾಪ್ರಹಾರ

ನವದೆಹಲಿ, ಜು 12(ಯುಎನ್ಐ) ರೈಲ್ವೆ ಧನಸಹಾಯದ ಬೇಡಿಕೆಗಳ ಕುರಿತ ಮ್ಯಾರಥಾನ್ ಚರ್ಚೆಗೆ ಲೋಕಸಭೆಯಲ್ಲಿಂದು ಉತ್ತರ ನೀಡಿದ ರೈಲ್ವೆ ಸಚಿವ ಪಿಯೂಶ್ ಗೋಯಲ್, 2006, ಜುಲೈ 11ರ ಮುಂಬೈ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

2009ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ 209 ಜನರು ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಮುಂಬೈ ಉಪನಗರ ರೈಲಿನಲ್ಲಿ 2006, ಜುಲೈ 11ರಂದು 11 ನಿಮಿಷಗಳ ಅವಧಿಯಲ್ಲಿ ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು.

ನಿನ್ನೆ ನಾವು ರೈಲ್ವೆಯ ಬಗ್ಗೆ ತಡರಾತ್ರಿವರೆಗೂ ಚರ್ಚೆ ನಡೆಸಿದೆವು...ಗುರುವಾರ ಪ್ರಮುಖ ದಿನವಾಗಿತ್ತು. ನಾನು ಜನಪ್ರತಿನಿಧಿಯಾಗಿ ಬಂದ ಮುಂಬೈ ನಗರದ 2006, ಜುಲೈ 11ರಂದು ಸರಣಿ ಬಾಂಬ್ ಸ್ಫೋಟಕ್ಕೂ ಸಾಕ್ಷಿಯಾಗಿತ್ತು. ಕನಿಷ್ಠ 209 ಮಂದಿ ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದು ಸಚಿವರು ನೆನಪಿಸಿದರು.

ಅದು ವಿಭಿನ್ನ ಕಥೆ, 2006ರಲ್ಲಿ, ಇಷ್ಟು ದೊಡ್ಡ ಘಟನೆಗಳ ಹೊರತಾಗಿಯೂ ಭಯೋತ್ಪಾದಕ ಕೃತ್ಯದ ದುಷ್ಕರ್ಮಿಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ ಇಂತಹದ್ದೊಂದು ಸಂಭವಿಸಿದ್ದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದೆವು ಎಂದು ಹೇಳಿದರು.

ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಲಾಗುತ್ತಿತ್ತು ಎಂದು ಅವರು ಹೇಳಿ, ಯುಪಿಎ ಸರ್ಕಾರದ ಮೇಲೆ ಆರೋಪ ಮಾಡುವ ಭರದಲ್ಲಿ ಶೇಮ್ ಎಂಬ ಪದ ಬಳಸಿದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಸಚಿವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದರು.

ಭಯೋತ್ಪಾದನೆ ಬಗ್ಗೆ 'ಮೃದು' ಧೋರಣೆ ಅನುಸರಿಸಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ವಿರುದ್ಧ ಬಿಜೆಪಿ ಮತ್ತು ಮೋದಿ ಸರ್ಕಾರ ಹೆಚ್ಚಾಗಿ ದೂಷಿಸಿದೆ.

ಫೆಬ್ರವರಿ ತಿಂಗಳಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯ ಬಳಿಕ ಮೋದಿ ಸರ್ಕಾರ ಬಾಲಾಕೋಟ್ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ನಾಶ ಪಡಿಸಿತ್ತು.

ಯುಎನ್ಐ ಎಎಚ್ 1300

More News
ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

19 Jul 2019 | 8:48 PM

ನವದೆಹಲಿ, ಜುಲೈ 19 (ಯುಎನ್‌ಐ) ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗೆ ಉತ್ತರಿಸುವಾಗ ರಫೆಲ್‌, ಅಂಬಾನಿ ಮತ್ತು ಅದಾನಿ ಅವರ ಹೆಸರಿನ ಪ್ರಸ್ತಾಪಕ್ಕೆ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಶುಕ್ರವಾರ ಆಕ್ಷೇಪಿಸಿದರು.

 Sharesee more..
ಕೇಂದ್ರ ಸಚಿವ ಬಲಿಯಾನ್ ಗೆ  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

19 Jul 2019 | 8:41 PM

ನವದೆಹಲಿ, ಜುಲೈ 19( ಯುಎನ್ಐ) ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥ ಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್ ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ.

 Sharesee more..