Monday, Sep 20 2021 | Time 06:51 Hrs(IST)
National Share

24 ಗಂಟೆಯಲ್ಲಿ 46,148 ಸೋಂಕು, 979 ಸಾವಿನ ಪ್ರಕರಣ ದಾಖಲು

24 ಗಂಟೆಯಲ್ಲಿ 46,148 ಸೋಂಕು, 979 ಸಾವಿನ ಪ್ರಕರಣ ದಾಖಲು
24 ಗಂಟೆಯಲ್ಲಿ 46,148 ಸೋಂಕು, 979 ಸಾವಿನ ಪ್ರಕರಣ ದಾಖಲು

ನವದೆಹಲಿ, ಜೂನ್ 28 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 46,148 ಕೊರೋನ ಸೋಂಕು ಪ್ರಕರಣಗಳು ಮತ್ತು 979 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ನೀಡಿದೆ.

ಭಾನುವಾರ ದೇಶದಲ್ಲಿ 50,040 ಹೊಸ ಸೋಂಕುಗಳು ಮತ್ತು 1258 ಹೊಸ ಸಾವುಗಳನ್ನು ವರದಿ ಯಾಗಿತ್ತು ಇಂದು ಕೊಂಚ ಇಳಿಕೆ ಕಂಡು ಬಂದಿದೆ.

ದೇಶದ ಒಟ್ಟಾರೆ ಕೊರೋನ ಪ್ರಕರಣಗಳ ಸಂಖ್ಯೆ 30,279,331 ರಷ್ಟಿದೆ ಮತ್ತು ಒಟ್ಟು ಸಾವಿನ ಸಂಖ್ಯೆ 396,730 ಕ್ಕೆ ಏರಿಕೆಯಾಗಿದೆ ಸಚಿವಾಲಯ ತಿಳಿಸಿದೆ.

ಇಲ್ಲಿಯವರೆಗೆ 29,309,607 ರೋಗಿಗಳು ಕೋವಿಡ್-19 ರಿಂದ ಗುಣಮುಖರಾಗಿದ್ದಾರೆ. ಈ ನಡುವೆ ಕೊರೋನ ಲಸಿಕೆಯಲ್ಲಿ ದೇಶ ಮೈಲಿಗಲು ಸಾಧಿಸಿದೆ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದ್ದು, 24 ಗಂಟೆಗಳಲ್ಲಿ 64,ಲಕ್ಷ ಜನರಿಗೆ ಲಸಿಕೆ ಹಾಕಲಾಗಿದ್ದು ಈವರೆಗೆ ದೇಶದಲ್ಲಿ 32 ಕೋಟಿಗೂ ಹೆಚ್ಚು ಜನರಿಗೆ ,ಲಸಿಕೆ ಹಾಕಲಾಗಿದೆ.

ಯುಎನ್ಐ ಕೆಎಸ್ಆರ್ 1009