Monday, Jul 22 2019 | Time 07:18 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

6 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

6 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
6 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ರಾಮನಾಥಪುರ, ಜುಲೈ 12 (ಯುಎನ್ಐ) ಶ್ರೀಲಂಕಾ ನೌಕಾ ಪಡೆ, ಅಂತಾರಾಷ್ಟ್ರೀಯ ಜಲಗಡಿ ಮೀರಿ ತಮ್ಮ ವ್ಯಾಪ್ತಿಯ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ಆರೋಪದ ಮೇಲೆ ಭಾರತದ ತಮಿಳುನಾಡು ಮೂಲದ ಆರು ಮೀನುಗಾರರನ್ನು ಶುಕ್ರವಾರ ಬಂಧಿಸಿದ್ದು, ದೋಣಿಯನ್ನು ವಶಕ್ಕೆ ಪಡೆದಿದೆ.

ಈಮೀನುಗಾರರನ್ನು ರಾಮನಾಥಪುರಂ ಜಿಲ್ಲೆಯ ನಂಬುಥಲೈ ಪ್ರದೇಶಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇವರು ಗುರುವಾರ ಬೆಳಗ್ಗೆ ಮೀನು ಹಿಡಿಯಲು ಸಮುದ್ರಕ್ಕಿಳಿದಿದ್ದರು.

ಇವರು ಉತ್ತರ ಶ್ರೀಲಂಕಾದ ಡೆಲ್ಫ್ಟ್ ದ್ವೀಪದ ಬಳಿ ಮೀನು ಹಿಡಿಯುತ್ತಿದ್ದಾಗ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಂಕೇಸಂಥುರೈ ಬಂದರಿಗೆ ಕರೆದೊಯ್ಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯುಎನ್ಐ ಎಸ್ಎಚ್ ಎಎಚ್ 1550