Monday, Sep 20 2021 | Time 06:51 Hrs(IST)
Sports Share

800 ಮೀಟರ್ ಓಟ: ಕಿಶನ್, ಹರ್ಮಿಲನ್ ಗೆ ಚಿನ್ನ

ಪಟಿಯಾಲ: ಜೂ.28 (ಯುಎನ್ಐ)- ಭಾನುವಾರ ಇಲ್ಲಿನ ನೇತಾಜಿ ಸುಭಾಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆದ 60 ನೇ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣದ ಕ್ರಿಶನ್ ಕುಮಾರ್ ಮತ್ತು ಪಂಜಾಬ್‌ನ ಹರ್ಮಿಲನ್ ಬೈನ್ಸ್ ಪುರುಷರ ಮತ್ತು ಮಹಿಳೆಯರ 800 ಮೀ ಓಟದಲ್ಲಿ ಜಯಗಳಿಸಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಕೃಷ್ಣ ನೌಕಾಪಡೆಗೆ ಮತ್ತೊಂದು ಚಿನ್ನವನ್ನು ಸೇರಿಸಿದ್ದಾರೆ. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದರು.

ಪುರುಷರ 800 ಮೀಟರ್ ಓಟದಲ್ಲಿ ಉತ್ತರಾಖಂಡದ ಅನು ಕುಮಾರ್ ಅವರು ಕ್ರಿಶನ್ ಕುಮಾರ್ ಅವರು ಜಿದ್ದಾಜಿದ್ದಿನ ಕಾದಾಟ ನೀಡಿದರು. ಆದರೆ ಹರಿಯಾಣದ ಕ್ರಿಶನ್ 1: 50.12 ಸೆ. ಕ್ರಮಿಸಿದರು. ಅನು ಕುಮಾರ್ ಬೆಳ್ಳಿಯೊಂದಿಗೆ ಎರಡನೇ ಸ್ಥಾನ ಪಡೆದರೆ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹರಿಯಾಣದ ಮಂಜಿತ್ ಸಿಂಗ್ ಕಂಚು ಗೆದ್ದರು.

22 ವರ್ಷದ ಹರ್ಮಿಲನ್ 2: 2.57 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿ ಚಿನ್ನದ ಪದಕ ಗೆದ್ದರು. ದೆಹಲಿಯ ಚಂದಾ ಬೆಳ್ಳಿ ಗೆದ್ದರೆ, ಶ್ರೀಲಂಕಾದ ನಿಮಾಲಿ ಲಿಯಾನರಾಚಿ ದೆಹಲಿಯ ಶಾಲು ಚೌಧರಿಯನ್ನು ಸೋಲಿಸಿ ಕಂಚು ಗೆದ್ದರು.

ಯುಎನ್ಐ ವಿಎನ್ಎಲ್ 1900