Wednesday, Sep 23 2020 | Time 03:14 Hrs(IST)
Sports Share

5 ವಲಯ ಪ್ರತಿಭಾನ್ವೇಷಣೆ ಸಮಿತಿಗಳ ರಚನೆಗೆ ಕ್ರೀಡಾ ಸಚಿವಾಲಯ ನಿರ್ಧಾರ

ನವದೆಹಲಿ, ಆಗಸ್ಟ್ 3 (ಯುಎನ್ಐ)
ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಬಲಿಷ್ಠಗೊಳಿಸಬೇಕೇಂದು ಕೇಂದ್ರ ಸರಕಾರ ಕ್ರೀಡಾ ಸಚಿವಾಲಯದ ಮೇಲೆ ಒತ್ತಡ ಹಾಕುತ್ತಿದ್ದು, ಈ ನಿಟ್ಟಿನಲ್ಲಿ ದೇಶದ್ಯಾಂತ ಪ್ರತಿಭಾನ್ವೇಷಣೆಗೆ ಐದು ವಲಯ ಸಮಿತಿಗಳನ್ನು ರಚಿಸುವುದಾಗಿ ಘೋಷಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಸಹಭಾಗಿತ್ವದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಭಾರತದ ಕ್ರೀಡಾ ಪ್ರಾಧಿಕಾರದಿಂದ ಧನಸಹಾಯ ನೀಡಲಿರುವ ಪ್ರತಿಭಾನ್ವೇಷಣೆಯ ಈ ಉಪಕ್ರಮ ಇದುವರೆಗೆ ಮಾಡಿದ "ಅತ್ಯಂತ ಆಕ್ರಮಣಕಾರಿ ಕರಸತ್ತು" ಎಂದು ರಿಜಿಜು ಹೇಳಿದ್ದಾರೆ. ಜತೆಗೆ ಮುಂಬರುವ ಕೆಲವು ತಿಂಗಳುಗಳಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತ ತಂಡದ ನಾಯಕ ಸುನಿಲ್ ಛೆತ್ರಿ ಅವರ 36ನೇ ಹುಟ್ಟು ಹಬ್ಬದ ಅಂಗವಾಗಿ ದಿಲ್ಲಿ ಫುಟ್ಬಾಲ್ ಆಯೋಜಿಸಿದ್ದ ವರ್ಚುವಲ್(ಆನ್ ಲೈನ್ ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಜಿಜು, '' ಎಐಎಫ್ ಎಫ್ ಸಹಭಾಗಿತ್ವದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಖೇಲೋ ಇಂಡಿಯಾ ಯೋಜನೆಯಡಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಸೇರಿದಂತೆ ಪ್ರತಿ ವಲಯಗಳಿಗೆ ಮುಂದಿನ ಕೆಲವು ತಿಂಗಳುಗಳಲ್ಲಿ ಐದು ಪ್ರತಿಭಾ ಪರಿಶೀಲನಾ ಸಮಿತಿಗಳನ್ನು ರಚಿಸಲಿದ್ದೇವೆ, '' ಎಂದು ವಿವರ ನೀಡಿದ್ದಾರೆ.
" ನಾವು ಸಾಮಾನ್ಯ ವಿಧಾನದೊಂದಿಗೆ ಹೋಗಲು ಸಾಧ್ಯವಿಲ್ಲ, ನಾವು ವೃತ್ತಿಪರ ರೀತಿಯಲ್ಲಿ ಆಳವಾಗಿ ಹೋಗಬೇಕಾಗಿದೆ. ಇದು ನಾವು ಮಾಡಿದ ಅತ್ಯಂತ ಆಕ್ರಮಣಕಾರಿ ಕಸರತ್ತಾಗಿದೆ. ದೇಶದ ಮೂಲೆ ಮತ್ತು ಮೂಲೆಯಿಂದ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಭಾವಂತ ಮಕ್ಕಳನ್ನು ನಾವು ಶೋಧಿಸಬೇಕಿದೆ. ಇದು ಈಶಾನ್ಯ, ಮಧ್ಯ ಭಾರತದ ಬುಡಕಟ್ಟು ಪ್ರದೇಶಗಳು, ಕರಾವಳಿ ಪ್ರದೇಶಗಳು, ದಕ್ಷಿಣ ಅಥವಾ ಉತ್ತರ, ಭಾಗವನ್ನು ಒಳಗೊಂಡಿರುತ್ತದೆ, " ಎಂದು ಅವರು ವಿವರಿಸಿದರು.
ಮುಂದಿನ 10-15 ವರ್ಷಗಳಲ್ಲಿ ಭಾರತ, ವಿಶ್ವಕಪ್ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ಪ್ರತಿಭಾನ್ವೇಷಣೆಯ ಪರಿಕಲ್ಪನೆ ಮಾಡಲಾಗಿದೆ ಎಂದು ರಿಜಿಜು ಹೇಳಿದ್ದಾರೆ.
ಯುಎನ್ಐಆರ್ ಕೆ 2010
More News
ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

22 Sep 2020 | 10:32 PM

ಶಾರ್ಜಾ, ಸೆ.22 (ಯುಎನ್ಐ)- ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ರಾಜಸ್ಥಾನ ಸ್ಕೋರ್ ಬೋರ್ಡ್

22 Sep 2020 | 9:34 PM

 Sharesee more..

ಪೀಟ್ ಸಂಪ್ರಾಸ್ ದಾಖಲೆಯನ್ನು ಮೀರಿದ ಜೊಕೊವಿಚ್

22 Sep 2020 | 6:47 PM

 Sharesee more..