Wednesday, Jan 29 2020 | Time 01:58 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment

‘ಗಡಿನಾಡು’ ಚಿತ್ರಕ್ಕೆ ಬೆದರಿಕೆ ಕರೆ : ಶೀರ್ಷಿಕೆ ಬದಲಾವಣೆಗೆ ಒತ್ತಾಯ

21 Jan 2020 | 5:20 PM

ಬೆಂಗಳೂರು, ಜ 21 (ಯುಎನ್‍ಐ) ಚಂದನವನದ ಬೆಳ್ಳಿ ತೆರೆಗೆ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲೊಂದಾದ ‘ಗಡಿನಾಡು’ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಭಾಷೆ, ಗಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದು, ಬಿಡುಗಡೆ ಮಾಡದಂತೆ ಬೆದರಿಕೆ ಕರೆ ಬರುತ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ “ಇದೇ 24ರಂದು ಶುಕ್ರವಾರ ‘ಗಡಿನಾಡು’ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಈ ನಡುವೆ, ಕನ್ನಡ ಪರ ಹೋರಾಟಗಾರ ಎಂದು ಹೇಳಿಕೊಂಡಿರುವ ಪ್ರೊ ರಾವ್ ಬೈಂದೂರು ಮಧ್ಯರಾತ್ರಿ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದಾರೆ ಭಾಷೆ, ರಾಜಕೀಯ, ಪ್ರೀತಿ, ಪ್ರೇಮ ಗಡಿ ಸಮಸ್ಯೆಗಳ ಮೇಲೆ ಚಿತ್ರ ಬೆಳಕು ಚೆಲ್ಲಲು ಹೊರಟಿರುವಾಗ ಈ ಬಗೆಯ ಅಡ್ಡಿಯಾಗುತ್ತಿದೆ” ಎಂದು ನಿರ್ದೇಶಕ ನಾಗ್ ಹುಣಸೋಡ್ ಸುದ್ದಿಗೋಷ್ಠಿಗೆ ತಿಳಿಸಿದ್ದಾರೆ “ಚಿತ್ರದ ಮುಹೂರ್ತದ ಸಂದರ್ಭದಲ್ಲಿಯೂ ಅಡ್ಡಿಯಾಗಿತ್ತು, ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವಾಗ ನ್ಯಾಯಾಲಯದ ಮೆಟ್ಟಿಲೇರುತ್ತೇವೆ, ಬಾಳಾಸಾಹೇಬ್ ಠಾಕ್ರೆ, ಸಾ ರಾ ಗೋವಿಂದು, ವಾಟಾಳ್ ನಾಗರಾಜ್ ಅವರನ್ನೇ ಬಿಡದ ನಾನು ನಿಮ್ಮನ್ನು ಬಿಡುತ್ತೇನೆಯೇ” ಎಂದು ಪ್ರೊ ರಾವ್ ಬೈಂದೂರು ಎಂದು ಹೇಳಿಕೊಂಡಿರುವ ವ್ಯಕ್ತಿ ಹೀಯಾಳಿಸಿರುವ ಆಡಿಯೋವನ್ನು ನಾಗ್ ಹುಣಸೋಡ್ ಬಿಡುಗಡೆಗೊಳಿಸಿದ್ದಾರೆ ಹಾಗೂ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ ಮಹಾರಾಷ್ಟ್ರ ಕರ್ನಾಟಕದ ನಡುವಿನ ಗಡಿವಿವಾದ ನಿರಂತರ ಹೊತ್ತುರಿಯುತ್ತಿರುವ ಸಮಸ್ಯೆ ಇಂತಹ ಸಮಸ್ಯೆಗಳನ್ನು ನಿವಾರಿಸಲು ಮುಂದಾಗುವ ಯುವಕ, ಮರಾಠಿ ಹೆಣ್ಣಿನ ಪ್ರೇಮಕ್ಕೆ ಸಿಲುಕುತ್ತಾನೆ ಆತನಿಗೆ ಪ್ರೀತಿ ದಕ್ಕುತ್ತದೆಯೇ, ಗಡಿಯಲ್ಲಿ ಶಾಂತಿ ನೆಲೆಸುತ್ತದೆಯೇ ಎಂಬುದು ಚಿತ್ರದ ತಿರುಳು ಅಕ್ಷಯ ಫಿಲಂ ಮೇಕರ್ಸ್ ಅಡಿಯಲ್ಲಿ, ಬೆಳಗಾವಿ ಮೂಲದ ವಸಂತ್ ಮುರಾರಿ ದಳವಾಯಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎಲ್ವಿನ್ ಜೋಶಿ ಸಂಗೀತ ಸಂಯೋಜನೆಯಿದೆ ಪ್ರಭು ಸೂರ್ಯ, ಸಂಚಿತಾ ಪಡುಕೋಣೆ, ಚರಣ್ ರಾಜ್‍ ಮೊದಲಾದವರು ತಾರಾಬಳಗದಲ್ಲಿದ್ದಾರೆ.

 Sharesee more..

‘ನಾವೆಲ್ರೂ ಹಾಫ್‍ಬಾಯಿಲ್ಡ್’

20 Jan 2020 | 11:02 PM

ಬೆಂಗಳೂರು, ಜ 20 (ಯುಎನ್‍ಐ) ಅನುಗ್ರಹ ಸಿನಿಮಾಸ್ ಲಾಂಛನದಲ್ಲಿ ಕೆ ಅಮೀರ್ ಅಹಮದ್ ನಿರ್ಮಿಸಿರುವ ‘ನಾವೆಲ್ರೂ ಹಾಫ್ ಬಾಯಿಲ್ದ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಬಿ ಶಿವರಾಜ್ ವೆಂಕಟಾಚ್ಚ ನಿರ್ದೇಶನದ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ.

 Sharesee more..

ಈ ವಾರ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’

20 Jan 2020 | 10:58 PM

ಬೆಂಗಳೂರು, ಜ 20 (ಯುಎನ್‍ಐ) ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ವೈ ಎನ್ ಶಂಕರೇಗೌಡ ಹಾಗೂ ಸ್ನೇಹಿತರು ನಿರ್ಮಿಸಿರುವ ‘ಇಂಡಿಯಾ ವರ್ಸಸ್’ ಇಂಗ್ಲೆಂಡ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಅವರ ಪುತ್ರಿ ಕನಸು ನಾಗತಿಹಳ್ಳಿ ಕಥೆ ಬರೆದಿದ್ದಾರೆ ಅರ್ಜುನ್ ಜನ್ಯ ಸಂಗೀತವಿದ್ದು, ವಿಲ್ ಪ್ರಿನ್ಸ್, ಸತ್ಯ ಹೆಗ್ಡೆ ಹಾಗೂ ಎ.

 Sharesee more..

ಈ ವಾರ ತೆರೆಗೆ ‘ಖಾಕಿ’

20 Jan 2020 | 10:48 PM

ಬೆಂಗಳೂರು, ಜ 20 (ಯುಎನ್‍ಐ) ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಅವರು ನಿರ್ಮಿಸಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ‘ಖಾಕಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ.

 Sharesee more..

‘ವಿಕ್ಕಿ’ಗೆ ಕಿಚ್ಚನ ಹಾರೈಕೆ

20 Jan 2020 | 10:46 PM

ಬೆಂಗಳೂರು, ಜ 20 (ಯುಎನ್‍ಐ) ಶ್ರೀ ಬನಶಂಕರಿ ಮೂವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ವಿಕ್ಕಿ‘ ಚಿತ್ರದ ಟೀಸರ್ ಹಾಗೂ ಧ್ವನಿಸುರುಳಿಯನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಎಸ್.

 Sharesee more..

‘ದಾರಿ ಯಾವುದಯ್ಯ ವೈಕುಂಠಕೆ’

20 Jan 2020 | 10:40 PM

ಬೆಂಗಳೂರು, ಜ 20 (ಯುಎನ್‍ಐ) ದಾರಿ ಯಾವುದಯ್ಯ ವೈಕುಂಠಕೆ .

 Sharesee more..
ಮತ್ತೆ ‘ಉದ್ಭವ’ ಕ್ಕೆ ದಚ್ಚು ಬೆಂಬಲ, ಟ್ರೇಲರ್ ಲಾಂಚ್

ಮತ್ತೆ ‘ಉದ್ಭವ’ ಕ್ಕೆ ದಚ್ಚು ಬೆಂಬಲ, ಟ್ರೇಲರ್ ಲಾಂಚ್

20 Jan 2020 | 10:33 PM

ಬೆಂಗಳೂರು, ಜ 20 (ಯುಎನ್‍ಐ) ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ಸಾರಥ್ಯದಲ್ಲಿ ಮತ್ತೆ ಉದ್ಭವ’ ಚಿತ್ರ ಸಿದ್ಧವಾಗಿದ್ದು, ಮುಂದಿನ ತಿಂಗಳು, ಫೆ 7ರಂದು ಬಿಡುಗಡೆಯಾಗಲಿದೆ

 Sharesee more..
‘ಮೈ ನೇಮ್‍ ಇಸ್‍ ರಾಜ್’ ಮುಂದಿನ ವಾರ ತೆರೆಗೆ

‘ಮೈ ನೇಮ್‍ ಇಸ್‍ ರಾಜ್’ ಮುಂದಿನ ವಾರ ತೆರೆಗೆ

20 Jan 2020 | 10:22 PM

ತಾರಾಗಣದಲ್ಲಿ ಪ್ರಭು ಸೂರ್ಯ: ಬೆಂಗಳೂರು, ಜ 20 (ಯುಎನ್‍ಐ) ಅಮೋಘ್ ಎಂಟರ್‍ ಟೈನ್‍ಮೆಂಟ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಮೈ ನೇಮ್ ಇಸ್ ರಾಜ್ ‘ ಚಿತ್ರ ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

 Sharesee more..

ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದು ತಪ್ಪು: ದುನಿಯಾ ವಿಜಿ

20 Jan 2020 | 9:14 PM

ಬೆಂಗಳೂರು, ಜ 20 (ಯುಎನ್‍ಐ) ಮಾಸ್ ಪ್ರೇಕ್ಷಕರ ಮೆಚ್ಚಿನ ಹೀರೋ ದುನಿಯಾ ವಿಜಿ ಸೋಮವಾರ ತಮ್ಮ ಹುಟ್ಟುಹಬ್ಬದಂದು ‘ಸಲಗ’ ಚಿತ್ರದ ಟೀಸರ್ ಲಾಂಚ್ ಮಾಡಿದ್ದಾರೆ ಅಲ್ಲದೆ ತಡರಾತ್ರಿ ಕೇಕ್ ಕತ್ತರಿಸಿ ಅಭಿಮಾನಿಗಳ ಜತೆ ಸಂಭ್ರಮಿಸಿದ್ದಾರೆ ಆದರೆ ಈ ವೇಳೆ ಒಂದು ಎಡವಟ್ಟಾಗಿದೆ ಕತ್ತಿಯಲ್ಲಿ ಕೇಕ್ ಕತ್ತರಿಸಿ, ಖಾಕಿ ಕೆಂಗಣ್ಣಿಗೆ ವಿಜಿ ತುತ್ತಾಗಿದ್ದಾರೆ ಈ ಎಲ್ಲ ವಿಷಯದ ಬಗ್ಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ವಿಜಿ, “ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದು ತಪ್ಪು.

 Sharesee more..

ಟಾಲಿವುಡ್ ನಲ್ಲಿ ಅನನ್ಯ ಪಾಂಡೆ

20 Jan 2020 | 3:50 PM

ಮುಂಬೈ, ಜ 20 (ಯುಎನ್ಐ) ಬಾಲಿವುಡ್ ನಟಿ ಅನನ್ಯ ಪಾಂಡೆ, ಬಾಲಿವುಡ್ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.

 Sharesee more..

ಬಿನೋದಿನಿ ದಾಸಿ ಚಿತ್ರದಲ್ಲಿ ನಟಿಸಲು ದೀಪಿಕಾ ನಕಾರ

19 Jan 2020 | 3:33 PM

ಮುಂಬೈ, ಜ 19 (ಯುಎನ್ಐ) ಬಂಗಾಳಿ ಚಿತ್ರ ನಟಿ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರಾಕರಿಸಿದ್ದಾರೆ.

 Sharesee more..

ಮತ್ತೆ ಜೊತೆಯಾಗುತ್ತಾರಾ ಶಾರುಖ್-ಕರೀನಾ!

19 Jan 2020 | 3:03 PM

ಮುಂಬೈ, ಜ 19 (ಯುಎನ್ಐ) ಹಿಂದಿ‌ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್ ಕುಮಾರ್ ರಾವ್ ಹಿರಾನಿ, ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಕರೀನಾ ಕಪೂರ್ ಅವರ ಮೂಖ್ಯಭೂಮಿಕೆಯಲ್ಲಿ‌ ಚಿತ್ರವೊಂದು ಹೊರತರುವ ಸಾಧ್ಯತೆ ಇದೆ.

 Sharesee more..

ರಣಬೀರ್ ಜೊತೆಗೆ ನಟಿಸಲು ಉತ್ಸುಕಳಾದ ಶ್ರದ್ಧಾ

19 Jan 2020 | 3:01 PM

ಮುಂಬೈ , ಜ 19 (ಯುಎನ್ಐ) ಬಾಲಿವುಡ್ ರಾಕ್ ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳಲು ನಟಿ ಶ್ರದ್ಧಾ ಕಪೂರ್ ತುಂಬಾ ಉತ್ಸುಕರಾಗಿದ್ದಾರಂತೆ.

 Sharesee more..

ರಾಜಮೌಳಿ ಹೊಸ ಚಿತ್ರದಲ್ಲಿ ನಟಿಸುತ್ತಿಲ್ಲ; ಕಿಚ್ಚ ಸುದೀಪ್ ಸ್ಪಷ್ಟನೆ

19 Jan 2020 | 2:45 PM

ಬೆಂಗಳೂರು, ಜ ೧೯(ಯುಎನ್‌ಐ) ಬಾಹುಬಲಿ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮತ್ತೊಂದು ಭಾರಿ ಬಜೆಟ್ ತೆಲುಗು ಸಿನಿಮಾ ಆರ್ ಆರ್.

 Sharesee more..
ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

18 Jan 2020 | 7:15 PM

ಬೆಂಗಳೂರು, ಜ 18 (ಯುಎನ್ಐ) ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ 'ಜೇಮ್ಸ್' ನಾಳೆ ಭಾನುವಾರ ಲಾಂಚ್ ಆಗುತ್ತಿದ್ದು, ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಶುಭಾರಂಭ ಮಾಡಲಿದೆ

 Sharesee more..