Thursday, Jul 16 2020 | Time 19:06 Hrs(IST)
 • ದೇಶದಲ್ಲಿ ಕೋವಿಡ್‌ ತಪಾಸಣೆ ಹೆಚ್ಚಳಕ್ಕೆ ಕ್ರಮ; ಕ್ಷಿಪ್ರ ಆಂಟಿಜೆನ್‌ ತಪಾಸಣೆ ಬಳಕೆ
 • ಕ್ರಾಂತಿಕಾರಿ ಬರಹಗಾರ ವರವರರಾವ್ ಗೆ ಕೊರೊನಾ ಪಾಸಿಟಿವ್
 • ಏಕಕಾಲದಲ್ಲಿ ಭಾರತ ಆಸೀಸ್ ಪ್ರವಾಸ, ಬಿಬಿಎಲ್ ಆರಂಭ
 • ಶ್ರೀನಗರದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಆರಂಭ
 • ರಾಮನಗರ ಕಂದಾಯ ಭವನ ಕಚೇರಿ ವಿಸ್ತರಿತ ಆಸ್ಪತ್ರೆಯಾಗಿ ಮುಂದುವರಿಕೆ:ಡಿಸಿಎಂ ಡಾ ಅಶ್ವಥ್ ನಾರಾ ಯಣ್
 • ಭಾರತದಲ್ಲಿನ ಹೆಚ್ಚು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಮೆರಿಕ ಹೂಡಿಕೆದಾರರಿಗೆ ಧರ್ಮೇಂದ್ರ ಪ್ರಧಾನ್‍ ಆಹ್ವಾನ
 • ಜಿಕೆವಿಕೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ಆಗಸ್ಟ್ 1ರಿಂದ ರಾಷ್ಟ್ರೀಯ ಶೂಟಿಂಗ್ ಶಿಬಿರ ಆರಂಭ
 • ಆಯೋಧ್ಯೆ ರಾಮ ಮಂದಿರಕ್ಕೆ ಆಗಸ್ಟ್ ೫ ರಂದು ಪ್ರಧಾನಿ ಮೋದಿ ಭೂಮಿ ಪೂಜೆ ?
 • 2007ರ ಟಿ20 ವಿಶ್ವಕಪ್‌ನ ಬೌಲ್‌ಔಟ್‌ ಘಟನೆ ಸ್ಮರಿಸಿದ ವೆಂಕಟೇಶ್‌ ಪ್ರಸಾದ್‌
 • ಶ್ರೀ ರಾಮುಲು ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
 • ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ
 • ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ : ಆರ್ಚರ್ ಗೆ ಕೊಕ್
 • ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಕುರಿತ ಜಾಗೃತಿ ಫಲಕ ಲಗತ್ತಿಸಲು ಹೈಕೋರ್ಟ್ ಅನುಮತಿ
 • ಭಾರತ ತಂಡದಲ್ಲಿ ವೇಗದ ಬೌಲರ್‌ಗಳೇ ಇರಲಿಲ್ಲ: ಕಪಿಲ್ ದೇವ್
Karnataka Share

2020 ರ ನಂತರ ಎಲೆಕ್ಟ್ರಿಕ್‌ ವಾಹನಗಳ ನೋಂದಣಿಗೆ ಆದ್ಯತೆ: ಗೌರವ್ ಗುಪ್ತ

ಬೆಂಗಳೂರು, ನ.19(ಯುಎನ್ಐ) ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನೀತಿ ಜಾರಿಗೆ ತಂದಿದ್ದು, ಎಲೆಕ್ಟ್ರಿಕ್ ವೆಹಿಕಲ್ ಕ್ಲಸ್ಟರ್ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದ್ದಾರೆ.
ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ "ಎಲೆಕ್ಟ್ರಿಕ್‌ ವೆಹಿಕಲ್ ಆ್ಯಂಡ್ ಚೇಂಜಿಂಗ್‌ ಲ್ಯಾಂಡ್‌ ಸ್ಕೇಪ್ ಆನ್‌ ಮೊಬಿಲಿಟಿ " ಕುರಿತು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2017 ರಲ್ಲಿ ಮೊದಲಬಾರಿಗೆ ಎಲೆಕ್ಟ್ರಿಕ್ ವಾಹನಗಳ ನೀತಿ ಜಾರಿಗೆ ತರಲಾಗಿದೆ. ಭವಿಷ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಸಂಪೂರ್ಣ ಕಡಿತಗೊಳಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ತೆರೆಯಲು ಉತ್ತೇಜಿಸಲಾಗುತ್ತಿದೆ. ಸರಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ ಎಂದರು.
2020 ರ ನಂತರದಲ್ಲಿ ಕೇವಲ ವಿದ್ಯುತ್ ಚಾಲಿತ ವಾಹಗಳಿಗೆ ಮಾತ್ರ ನೋಂದಣಿ ಮಾಡುವ ಆದೇಶ ತರಲು ಚಿಂತಿಸಲಾಗಿದೆ. ಇದರ ಜೊತೆಗೆ ಖಾಸಗಿಯವರು ಸ್ವಯಂ ಪ್ರೇರಿತವಾಗಿ ಪಾರ್ಕಿಂಗ್ ಸ್ಥಳ, ಪೆಟ್ರೋಲ್ ಬಂಕ್ ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದಲ್ಲದೆ ಸರಕಾರದ ವತಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೈಗಾರಿಕಾ ಉದ್ಯಮಿಗಳು ಸರಕಾರದೊಂದಿಗೆ ಚರ್ಚಿಸಿದ್ದಾರೆ. ಮಹೀಂದ್ರ, ವೋಲ್ಸ್ ವ್ಯಾಗನ್ ಇತರೆ ದೊಡ್ಡ ಕಂಪನಿಗಳು ಆಸಕ್ತಿ ತೋರಿವೆ. ಹೊಸ ತಂತ್ರಜ್ಞಾನ ಹೊಂದಿರುವ ವಾಹನಗಳನ್ನು ರೂಪಿಸಲು ನವೋದ್ಯಮಗಳಿಗೂ ಸರಕಾರ ಬೆಂಬಲ ನೀಡಲಿದೆ ಎಂದು ಗೌರವ್ ಗುಪ್ತಾ ಹೇಳಿದರು.
ಯುಎನ್ಐ ಡಿಸಿ ವಿಎನ್ 1647