ಫೈನಲ್‌ನಲ್ಲೂ ನ್ಯೂಜಿಲೆಂಡ್‌ ವಿರುದ್ಧ ಇದೇ ಆಟ ಮುಂದುವರಿಸುತ್ತೇವೆ: ಮಾರ್ಗನ್‌" /> ಫೈನಲ್‌ನಲ್ಲೂ ನ್ಯೂಜಿಲೆಂಡ್‌ ವಿರುದ್ಧ ಇದೇ ಆಟ ಮುಂದುವರಿಸುತ್ತೇವೆ: ಮಾರ್ಗನ್‌" />
Thursday, Nov 21 2019 | Time 03:08 Hrs(IST)
Sports Share

data-reactid="247">ಫೈನಲ್‌ನಲ್ಲೂ ನ್ಯೂಜಿಲೆಂಡ್‌ ವಿರುದ್ಧ ಇದೇ ಆಟ ಮುಂದುವರಿಸುತ್ತೇವೆ: ಮಾರ್ಗನ್‌

ಬರ್ಮಿಂಗ್‌ಹ್ಯಾಮ್‌, ಜು 12 (ಯುಎನ್‌ಐ) ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನವನ್ನೇ ಐಸಿಸಿ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮುಂದುವರಿಸಬೇಕು ಎಂದು ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಆಟಗಾರರಿಗೆ ಕರೆ ನೀಡಿದ್ದಾರೆ.
ಗುರುವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ 49 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 223 ರನ್‌ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 32.1 ಓವರ್‌ಗಳಿಗೆ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಮಾರ್ಗನ್‌, " ಭಾನುವಾರವು ಆತಂಕಪಡುವ ದಿನವಲ್ಲ, ಎಂದಿನಂತೆ ಎದುರುನೋಡಬೇಕಾದ ದಿನ ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್‌ ಫೈನಲ್‌ ಆಡಲು ಅವಕಾಶ ಕಲ್ಪಿಸಿಕೊಂಡಿದ್ದೇವೆ. ಕಳೆದ ಪಂದ್ಯಗಳಲ್ಲಿ ಆಡಿದ ರೀತಿಯಲ್ಲೇ ಮುಂದಿನ ಪಂದ್ಯವನ್ನು ಆಡುತ್ತೇವೆ ಎಂದು ಹೇಳಿದರು.
"ಆಸ್ಟ್ರೇಲಿಯಾ ತಂಡದಲ್ಲಿ ಅಗ್ರ ಕ್ರಮಾಂಕದ ಬೌಲರ್‌ಗಳನ್ನು ಒಳಗೊಂಡ ಬಲಿಷ್ಠ ಬೌಲಿಂಗ್‌ ಪಡೆಯಿದೆ. ಪ್ರಸ್ತುತ ಆವೃತ್ತಿಯಲ್ಲಿ ಮಿಚೆಲ್‌ ಸ್ಟಾರ್ಕ್‌ ಅದ್ಭುತ ಲಯದಲ್ಲಿದ್ದಾರೆ. ಜತೆಗೆ, ನಥಾನ್‌ ಲಿಯಾನ್‌ ಕೂಡ ಟೆಸ್ಟ್ ವಿಭಾಗದಲ್ಲಿ ಅತ್ಯುತ್ತಮ ಬೌಲರ್‌ ಆಗಿದ್ದಾರೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಅನ್ನು ನಾವು ಸದುಪಯೋಗಪಡಿಸಿಕೊಂಡೆವು" ಎಂದು ಹೇಳಿದರು.
2015ರಲ್ಲಿ ನಮ್ಮ ಗುರುತು ಇರಲಿಲ್ಲ. ಅಗ್ರ ತಂಡಗಳ ವಿರುದ್ಧ ಹೆಣಗಾಡಿದ್ದೆವು ಮತ್ತು ಅದರ ಕೆಳಗೆ ಕುಳಿತ ತಂಡಗಳ ವಿರುದ್ಧ ನಾವು ಹೋರಾಡಿದ್ದೇವೆ. 50 ಓವರ್‌ ಕ್ರಿಕೆಟ್‌ ಆಡುವ ವಿಧಾನವನ್ನು ಅನುಸರಿಸಿದೆವು. ಇದು ನಮಗೆ ಉತ್ತಮವಾಗಿ ಕೆಲಸ ಮಾಡಿದೆ ಮತ್ತು ಇಸಿಬಿ, ತಂಡದ ಸಿಬ್ಬಂದಿ ಇಲ್ಲಿಯವರೆಗೆ ಸಾಧ್ಯವಾದಷ್ಟು ಬೆಂಬಲವನ್ನು ನೀಡಿದ್ದಾರೆ ಎಂದರು.
ಯುಎನ್‌ಐ ಆರ್‌ಕೆ ಎಎಚ್‌ 1142