Sunday, Mar 29 2020 | Time 00:47 Hrs(IST)
National Share

24,000 ಕೋಟಿ ರೂ.ಮೌಲ್ಯದ 9 ವಿಳಂಬ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ

24,000 ಕೋಟಿ ರೂ.ಮೌಲ್ಯದ 9 ವಿಳಂಬ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ
24,000 ಕೋಟಿ ರೂ.ಮೌಲ್ಯದ 9 ವಿಳಂಬ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ

ನವದೆಹಲಿ, ಜ. 22 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಬುಧವಾರ ಒಟ್ಟು ಹನ್ನೊಂದು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಹನ್ನೊಂದು ಯೋಜನೆಗಳ ಪೈಕಿ ಒಂಬತ್ತು ರಾಜ್ಯಗಳಲ್ಲಿ 24,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳು ವಿಳಂಬವಾಗಿರುವುದು ಕಂಡುಬಂದಿದೆ.

ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಉತ್ತರ ಪ್ರದೇಶ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಗಳು ವಿಳಂಬವಾಗಿವೆ. ರೈಲ್ವೆ ಸಚಿವಾಲಯದ ಮೂರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಐದು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಒಂದು ಯೋಜನೆಗಳು ಇದರಲ್ಲಿ ಸೇರಿವೆ.

2020ರ ಮೊದಲ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ 32ನೇ ಪ್ರಗತಿ ಪರಿಶೀಲನಾ ಸಭೆ ಇದಾಗಿದೆ.

ವಿಮಾ ಯೋಜನೆಗಳ ಅಡಿಯಲ್ಲಿ - ‘ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ’ (ಪಿಎಂಜೆಜೆಬಿವೈ) ಮತ್ತು ‘ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ’ (ಪಿಎಂಎಸ್‌ಬಿವೈ) ಯೋಜನೆಗಳ ಪ್ರಗತಿ ಪರಿಶೀಲಿಸಲಾಗಿದೆ.

ಸಭೆಯಲ್ಲಿ ಪ್ರಧಾನಿ, ಹಣಕಾಸು ಸೇವಾ ಇಲಾಖೆಯಡಿ ವಿಮಾ ಯೋಜನೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗೆ ಸಂಬಂಧಿಸಿದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ಇ-ಆಡಳಿತದ ಮೂಲಕ ಪರಿಣಾಮಕಾರಿ ಪೊಲೀಸಿಂಗ್‌ಗೆ ಸಮಗ್ರ ಮತ್ತು ಸಂಯೋಜಿತ ವ್ಯವಸ್ಥೆಯಾಗಿರುವ "ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ಯೋಜನೆಯಡಿ" ಪ್ರಗತಿಯನ್ನು ಅವರು ಪರಿಶೀಲಿಸಿದರು.

ಹಿಂದಿನ 31 ಪ್ರಗತಿ ಸಭೆಯಲ್ಲಿ , ಒಟ್ಟು 269 ಯೋಜನೆಗಳನ್ನು ಪ್ರಧಾನಿ ಪರಿಶೀಲಿಸಿದ್ದರು. ಒಟ್ಟು 12.30 ಲಕ್ಷ ಕೋಟಿ ರೂ. 17 ಸರ್ಕಾರಿ ಕಾರ್ಯಕ್ರಮಗಳು ಮತ್ತು 17 ವೈವಿಧ್ಯಮಯ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಸಂಬಂಧಿಸಿದ ಕುಂದುಕೊರತೆ ಪರಿಹಾರದ ಕಾರ್ಯವನ್ನು ಅವರು ಪರಿಶೀಲಿಸಿದ್ದರು.

ಯುಎನ್ಐ ಎಎಚ್ 1923

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..