Wednesday, Feb 26 2020 | Time 10:01 Hrs(IST)
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
business economy Share

2019-20ರಲ್ಲಿ ಭಾರತ-ಪಾಕ್ ನಡುವಿನ ವಾಣಿಜ್ಯ ವಹಿವಾಟು ಗಣನೀಯ ಕುಸಿತ

2019-20ರಲ್ಲಿ ಭಾರತ-ಪಾಕ್ ನಡುವಿನ ವಾಣಿಜ್ಯ ವಹಿವಾಟು ಗಣನೀಯ ಕುಸಿತ
2019-20ರಲ್ಲಿ ಭಾರತ-ಪಾಕ್ ನಡುವಿನ ವಾಣಿಜ್ಯ ವಹಿವಾಟು ಗಣನೀಯ ಕುಸಿತ

ಇಸ್ಲಾಮಾಬಾದ್, ಜ 23 (ಯುಎನ್‍ಐ) ಭಾರತ-ಪಾಕಿಸ್ತಾನ ನಡುವಿನ ಹಗೆತನದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಗಣನೀಯ ಕುಸಿತವಾಗಿದೆ.

2019-20ರ ಮೊದಲಾರ್ಧ ಅವಧಿಯಲ್ಲಿ ಪಾಕಿಸ್ತಾನ, ಭಾರತಕ್ಕೆ ಕೇವಲ 16.8 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. 2018-19ರ ಮೊದಲಾರ್ಧದಲ್ಲಿ ನಡೆದಿದ್ದ 213 ದಶಲಕ್ಷ ಡಾಲರ್ ವಹಿವಾಟಿಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಪ್ರಕಟಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

ಡಾನ್ ಪತ್ರಿಕೆಯ ವರದಿ ಪ್ರಕಾರ, ಭಾರತದಿಂದ ಪಾಕಿಸ್ತಾನಕ್ಕೆ ಆಮದು ಪ್ರಮಾಣ ಸಹ ತೀವ್ರ ಕುಸಿತವಾಗಿದೆ. 2019-20ರ ಮೊದಲಾರ್ಧದಲ್ಲಿ ಕೇವಲ 286.6 ದಶಲಕ್ಷ ಡಾಲರ್ ವಹಿವಾಟು ನಡೆದಿದೆ. ಆದರೆ, 2018-19ರಲ್ಲಿ ಇದೇ ಅವಧಿಯಲ್ಲಿ 865 ದಶಲಕ್ಷ ಡಾಲರ್ ವಹಿವಾಟು ನಡೆದಿತ್ತು.

ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರರ ದಾಳಿ ಮತ್ತು ಆ ನಂತರ ಭಯೋತ್ಪಾದಕ ಶಿಬಿರಗಳಿದ್ದ ಬಾಲಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿತ್ತು. ಕಳೆದ ಆಗಸ್ಟ್ ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ, ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಆರಂಭಿಸಿತ್ತು.

ಯುಎನ್‍ಐ ಎಸ್‍ಎಲ್‍ಎಸ್ 1727

More News

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..
ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

23 Feb 2020 | 8:29 PM

ನವದೆಹಲಿ, ಫೆ 23 (ಯುಎನ್ಐ) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್‌ ದರ ಭಾನುವಾರ ಕೊಂಚ ಏರಿಕೆಯಾಗಿದೆ.

 Sharesee more..