ವಿಶ್ವಕಪ್‌ನಲ್ಲೂ ಐಪಿಎಲ್‌ ನಾಕೌಟ್‌ ಮಾದರಿ ತನ್ನಿ: ಕೊಹ್ಲಿ" /> ವಿಶ್ವಕಪ್‌ನಲ್ಲೂ ಐಪಿಎಲ್‌ ನಾಕೌಟ್‌ ಮಾದರಿ ತನ್ನಿ: ಕೊಹ್ಲಿ" />
Wednesday, Feb 19 2020 | Time 12:24 Hrs(IST)
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
 • 65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
 • ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ
Sports Share

data-reactid="247">ವಿಶ್ವಕಪ್‌ನಲ್ಲೂ ಐಪಿಎಲ್‌ ನಾಕೌಟ್‌ ಮಾದರಿ ತನ್ನಿ: ಕೊಹ್ಲಿ

ನವದೆಹಲಿ, ಜು 12 (ಯುಎನ್‌ಐ) ಇಂಡಿಯನ್‌ ಪ್ರೀಮಿಯರ್‌ ಲೀಗ್‌ ರೀತಿಯಲ್ಲೇ ಐಸಿಸಿ ವಿಶ್ವಕಪ್‌ ನಾಕೌಟ್‌ ಪಂದ್ಯಗಳನ್ನು ಆಯೋಜಿಸಬೇಕು ಎಂದು ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ 18 ರನ್‌ಗಳಿಂದ ಸೋಲು ಅನುಭವಿಸಿತ್ತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್‌, ಪಂದ್ಯದ 45 ನಿಮಿಷಗಳ ಕೆಟ್ಟ ಬ್ಯಾಟಿಂಗ್‌ನಿಂದ ನಾವು ಸೋಲು ಅನುಭವಿಸಿದೆವು ಎಂದು ಆತ್ಮಾವಲೋಕನ ಮಾಡಿಕೊಂಡಿದ್ದರು. ಅಲ್ಲದೇ, ಐಪಿಎಲ್‌ ಮಾದರಿಯಲ್ಲೇ ನಾಕೌಟ್‌ ಪಂದ್ಯಗಳನ್ನು ಆಯೋಜಿಸಬೇಕೆಂದು ಅವರು ಸಲಹೆ ನೀಡಿದ್ದರು. "ಕ್ರಿಕೆಟ್‌ನಲ್ಲಿ ಏನೆಲ್ಲ ಆಗಬಹುದು ಎಂಬ ಭವಿಷ್ಯದ ಬಗ್ಗೆ ಯಾರಿಗೆ ಗೊತ್ತಿದೆ. ಈ ಪಂದ್ಯಾವಳಿಯ ಪ್ರಮಾಣ ನೋಡುತ್ತ ಈ ವಿಷಯಗಳು ಪರಿಗಣನೆಗೆ ಬರಬಹುದು ಎಂದು ನಾನು ಭಾವಿಸುತ್ತೇನೆ. ಅದು ನಿಜವಾಗಿಯೂ ಮಾನ್ಯ ಅಂಶವಾಗಿದೆ. ಅದು ಯಾವಾಗ ಕಾರ್ಯಗತಗೊಳ್ಳುತ್ತದೆ ಎಂದು ತಿಳಿದಿಲ್ಲ ಎಂದರು.
ಆದರೆ ಈ ಪಂದ್ಯವಾಳಿಯ ಸವಾಲು ಮತ್ತು ವಿಭಿನ್ನ ರೀತಿಯ ವಿನೋದ ಮತ್ತು ನೀವು ನಿಖರವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಇದಕ್ಕೂ ಮುನ್ನ ನೀವು ಏನು ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಇದು ಹೊಸ ದಿನ, ಹೊಸ ಪ್ರಾರಂಭ, ಮತ್ತು ನೀವು ಸಾಕಷ್ಟು ಉತ್ತಮವಾಗಿಲ್ಲದಿದ್ದರೆ, ನೀವು ಮನೆಗೆ ಹೋಗಬೇಕಾಗುತ್ತದೆ. ಹಾಗಾಗಿ, ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ ಎಂದು ಹೇಳಿದರು.
ಐಪಿಎಲ್‌ನ ನಾಕೌಟ್‌ನಲ್ಲಿ ಕ್ವಾಲಿಫಯರ್‌ 1, 2 ಎಂದು ಮೊದಲಿಗೆ ಆಡಿಸಲಾಗುತ್ತದೆ. ಲೀಗ್‌ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಕ್ವಾಲಿಫಯರ್‌ 1 ರಲ್ಲಿ ಸೆಣಸಲಿವೆ. ನಂತರ, ಇದರಲ್ಲಿ ಗೆದ್ದು ತಂಡ ನೇರವಾಗಿ ಫೈನಲ್‌ ಪ್ರವೇಶ ಮಾಡಲಿದೆ. ಸೋತ ಗೆದ್ದ ಕ್ವಾಲಿಫಯರ್‌ 2 ರ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಎಲಿಮಿನೇಟರ್‌ ಪಂದ್ಯವಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶ ಮಾಡಲಿದೆ. ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶವಿರುತ್ತದೆ. ಆದರೆ, ಕ್ವಾಲಿಫಯರ್‌ 2 ರ ತಂಡಗಳಿಗೆ ಒಂದೇ ಅವಕಾಶ.
ಯುಎನ್‌ಐ ಆರ್‌ಕೆ ಎಎಚ್‌ 0905