Monday, Sep 20 2021 | Time 07:38 Hrs(IST)
National Share

24 ಗಂಟೆಯಲ್ಲಿ 41,383 ಹೊಸ ಕೊರೋನ ಪ್ರಕರಣ- 507 ಸಾವು

24 ಗಂಟೆಯಲ್ಲಿ 41,383 ಹೊಸ ಕೊರೋನ ಪ್ರಕರಣ- 507 ಸಾವು
24 ಗಂಟೆಯಲ್ಲಿ 41,383 ಹೊಸ ಕೊರೋನ ಪ್ರಕರಣ- 507 ಸಾವು

ನವದೆಹಲಿ, ಜುಲೈ 22 (ಯುಎನ್ಐ ) ದೇಶದಲ್ಲಿ ಹೊಸದಾಗಿ ಕಳೆದ ಗಂಟೆಗಳ ಅವಧಿಯಲ್ಲಿ 24 41,383 ಹೊಸ ಕೊರೋನ ಪ್ರಕರಣಗಳು ಮತ್ತು 507 ಹೆಚ್ಚು ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದರಿಂದ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 18ಸಾವಿರಕ್ಕೆ ಏರಿಕೆಯಾಗಿದೆ.24 ಗಂಟೆಗಳ ಅವಧಿಯಲ್ಲಿ 38,652 ಜನರು ಚೇತರಿಸಿಕೊಂಡಿದ್ದಾರೆ.ಇಲ್ಲಿಯವರೆಗೆ ದೇಶದಲ್ಲಿ 450,911,712 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಅವುಗಳಲ್ಲಿ 1718,439 ಮಾದರಿಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ದೇಶಾದ್ಯಂತ 41 ಕೋಟಿ ಜನರಿಗೆ ಈವರೆಗೆ ಲಸಿಕೆ ನೀಡಲಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1004