Friday, Dec 6 2019 | Time 21:05 Hrs(IST)
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
 • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Sports Share

8 ರಿಂದ 10 ಐಪಿಎಲ್‌ ತಂಡಗಳ ಏರಿಕೆಗೆ ಮತ್ತೆ ಪ್ರಯತ್ನ

ಮುಂಬೈ, ಜು 14 (ಯುಎನ್ಐ) ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿಯೆಂದೇ ಕರೆಯುವ ಇಂಡಿಯನ್‌ ಪ್ರೀಮಿಯರ್ ಲೀಗ್‌ ಮುಂಬರುವ ಆವೃತ್ತಿಗೆ ತನ್ನ ಪ್ರಾಂಚೈಸಿಗಳನ್ನು 8 ರಿಂದ 10ಕ್ಕೆ ಏರಿಸಲು ಮುಂದಾಗಿದೆ.
ಹಾಗಾಗಿ, ದಿ ಅದಾನಿ ಗ್ರೂಪ್‌ (ಅಹಮದ್‌ಬಾದ್‌), ದಿ ಆರ್‌ಪಿಜಿ-ಸಂಜಯ್‌ ಗೊಯಾಂಕ್‌ ಗ್ರೂಪ್‌ (ಪುಣೆ) ಟಾಟಸ್‌ (ರಾಂಚಿ ಹಾಗೂ ಜೆಮ್ ಶೆಡ್‌ಪುರ್‌) ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಐಪಿಎಲ್‌ ನೂತನ ಪ್ರಾಂಚೈಸಿಗಾಗಿ ಬಿಡ್‌ ಸಲ್ಲಿಸಿರುವ ಅಗ್ರ ಸಂಸ್ಥೆಗಳಾಗಿವೆ.
ಕಳೆದ 2011ರಲ್ಲಿ ಹೆಚ್ಚುವರಿಯಾಗಿ ಎರಡು ತಂಡಗಳನ್ನು ಆಡಿಸಲಾಗಿತ್ತು. ಆದರೆ, ಇದರಿಂದಾಗಿ ಹಲವು ವಿವಾದಗಳು ಉದ್ಭವವಾಗಿದ್ದವು. ಆದ್ದರಿಂದ ಹೊಸ ಎರಡು ತಂಡಗಳನ್ನು ಕೈ ಬಿಡಲಾಗಿತ್ತು. ಇದೀಗ ಅದೇ ಪ್ರಯೋಗ ಮಾಡಲು ಐಪಿಎಲ್‌ ಮುಂದಾಗಿದೆ.
ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿ, " ಐಪಿಎಲ್‌ನಲ್ಲಿ 8 ರಿಂದ 10 ತಂಡಗಳು ಏರಿಕೆ ಮಾಡುವ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಈ ಪ್ರಕ್ರಿಯೆಗಾಗಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಾಂಚೈಸಿಗಳ ಐಪಿಎಲ್‌ ಅನ್ನು ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಬಿಸಿಸಿಐ ನೆರವು ಅಗತ್ಯ ಎಂದು ಹೇಳಿದ್ದಾರೆ.
" ಪಾಲುದಾರರು ಹಾಗೂ ಬಿಸಿಸಿಐ ಎರಡೂ ಫ್ರಾಂಚೈಸಿಗಳೊಂದಿಗೆ ಉತ್ತಮ ಬಾಂಧವ್ಯ ಬೆಸೆದುಕೊಂಡಿದ್ದಾರೆ. ವೃತ್ತಿಪರ ನಿರ್ವಹಣೆಯಲ್ಲಿ ಯಾರಾದರೂ ಅಪಾರದರ್ಶಕ ನಡವಳಿಕೆ ಮತ್ತು ಪ್ರಾಸಂಗಿಕ ಹೇಳಿಕೆಗಳು ಮತ್ತು ಟೀಕೆಗಳು ಬಿಸಿಸಿಐ ಮತ್ತು ಫ್ರಾಂಚೈಸಿಗಳ ನಡುವಿನ ವಿಶ್ವಾಸ ಮತ್ತು ಸಂಬಂಧವನ್ನು ಅನಗತ್ಯವಾಗಿ ಹಾಳುಮಾಡುತ್ತವೆ ಎಂದು ನಾವು ಕಳವಳ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಯುಎನ್‌ಐ ಆರ್‌ಕೆ ಎಎಚ್ 1233