Wednesday, Sep 23 2020 | Time 02:08 Hrs(IST)
Sports Share

50 ರೂ. ತಾವು ಪಡೆದ ಮೊತ್ತ ಮೊದಲ ಸಂಪಾದನೆ ಎಂದ ರೋಹಿತ್‌ ಶರ್ಮಾ

ನವದೆಹಲಿ, ಆಗಸ್ಟ್ 3 (ಯುಎನ್ಐ)
ಸ್ನೇಹಿತರ ದಿನಾಚರಣೆಯಾದ ಆಗಸ್ಟ್‌ 2ರಂದು ಟೀಮ್‌ ಇಂಡಿಯಾದ ಸ್ಟಾರ್ ಓಪನರ್‌ ರೋಹಿತ್‌ ಶರ್ಮಾ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಮತ್ತು ವೃತ್ತಿಬದುಕಿನ ಹಲವು ಸಂಗತಿಗಳ ಬಗ್ಗೆ ರೋಹಿತ್‌ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ರೋಹಿತ್‌ ಬಳಿಕ ತಾವು ಸ್ವೀಕರಿಸಿದ ಮೊತ್ತ ಮೊದಲ ಸಂಪಾದನೆ ಎಷ್ಟು? ಹಾಗೂ ಅದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಟ್ಟಿಗೆ ಹೇಗೆ ಖರ್ಚು ಮಾಡಿದ್ದಿರಿ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ರೋಹಿತ್‌, ತಮ್ಮ ಬಾಲ್ಯದ ದಿನಗಳಲ್ಲಿ ಸೊಸೈಟಿ ಮಟ್ಟದ ಕ್ರಿಕೆಟ್‌ ಆಡುವಾಗ 50 ರೂ. ಗೆದ್ದದ್ದು ತಾವು ಸ್ವೀಕರಿಸಿದ ಮೊತ್ತ ಮೊದಲ ಸಂಪಾದನೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
"ನನ್ನ ಮೊತ್ತ ಮೊದಲ ಸಂಪಾದನೆಯನ್ನು ನಾನು ನಗದು ರೀತಿಯಲ್ಲಿ ಸ್ವೀಕರಿಸಿದ್ದೆ. ಸೊಸೈಟಿ ಮಟ್ಟದ ಪಂದ್ಯದಲ್ಲಿ ನಾನು 50 ರೂ. ಹಣವನ್ನು ಗೆದ್ದಿದ್ದೆ. ಅದನ್ನು ನನ್ನ ಸ್ನೇಹಿತರೊಟ್ಟಿಗೆ ರಸ್ತೆ ಬದಿಯಲ್ಲಿ ವಡಾ ಪಾವ್‌ ತಿನ್ನುವ ಮೂಲಕ ಖರ್ಚು ಮಾಡಿದ್ದೆ," ಎಂದು 'ಹಿಟ್‌ಮ್ಯಾನ್‌' ಖ್ಯಾತಿಯ ಆಧಿನಿಕ ಕ್ರಿಕೆಟ್‌ನ ದಿಗ್ಗಜ ಓಪನರ್‌ ಹೇಳಿಕೊಂಡಿದ್ದಾರೆ.
33 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಮುಂಬೈನ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದವರು. ಮುಂಬೈನ ರಸ್ತೆಗಳಲ್ಲಿ ಕ್ರಿಕೆಟ್‌ ಆಡುವುದನ್ನು ಆರಂಭಿಸಿದ ರೋಹಿತ್‌, ಬಳಿಕ ಐತಿಹಾಸಿಕ ಹಾಗೂ ಭಾರತದ ಕ್ರಿಕೆಟ್‌ ಕಾಶಿ ಎನಿಸಿಕೊಂಡಿರುವ ಆಝಾದ್‌ ಮೈದಾನ್‌ಗೆ ಕಾಲಿಟ್ಟು ತಮ್ಮೊಳಗಿನ ಕ್ರಿಕೆಟರ್‌ನ ಸಂಪೂರ್ಣ ಸಾಮರ್ಥ್ಯವನ್ನು ಕಂಡುಕೊಂಡರು.
ಕಳೆದ ಫೆಬ್ರವರಿಯಲ್ಲಿ ರೋಹಿತ್‌ ಟೀಮ್‌ ಇಂಡಿಯಾ ಪರ ಕಟ್ಟ ಕಡೆಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವನ್ನು ಆಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ನಡೆದ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್‌ 41 ಎಸೆತಗಳಲ್ಲಿ 60 ರನ್‌ ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಆದರೆ, ಅದೇ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾದ್ದರಿಂದ ನಂತರದ ಏಕದಿನ ಕ್ರಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ ಸರಣಿಗಳಿಂದ ಹೊರಬಿದ್ದರು.
ಯುಎನ್ಐಆರ್ ಕೆ 2034
More News
ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

22 Sep 2020 | 10:32 PM

ಶಾರ್ಜಾ, ಸೆ.22 (ಯುಎನ್ಐ)- ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ರಾಜಸ್ಥಾನ ಸ್ಕೋರ್ ಬೋರ್ಡ್

22 Sep 2020 | 9:34 PM

 Sharesee more..

ಪೀಟ್ ಸಂಪ್ರಾಸ್ ದಾಖಲೆಯನ್ನು ಮೀರಿದ ಜೊಕೊವಿಚ್

22 Sep 2020 | 6:47 PM

 Sharesee more..