Monday, Aug 3 2020 | Time 23:16 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

2017ರಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕ್ಷಣವನ್ನು ನೆನೆದ ರಹಾನೆ

ನವದೆಹಲಿ, ಜುಲೈ 13 (ಯುಎನ್ಐ)
ಟೆಸ್ಟ್ ತಂಡದ ನಾಯಕನಾಗುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಸುನೀಲ್‌ ಗವಾಸ್ಕರ್‌ ರಿಂದ ಕಪಿಲ್ ದೇವ್‌; ಮೊಹಮ್ಮದ್‌ ಅಜರುದ್ದಿನ್‌ನಿಂದ ಸೌರವ್‌ ಗಂಗೂಲಿ; ಎಂ.ಎಸ್‌ ಧೋನಿಯಿಂದ ವಿರಾಟ್‌ ಕೊಹ್ಲಿಯವರೆಗೂ ಟೀಮ್ ಇಂಡಿಯಾ ಟೆಸ್ಟ್‌ ತಂಡವನ್ನು ಮುನ್ನಡೆಸಿರುವ ಪ್ರಮುಖ ನಾಯಕರಾಗಿದ್ದಾರೆ.
ವಿಶ್ವದ ಬೇರೆ ತಂಡಗಳಿಗಿಂತ ಭಾರತ ಟೆಸ್ಟ್ ತಂಡದ ಸಾರಥ್ಯ ವಹಿಸುವುದು ವಿಶಿಷ್ಠ ಸಾಧನೆ. ಮುಂಬೈ ಬಲಗೈ ಬ್ಯಾಟ್ಸ್‌ಮನ್‌ ಅಜಿಂಕ್ಯಾ ರಹಾನೆ 2017ರಲ್ಲಿ ಧರ್ಮಶಾರ್ಲಾದಲ್ಲಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಒಮ್ಮೆ ಭಾರತ ತಂಡವನ್ನು ಮುನ್ನಡೆಸಿದ್ದರು. ವೃತ್ತಿ ಜೀವನದ ಮೊದಲ ಪಂದ್ಯದ ನಾಯಕತ್ವದಲ್ಲಿ ರಹಾನೆ ಯಶಸ್ವಿಯಾಗಿದ್ದರು.
ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು, ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು ಹಾಗೂ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಸರಣಿ ಗೆಲುವಿನ ಕೊನೆಯ ಪಂದ್ಯ ಅತ್ಯಂತ ರೋಚಕತೆ ಕೆರಳಿಸಿತ್ತು. ಮೂರನೇ ಟೆಸ್ಟ್‌ನಲ್ಲಿ ಫೀಲ್ಡಿಂಗ್‌ ಮಾಡುವಾದ ನಾಯಕ ವಿರಾಟ್‌ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ, ಧರ್ಮಶಾಲಾದ ಅಂತಿಮ ಟೆಸ್ಟ್‌ಗೆ ಅವರು ಅಲಭ್ಯರಾಗಿದ್ದರು.
ದೀರ್ಘಾವಧಿ ಸ್ವರೂಪದಲ್ಲಿ ವಿರಾಟ್‌ ಕೊಹ್ಲಿಯೊಂದಿಗೆ ಉಪ ನಾಯಕನಾಗಿದ್ದ ಅಜಿಂಕ್ಯಾ ರಹಾನೆ, ಅಂದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಅತ್ಯಮೂಲ್ಯ ಕ್ಷಣವನ್ನು ಇದೀಗ ಬಲಗೈ ಬ್ಯಾಟ್ಸ್‌ಮನ್‌ ಸ್ಮರಿಸಿಕೊಂಡಿದ್ದು, ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ಕ್ಷಣ ವಿಶೇಷವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇಎಸ್‌ಪಿಎನ್‌ ಕ್ರಿಕ್‌ಇನ್ಫೋದ ಕ್ರಿಕೆಟ್‌ಬಾಜಿ ಶೋನಲ್ಲಿ ಭಾರತ ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಅವರೊಂದಿಗೆ ಮಾತನಾಡಿದ ರಹಾನೆ, "ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವುದು ನನ್ನ ಪಾಲಿಗೆ ವಿಶೇಷವಾದ ಕ್ಷಣ, ಅದರಲ್ಲೂ ನಿರ್ಣಾಯಕ ಪಂದ್ಯವಾಗಿದ್ದು ಇನ್ನಷ್ಟು ಅದ್ಭುತ ಭಾವನೆಗಳನ್ನು ಹುಟ್ಟುಹಾಕಿತ್ತು. ಭಾರತ ತಂಡದ ನಾಯಕತ್ವ ವಹಿಸುತ್ತೇನೆಂದು ಎಂದೂ ಅಂದುಕೊಂಡಿರಲಿಲ್ಲ," ಎಂದು ಹೇಳಿದರು.
"ಮುಂದಿನ ಪಂದ್ಯದಲ್ಲಿ ನಾನೇ ನಾಯಕನಾಗುತ್ತೇನೆ ಎಂಬ ಸಣ್ಣ ಸುಳಿವು ಇರಲಿಲ್ಲ. ನಾನು ಫಿಟ್‌ ಇಲ್ಲ ಮುಂದಿನ ಪಂದ್ಯವನ್ನು ನೀನೆ ಮುನ್ನಡೆಸಬೇಕು ಎಂದು ವಿರಾಟ್‌ ಕೊಹ್ಲಿ ನನಗೆ ತಿಳಿಸಿದರು. ಆಗ ಮುಖ್ಯ ಕೋಚ್‌ ಆಗಿದ್ದ ಅನಿಲ್‌ ಕುಬ್ಳೆ ಭಾಯ್‌ ಕೂಡ ಇದೇ ವಿಷಯ ಹೇಳಿದರು," ಎಂದು ರಹಾನೆ 2017ರ ಘಟನೆಯನ್ನು ಸ್ಮರಿಸಿಕೊಂಡರು.
ಯುಎನ್ಐಆರ್ ಕೆ 1630