Wednesday, Jan 29 2020 | Time 01:43 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment

‘ನಮ್ಮ ಭಾರತ’ ಚಿತ್ರದಲ್ಲಿ ಆರ್‍ಎಸ್‍ಎಸ್‍ ಗೀತೆ

27 Jan 2020 | 9:08 PM

ಬೆಂಗಳೂರು, ಜ 27 (ಯುಎನ್‍ಐ) ನೀಲಾ ನೀಲಕಂಠ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕುಮಾರಸ್ವಾಮಿ ನಿರ್ಮಾಣದ ‘ನಮ್ಮ ಭಾರತ’ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ತಿಂಗಳು ತೆರೆಗೆ ಬರುವ ನಿರೀಕ್ಷೆಯಿದೆ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ದೇಶಭಕ್ತಿ ಸಾರುವ ‘ನಮ್ಮ ಭಾರತ’ ಮಕ್ಕಳ ಚಿತ್ರ ಮಾತ್ರ ಐತಿಹಾಸಿಕ ಚಿತ್ರವೂ ಹೌದು ಎಂದು ನಿರ್ದೇಶಕರೂ ಆದ ಕುಮಾರಸ್ವಾಮಿ ಹೇಳಿದ್ದಾರೆ ದುಡಿಯುವ ಉದ್ದೇಶದಿಂದ ತಂದೆ, ತಾಯಿಯಿಂದ ದೂರದಲ್ಲಿ ದೇಶಭಕ್ತರೊಬ್ಬರ ಜತೆ ಬೆಳೆಯುವ ಬಾಲಕನ ಕಥೆ ಇದಾಗಿದ್ದು, ದೇಶಭಕ್ತಿ ಆತನ ಮೇಲೆ ಬೀರುವ ಪರಿಣಾಮವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ ಅಲ್ಲದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯ ಗೀತ ‘ನಮಸ್ತೆ ಸದಾ ವತ್ಸಲೆ’ ಹಾಡನ್ನು ಬಳಸಿಕೊಂಡಿರುವುದು ವಿಶೇಷ ನಿರ್ಮಾಪಕ, ನಿರ್ದೇಶಕ ಹಾಗೂ ಛಾಯಾಗ್ರಾಹಕರಾಗಿರು ಕುಮಾರಸ್ವಾಮಿ ಅವರಿಗೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ‘ಧರ್ಮಸೆರೆ’, ಆನಂತರ ಡಾ ರಾಜ್ ಅಭಿನಯದ ‘ಒಲವು ಗೆಲುವು’ ಹಾಗೂ ಹಲವು ಹಿಂದಿ ಚಿತ್ರಗಳಲ್ಲಿ ಅಸೋಸಿಯೇಟ್ ಕ್ಯಾಮರಾಮೆನ್ ಅಗಿ ಕಾರ್ಯನಿರ್ವಹಿಸಿರುವ ಅನುಭವವಿವೆ.

 Sharesee more..

‘ರಾಮನ ಸವಾರಿ’

27 Jan 2020 | 8:50 PM

ಬೆಂಗಳೂರು, ಜ 27 (ಯುಎನ್‍ಐ) ಕನ್ನಡ ಚಿತ್ರರಂಗಕ್ಕೆ 6 ರಾಜ್ಯಪ್ರಶಸ್ತಿ ವಿಜೇತ ಚಿತ್ರ ನೀಡಿರುವ ಕೆ ಶಿವರುದ್ರಯ್ಯ ನಿರ್ದೇಶನದ ‘ರಾಮನ ಸವಾರಿ’ ಚಿತ್ರ ಶುಕ್ರವಾರ ತೆರೆ ಕಾಣಲಿದೆ ಗಂಡ ಹೆಂಡಿತ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಅಪ್ಪ, ಅನ್ನ ಪರಸ್ಪರ ಮುನಿಸಿಕೊಂಡು ಬೇರಾಗಿರುವ ಸಮಯದಲ್ಲಿ, ಮಗ ಹೇಗೆ ಅವರನ್ನು ಒಗ್ಗೂಡಿಸುತ್ತಾನೆ ಎಂಬುದು ಚಿತ್ರದ ತಿರುಳು ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಮುದ್ದು ಮುದ್ದಾಗಿ, ಮನೋಜ್ಞವಾಗಿ ಅಭಿನಯಿಸಿರುವ ಮಾಸ್ಟರ್ ಅರೋನ್ ಈಗಾಗಲೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದುಕೊಂಡಿದ್ದಾನೆ ಅಲ್ಲದೆ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ 7 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ ಇದೊಂದು ಪೋಷಕರು ಹಾಗೂ ಮಕ್ಕಳ ನಡುವೆ ನಡೆಯುವ ಸವಾರಿಯಾಗಿದ್ದು, ಮಕ್ಕಳು ಸದಾ ಪೋಷಕರ ತೆಕ್ಕೆಯಲ್ಲಿ ನಲಿಯಬೇಕೆಂದು ಆಸೆಪಟ್ಟರೆ, ಪೋಷಕರು ಸ್ವಪ್ರತಿಷ್ಠೆಯಿಂದ ದೂರವಾಗುತ್ತದೆ, ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮವೇನು ಎಂಬ ಸಂದೇಶವನ್ನು ಚಿತ್ರ ಸಾರುತ್ತದೆ ರಾಮನ ತಂದೆ, ತಾಯಿಯ ಪಾತ್ರದಲ್ಲಿ ರಾಜೇಶ್ ನಟರಂಗ ಹಾಗೂ ಸೋನುಗೌಡ ಕಾಣಿಸಿಕೊಂಡಿದ್ದಾರೆ.

 Sharesee more..

ಶುಕ್ರವಾರ ತೆರೆಯ ಮೇಲೆ ‘ಡಿಂಗ’ ನ ಆಟ

27 Jan 2020 | 8:35 PM

ಬೆಂಗಳೂರು, ಜ 27 (ಯುಎನ್‍ಐ) ಶ್ರೀಮಾಯಕಾರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ ಮೂಗೂರು ಮಧು ದೀಕ್ಷಿತ್ ನಿರ್ಮಾಣದ ‘ಡಿಂಗ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ ಅಭಿಷೇಕ್ ಜೈನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪೂರ್ತಿ ಚಿತ್ರೀಕರಣವನ್ನು ಐಫ಼ೋನ್‌ನಲ್ಲಿ ಸೆರೆ ಹಿಡಿಯಲಾಗಿದೆ ಐ ಫ಼ೋನ್‌ಗೆ ಹೊಂದುವಂತಹ ವಿಶೇಷ ಲೆನ್ಸ್‌ಗಳನ್ನು ಯು ಎಸ್ ನಿಂದ ತರಿಸಿ ಚಿತ್ರೀಕರಣ ಮಾಡಲಾಗಿದೆ ಇದು ಇಡೀ ಏಷ್ಯಾದಲ್ಲೇ ಪ್ರಥಮ ಪ್ರಯತ್ನ ಎಂದು ನಿರ್ದೇಶಕರು ಹೇಳಿದ್ದಾರೆ ಚಿತ್ರದ ಪ್ಯಾಥೊ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅಭಿಷೇಕ್ ಜೈನ್, ಒಂದು ಕಮರ್ಷಿಯಲ್ ಚಿತ್ರ ಯಾವ ರೀತಿ ಬರುತ್ತದೊ, ಅದೇ ರೀತಿ ‘ಡಿಂಗ ಚಿತ್ರವೂ ಮೂಡಿಬಂದಿದೆ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಸುಧೋ ರಾಯ್ ನಿರ್ವಹಿಸಿದ್ದು ‘ಸುಮ್ ಸುಮ್ಮೆ’ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕಲೈಕ್ಸ್ ಪಡೆದಿದೆ ಎಂದಿದ್ದಾರೆ ಅನರ್ವ ಗೌಡ ಹಾಗೂ ಅನುಷಾ ಚಿತ್ರದ ಜೋಡಿಯಾಗಿದ್ದು ನಿರ್ದೇಶಕ ಅಭಿಷೇಕ್ ಜೈನ್ ತಾವೇ ಸ್ವತ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಕ್ಯಾನ್ಸರ್ ನಿಂದ ಸಾಯುತ್ತಿರುವ ವ್ಯಕ್ತಿ ತನ್ನ ಬಳಿ ಇರುವ ಅಚ್ಚುಮೆಚ್ಚಿನ ನಾಯಿಯನ್ನು ತನ್ನ ಬಳಿಕ ತನ್ನಷ್ಟೇ ಪ್ರೀತಿಯಿಂದ ಸಾಕಲು ವ್ಯಕ್ತಿಯ ಹುಡುಕಾಟ ನಡೆಸುತ್ತಿರುತ್ತಾನೆ ಇಂತಹ ಅತ್ಯಾಪ್ತವಾಗುವ ಕಥೆಯಲ್ಲಿ ಸ್ನೇಹ, ಬಾಂಧವ್ಯ, ಹಾಸ್ಯ, ಹೃದಯವನ್ನು ತಟ್ಟುವ ಸೂಕ್ಷ್ಮತರ ಭಾವನೆಗಳು ಅಡಕವಾಗಿವೆ ಎಂದು ಚಿತ್ರತಂಡ ತಿಳಿಸಿದೆ ‘ಡಿಂಗ’ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಮೋಹನ್ ದಾಸ್ ಪೈ ವಹಿಸಿಕೊಂಡಿದ್ದು, ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ 75 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

 Sharesee more..

ತೆರೆಯಲ್ಲಿ ಕಾಣಿಸಿಕೊಳ್ಳಲಿದೆ ರಿತಿಕ್, ದೀಪಿಕಾ ಜೋಡಿ

27 Jan 2020 | 4:47 PM

ಮುಂಬೈ, ಜ 27 (ಯುಎನ್ಐ)- ಬಾಲಿವುಡ್ ನ ಸೂಪರ್ ನಟಿ ದಿಪಿಕಾ ಪಡುಕೋಣೆ ಅವರು ರಿತಿಕ್ ರೋಷನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ತಾನಾಜಿ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ: ಸೈಫ್

27 Jan 2020 | 4:42 PM

ಮುಂಬೈ, ಜ 27 (ಯುಎನ್ಐ)- ತಾನಾಜಿ ಚಿತ್ರದಲ್ಲಿ ಮಾಡಿದ ಪಾತ್ರ ವೃತ್ತಿ ಜೀವನದ ಉತ್ತಮ ಪಾತ್ರ ಎಂದು ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ತಿಳಿಸಿದ್ದಾರೆ.

 Sharesee more..

ದೇಶದ ಪ್ರತಿ ಮಗಳು-ತಾಯಿಗೆ ಪದ್ಮಶ್ರೀ ಪ್ರಶಸ್ತಿ ಅರ್ಪಿಸಿದ ಕಂಗನಾ

26 Jan 2020 | 1:30 PM

ಮುಂಬೈ, ಜ 26 (ಯುಎನ್ಐ) ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ಪದ್ಮಶ್ರೀ ಪ್ರಶಸ್ತಿ ಯನ್ನು ದೇಶದ ಪ್ರತಿ ಮಗಳು-ತಾಯಿಗೆ ಅರ್ಪಿಸಿದ್ದಾರೆ 71ನೇ ಗಣರಾಜ್ಯೋತ್ಸವದ ಅಂಗವಾಗಿ ಸಿನಿರಂಗಕ್ಕೆ ಅವರು ನೀಡಿದ ಕೊಡುಗೆಯನ್ನು‌ ಪರಿಗಣಿಸಿ ಕಂಗನಾ ರಣಾವತ್ ಅವರಿಗೆ 2020ರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಸಲಾಯಿತು.

 Sharesee more..

ಫೆ.2ಕ್ಕೆ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ

25 Jan 2020 | 1:18 PM

ಬೆಂಗಳೂರು,ಜ 25(ಯುಎನ್ಐ) ಫಿಲ್ಮಾಹಾಲಿಕ್ ಫೌಂಡೇಶನ್ ನಿಂದ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಫೆ.

 Sharesee more..

‘ದೇಶದ್ರೋಹಿಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯ’ ಅನಾಮಿಕರ ಪತ್ರ ಟ್ವಿಟರ್‍ನಲ್ಲಿ ಶೇರ್ ಮಾಡಿದ ಪ್ರಕಾಶ್ ರಾಜ್ :ನಟ, ಚೇತನ್, ಕುಮಾರಸ್ವಾಮಿ ಹೆಸರು ಉಲ್ಲೇಖ

25 Jan 2020 | 11:18 AM

ಬೆಂಗಳೂರು, ಜ 25 (ಯುಎನ್‍ಐ) ಸ್ವಾಮಿ ನಿಜಗುಣಾನಂದ, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರಿಗೆ ಪ್ರಾಣ ಬೆದರಿಕೆಯನ್ನೊಡ್ಡಿ ಅನಾಮಿಕ ಪತ್ರ ಬರೆದಿದ್ದು, ಅದನ್ನು ನಟ ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ “ನಿಜಗುಣಾನಂದರೇ ನಿಮ್ಮ ಹಾಗೂ ನಿಮ್ಮ ಜೊತೆಯಲ್ಲಿರುವ ಧರ್ಮ ಹಾಗೂ ದೇಶ ದ್ರೋಹಿಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ ಅಂತಿಮ ಯಾತ್ರೆಗೆ ಸಿದ್ಧರಾಗಿ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಪಟ್ಟಿಯಲ್ಲಿ ನಟ ಪ್ರಕಾಶ್‍ ರಾಜ್ , ನಟ ಚೇತನ್ ಕುಮಾರ್, ಭಗವಾನ್‍, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಅಗ್ನಿ ಶ್ರೀಧರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರುಗಳಿವೆ ಜನವರಿ 29ರಿಂದ ಎಲ್ಲರ ಅಂತಿಮ ಯಾತ್ರೆಗೆ ಮುಹೂರ್ತ ನಿಶ್ಚಯವಾಗಿದ್ದು, ಸಂಹರಿಸಿಯೆ ತೀರುತ್ತೇವೆ ಎಂದು ಅನಾಮಿಕರು ಬರೆದುಕೊಂಡಿದ್ದಾರೆ.

 Sharesee more..

ಸಂಯೋಗಿತಾ ಆದ ವಿಶ್ವ ಸುಂದರಿ

24 Jan 2020 | 10:17 PM

ಮುಂಬೈ, ಜ 24 (ಯುಎನ್ಐ) ವಿಶ್ವ ಸುಂದರಿ - 2017 ಮಾನುಷಿ ಚಿಲ್ಲರ್, ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ 'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಅವರ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ನಾನು ಮತ್ತು ಗುಂಡ : ಶ್ವಾನ ಪ್ರೇಮದ ಭಾವುಕತೆಯ ಯಾನ

24 Jan 2020 | 9:29 PM

ಬೆಂಗಳೂರು, ಜ 24(ಯುಎನ್‍ಐ) ಮನುಷ್ಯ ಹಾಗೂ ಶ್ವಾನದ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ‘ನಾನು ಮತ್ತು ಗುಂಡ’ ಶುಕ್ರವಾರ ಬಿಡುಗಡೆಯಾಗಿದ್ದು, ಗುಂಡನ ಪಾತ್ರದಲ್ಲಿ ಶ್ವಾನ ಸಿಂಭಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ ಆಟೋ ಶಂಕರನ ಪಾತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ, ಗೆಳೆಯನಾಗಿ ಗೋವಿಂದೇಗೌಡ ಹಾಗೂ ಗೃಹಿಣಿಯಾಗಿ ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿದ್ದಾರೆ ಶ್ವಾನ ಪ್ರೇಮಕ್ಕೆ ಸಂಬಂಧಿಸಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿವೆಯಾದರೂ, ನಾನು ಮತ್ತು ಗುಂಡ ಇಂದಿನ ಕಾಲಘಟಕ್ಕೆ ಹೊಂದಿಕೊಂಡಿದ್ದು, ಬೌ ಬೌ ಬಿರಿಯಾನಿಗಾಗಿ ಮೂಕ ಶ್ವಾನಗಳ ಮಾರಣ ಹೋಮದ ಬಗ್ಗೆಯೂ ಕೊಂಚ ಬೆಳಕು ಚೆಲ್ಲಿದೆ ಆಕಸ್ಮಿಕವಾಗಿ ಸಿಗುವ ಗುಂಡನನ್ನು ಬಿಟ್ಟಿರಲಾರದಷ್ಟು ಹೊಂದಿಕೊಳ್ಳುವ ಆಟೋ ಶಂಕರ್, ಅದನ್ನು ಕಳೆದುಕೊಂಡಾಗ ಅನುಭವಿಸುವ ನೋವನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಮನೋಜ್ಞವಾಗಿ ಚಿತ್ರಿಸಿದ್ದಾರೆ ಗುಂಡ ಹಾಗೂ ಶಂಕರನ ಸಮಗ್ರ ಕಥೆ ಹಾಗೂ, ಕೊನೆಗೆ ಇಬ್ಬರ ಬಾಂಧವ್ಯ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ತಿಳಿಯಬೇಕಾದರೆ ಸಿನಿಮಾ ನೋಡಬೇಕು, ಗುಂಡನಾಗಿ ಶ್ವಾನ ಸಿಂಭಾ ಪಾತ್ರವನ್ನು ಕಣ್ತುಂಬಿಕೊಳ್ಳಬೇಕು.

 Sharesee more..
'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ         ಮೇಷ್ಟ್ರೇ?

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ ಮೇಷ್ಟ್ರೇ?

24 Jan 2020 | 9:03 PM

ಬೆಂಗಳೂರು, ಜ 24 (ಯುಎನ್‍ಐ) ಚಂದನವನದ ಪ್ರೀತಿಯ ಮೇಷ್ಟ್ರು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ, ಉತ್ತಮ ಓಪನಿಂಗ್ ಪಡೆದಿದೆ

 Sharesee more..

ಸಂಯೋಗಿತಾ ಆದ ವಿಶ್ವ ಸುಂದರಿ

24 Jan 2020 | 3:17 PM

ಮುಂಬೈ, ಜ 24 (ಯುಎನ್ಐ) ವಿಶ್ವ ಸುಂದರಿ - 2017 ಮಾನುಷಿ ಚಿಲ್ಲರ್, ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ 'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಆಗಿ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಮಧ್ಯಮ ವರ್ಗದ ನೊಂದ ಹೆಣ್ಣಿನ ಕಥೆ ‘ಬೆಂಕಿಯಲ್ಲಿ ಅರಳಿದ ಹೂವು’

24 Jan 2020 | 8:04 AM

ಬೆಂಗಳೂರು, ಜ 24 (ಯುಎನ್‍ಐ) ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದ ಕೂಡಲೇ ಖ್ಯಾತ ನಟಿ ಸುಹಾಸಿನಿ ನೆನಪಾಗುತ್ತಾರೆ ಹೌದು, ಕೆ ಬಾಲಚಂದರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದೆ ಇದೀಗ ಇದೇ ಶೀರ್ಷಿಕೆಯ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ಅನುಪಮಾ ಗೌಡ ಪ್ರಧಾನ ಭೂಮಿಯಲ್ಲಿದ್ದು, ದೇವಿಶ್ರೀ ಪ್ರಸಾದ್ ನಿರ್ದೇಶನವಿದೆ ಸೋಮಾರಿ ಗಂಡನ ಜತೆ ಹೆಣಗಾಡುವ ಪಾತ್ರಕ್ಕೆ ಅನುಪಮಾ ಗೌಡ ಜೀವ ತುಂಬಿದ್ದು, ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಗಾರ್ಮೆಂಟ್ ಗಳಲ್ಲಿ ದುಡಿಯುವ ಮಹಿಳೆಯರ ದಳ್ಳುರಿಯ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ನಿರ್ಮಾಪಕ ಹಾಗೂ ಚಿತ್ರಕ್ಕೆ ಬಂಡವಾಳ ಹೂಡಿರುವ ವಿಶು ಆಚಾರ್ ತಿಳಿಸಿದ್ದಾರೆ.

 Sharesee more..

ಡಾರ್ಲಿಂಗ್ ಕೃಷ್ಣ ‘ಲೋಕಲ್ ಟ್ರೈನ್’ ಹಾಡುಗಳಿಗೆ ‘ಪವರ್ ಹಸಿರು ನಿಶಾನೆ

24 Jan 2020 | 7:12 AM

ಬೆಂಗಳೂರು, ಜ 24 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಚಿತ್ರದ ಮೂರು ಸುಂದರ ಹಾಗೂ ಕಲರ್‍ಫುಲ್ ಹಾಡುಗಳು ಬಿಡುಗಡೆಯಾಗಿವೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಲೋಕಲ್ ಟ್ರೈನ್ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದರು ‘ಪುನೀತ್ ರಾಜ್‍ಕುಮಾರ್ ನನ್ನ ದೊಡ್ಡಣ್ಣನ ಹಾಗೆ ಮುಂಚಿನಿಂದಲೂ ನನ್ನೆಲ್ಲ ಸಿನೆಮಾಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ’ ಎಂದ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವೆ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ ರೈಲಿನಲ್ಲಿ ಬರುತ್ತಿರುತ್ತಾನೆ ಚಿತ್ರದ ಬಹುತೇಕ ದೃಶ್ಯಗಳು ರೈಲಿನಲ್ಲೇ ನಡೆಯುವ ಕಾರಣ ‘ಲೋಕಲ್ ಟ್ರೈನ್’ ಅಂತ ಹೆಸರಿಟ್ಟಿದ್ದೇವೆ ಟ್ರೈನ್ ಲೋಕಲ್ ಆದ್ರೂ ಪ್ರೊಡಕ್ಷನ್ ಹೈ ಕ್ಲಾಸ್ ಇಬ್ಬರು ನಾಯಕಿಯರಿದ್ದಾರೆ ಎಂದರು ಚಿತ್ರಕ್ಕೆ ರುದ್ರಮಣಿ ನಿರ್ದೇಶನವಿದೆಯಾದರೂ, ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರತಂಡದಿಂದ ಹೊರನಡೆದರು ಹೀಗಾಗಿ ಪೋಸ್ಟ್ ಪ್ರೊಡಕ್ಸನ್ ಕೆಲಸದ ಹೊಣೆಯನ್ನು ನಿರ್ದೇಶಕ ಮಾರುತಿ ವಹಿಸಿಕೊಂಡಿದ್ದಾರೆ ಎಂದು ನಿರ್ಮಾಪಕ ಸುಬ್ರಾಯ ವಾಲ್ಕಿ ತಿಳಿಸಿದರು.

 Sharesee more..

ಹುತಾತ್ಮ ಭಗತ್ ಸಿಂಗ್ ಪಾತ್ರದಲ್ಲಿ ಅಜಯ್ ದೇವಗನ್!

23 Jan 2020 | 7:07 PM

ಮುಂಬೈ, ಜ 23 (ಯುಎನ್ಐ) ಬಾಲಿವುಡ್ ಸಿಂಗಂ ಸ್ಟಾರ್ ಅಜಯ್ ದೇವಗನ್, ತಮ್ಮ ಮುಂಬರುವ ಚಿತ್ರದಲ್ಲಿ ಹುತಾತ್ಮ‌ ಭಗತ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರಂತೆ ಬಾಹುಬಲಿ ಚಿತ್ರ ಖ್ಯಾತಿಯ ನಿರ್ದೇಶಕ ರಾಜ ಮೌಳಿ, 400 ಕೋಟಿ ರೂ ಬಂಡವಾಳದಲ್ಲಿ ಆರ್ ಆರ್ ಆರ್ ಚಿತ್ರ ನಿರ್ದೇಶಿಸುತ್ತಿದ್ದಾರೆ.

 Sharesee more..