Wednesday, Jan 29 2020 | Time 01:09 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment

ರಾಜ್ಯದಲ್ಲಿ ‘ದರ್ಬಾರ್’ ನಡೆಯಲು ಬಿಡಲ್ಲ : ಕರ್ನಾಟಕ ರಣಧೀರ ಪಡೆ

09 Jan 2020 | 12:41 PM

ಬೆಂಗಳೂರು, ಜ 09 (ಯುಎನ್‍ಐ) ಸೂಪರ್ ಸ್ಟಾರ್ ರಜನಿಕಾಂತ್, ನಯನತಾರಾ ಅಭಿನಯದ ‘ದರ್ಬಾರ್’ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ರಾಜ್ಯ ಹಲವು ಥಿಯೇಟರ್‍ಗಳಲ್ಲೂ ಚಿತ್ರ ತೆರೆಕಂಡಿದೆ ಇದೇ ವೇಳೆ ರಾಜ್ಯದಲ್ಲಿ ‘ದರ್ಬಾರ್’ ಚಿತ್ರ ಪ್ರದರ್ಶನ ಮುಂದುವರಿಯಲು ಬಿಡುವುದಿಲ್ಲ ಎಂದು ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಹೇಳಿದ್ದಾರೆ.

 Sharesee more..

ಶೀಘ್ರದಲ್ಲೆ ಬೆಳ್ಳಿತೆರೆಗೆ ‘ಆನೆಬಲ’

09 Jan 2020 | 11:32 AM

ಬೆಂಗಳೂರು, ಜ 09 (ಯುಎನ್‍ಐ) ಜನತಾ ಟಾಕೀಸ್ ಸಂಸ್ಥೆಯ ಚೊಚ್ಚಲ ಚಿತ್ರ ‘ಆನೆಬಲ’ ಶೀಘ್ರದಲ್ಲೆ ಬೆಳ್ಳಿತೆರೆಗೆ ದಾಂಗುಡಿಯಿಡಲು ಅಣಿಯಾಗುತ್ತಿದೆ ಹೊಸತನ ಕತೆ ಮತ್ತು ಚಿತ್ರಕತೆ ಜೊತೆಗೆ ಇಡೀ ಚಿತ್ರ ನೇರ ಹಾಗೂ ಸಹಜ ನಿರೂಪಣೆಯನ್ನ ಚಿತ್ರ ಒಳಗೊಂಡಿರುವ ಕಾರಣ ಬಹು ನಿರೀಕ್ಷೆ ಹುಟ್ಟಿಸಿದೆ ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವ ಈ ಚಿತ್ರದಲ್ಲಿ ಒಬ್ಬ ಕಂಠದಾನ ಕಲಾವಿದರನ್ನೂ ಬಳಸದೇ ಓರಿಜಿನಲ್ ವಾಯ್ಸ್ ಗೋಸ್ಕರ ಇಡಿ ತಂಡ ಶ್ರಮಪಟ್ಟು ಡಬ್ ಮಾಡಿಸಿದೆ ಶತಾಯುಷಿ ಅಜ್ಜಿಯೊಬ್ಬರು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿರುವುದು ಸಹ ವಿಶೇಷ.

 Sharesee more..

ಶಿವಣ್ಣನ ‘ಆರ್ ಡಿ ಎಕ್ಸ್’ಗೆ ತಮಿಳಿನ ರವಿ ಅರಸು ನಿರ್ದೇಶಕ!

09 Jan 2020 | 11:19 AM

ಬೆಂಗಳೂರು, ಜ 09 (ಯುಎನ್‍ಐ) ತಮಿಳಿನಲ್ಲಿ ‘ಈಟಿ’ ಯಂತಹ ಹಿಟ್ ಸಿನಿಮಾವನ್ನು ನೀಡಿ, ಇನ್ನೇನು ತೆರೆಗೆ ಬರಲಿರುವ ಅಯಂಗರನ್ ಚಿತ್ರವನ್ನೂ ನಿರ್ದೇಶಿಸಿರುವ ರವಿ ಅರಸು ನಿರ್ದೇಶನದಲ್ಲಿ ಆರ್ ಡಿ ಎಕ್ಸ್ ಹೆಸರಿನ ಸಿನಿಮಾ ಆರಂಭಗೊಳ್ಳುತ್ತಿದೆ.

 Sharesee more..

ಭಾರತ ರತ್ನ ಪ್ರಶಸ್ತಿಗೆ ಡಾ ರಾಜ್ ಹೆಸರು ಶಿಫಾರಸು ಮಾಡಿ : ರಾಜ್ಯ ಸರ್ಕಾರಕ್ಕೆ ಅಪ್ಪು, ಶಿವಣ್ಣ ಫ್ಯಾನ್ಸ್ ಮನವಿ

09 Jan 2020 | 10:56 AM

ಬೆಂಗಳೂರು, ಜ 09 (ಯುಎನ್‍ಐ) ಡಾ ರಾಜ್‍ಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಮೇರು ನಟ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸಹಜಾಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡ ಕಲಾವಿದ ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ನಾಡೋಜ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಈ ಮಹಾನ್‍ ನಟನಿಗೆ ‘ಭಾರತರತ್ನ’ ಪ್ರಶಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪವರ್ ಸ್ಟಾರ್ ಪುನೀತ್ ಹಾಗೂ ಶಿವರಾಜ್‍ಕುಮಾರ್ ಅಭಿಮಾನಿಗಳು ಆಗ್ರಹಿಸಿದ್ದಾರೆ.

 Sharesee more..

ಎಲ್ಲೆಲ್ಲೂ ರಜನಿ ‘ದರ್ಬಾರ್’ ಸಂಭ್ರಮದಲ್ಲಿ ಅಭಿಮಾನಿಗಳು

09 Jan 2020 | 10:28 AM

ಬೆಂಗಳೂರು/ಚೆನ್ನೈ, ಜ 09 (ಯುಎನ್‍ಐ) ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ‘ದರ್ಬಾರ್’ ತೆರೆಕಂಡಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ ಗುರುವಾರ ಬೆಳಗಿನ ಜಾವ 4 ಗಂಟೆಯಿಂದಲೇ ಬಹುತೇಕ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳು ಭರ್ತಿಯಾಗಿ, ತಲೈವಾ ದರ್ಬಾರ್ ವೀಕ್ಷಿಸಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ.

 Sharesee more..

ಸೈಕೋ ಕಿಲ್ಲರ್ ಆಗಲು ಅಕ್ಷಯ್ ಗೆ ಇಷ್ಟವಂತೆ!

08 Jan 2020 | 4:08 PM

ಮುಂಬೈ, ಜ 8 (ಯುಎನ್ಐ) ಸೈಕೋ‌ ಕಿಲ್ಲರ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 Sharesee more..

ದೀಪಿಕಾಗೆ ಸಲ್ಮಾನ್ ಜೊತೆ ನಟಿವಾಸೆ

08 Jan 2020 | 4:03 PM

ಮುಂಬೈ, ಜ 8 (ಯುಎನ್ಐ) ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ನಟಿ ದೀಪಿಕಾ ಪಡುಕೋಣೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

 Sharesee more..

ಭಾರತ್ ಬಂದ್ : ಚಿತ್ರಮಂದಿರಗಳಿಗೆ ತಟ್ಟದ ಬಿಸಿ

08 Jan 2020 | 11:20 AM

ಬೆಂಗಳೂರು, ಜ 8 (ಯುಎನ್‍ಐ) ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ ಬಿಸಿ ಚಿತ್ರರಂಗಕ್ಕೆ ತಟ್ಟಿಲ್ಲ ಚಿತ್ರಮಂದಿರಗಳು ಎಂದಿನಂತೆ ತೆರೆದಿವೆ ಆದರೆ ಬಂದ್ ಇದೆ ಎಂಬ ಕಾರಣಕ್ಕೆ ಥಿಯೇಟರ್‍ಗಳತ್ತ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಮುಷ್ಕರಕ್ಕೆ ಯಾವುದೇ ಬೆಂಬಲ ನೀಡದೆ ತಟಸ್ಥವಾಗಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.

 Sharesee more..

ರಾಕಿಂಗ್ ಸ್ಟಾರ್ ಯಶ್ ಜನ್ಮದಿನ : 5 ಸಾವಿರ ಕೆಜಿ ತೂಕದ ಕೇಕ್

08 Jan 2020 | 10:54 AM

ಬೆಂಗಳೂರು, ಜ 08(ಯುಎನ್‍ಐ) ಇಂದು ರಾಕಿಂಗ್ ಸ್ಟಾರ್ ಜನ್ಮದಿನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ ಯಶ್ ಹುಟ್ಟುಹಬ್ಬದ ಪ್ರಯುಕ್ತ 'ಕೆ ಜಿ.

 Sharesee more..

ಒಂದು ಶಿಕಾರಿಯ ಕಥೆ : ನಾಯಕ ನಟನಾಗಿ ಪ್ರಮೋದ್ ಶೆಟ್ಟಿ

08 Jan 2020 | 9:18 AM

ಬೆಂಗಳೂರು, ಜ 08 (ಯುಎನ್‍ಐ) ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯಯ ಪ್ರಾಥಮಿಕ ಶಾಲೆ ಕಾಸರಗೋಡು, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರ ‘ಒಂದು ಶಿಕಾರಿಯ ಕಥೆ’ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಈ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಧಾರಿತ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಐವತ್ತರ ಅಸುಪಾಸಿನ ಪ್ರಸಿದ್ಧ ಕಾದಂಬರಿಕಾರನ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ ಪಿ ಶೇಷಾದ್ರಿಯವರ ಜತೆ ಸಹಾಯಕ ನಿರ್ದೇಶಕಾಗಿ ಅನುಭವ ಪಡೆದಿರುವ ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ರಾಜೀವ್ ಶೆಟ್ಟಿ, ಸಚಿನ್ ಶೆಟ್ಟಿ ಬಂಡವಾಳ ಹೂಡಿದ್ದು, ಶೆಟ್ಟೀಸ್ ಫಿಲ್ಮ್ ಫ್ಯಾಕ್ಟರಿ ನಿರ್ಮಿಸಿದೆ.

 Sharesee more..

‘ಮದುವೆ ಮಾಡ್ರೀ ಸರಿ ಹೋಗ್ತಾನೆ’

07 Jan 2020 | 9:32 PM

ಬೆಂಗಳೂರು, ಜ 07 (ಯುಎನ್‍ಐ) ವಯಸ್ಸಿಗೆ ಬಂದ ಮಕ್ಕಳು ಯಾಕೋ ಒಂಥರಾ ಆಡ್ತಿದ್ದಾರೆ, ಎಲ್ಲೋ ಹಾದಿ ತಪ್ಪುತ್ತಿದ್ದಾರಾ ಎಂಬ ಶಂಕೆ ವ್ಯಕ್ತವಾದರೆ ಹೆತ್ತವರಿಗೆ ಬಂಧುಗಳು, ಸ್ನೇಹಿತರು ಹೇಳೋ ಮಾತೆ ‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಅಂತ ಇದೀಗ ಈ ಜನಜನಿತ ಸಲಹೆ ಮಾತನ್ನೇ ಶೀರ್ಷಿಕೆಯಾಗಿಸಿ ಎಸ್‍ಎಲ್‍ಡಿ ಪ್ರೊಡಕ್ಷನ್ಸ್ ಚಿತ್ರ ನಿರ್ಮಿಸಿದ್ದು, ಟೀಸರ್ ಬಿಡುಗಡೆಗೊಳಿಸಿದೆ ಪೂರ್ಣ ಪ್ರಮಾಣದಲ್ಲಿ ಉತ್ತರ ಕರ್ನಾಟಕ ಶೈಲಿಯ ಕನ್ನಡವಿದ್ದು ಕಾಮಿಡಿ ಕಥಾಹಂದರವಿದೆ ಈ ಚಿತ್ರದ ಮೂಲಕ ಶಿವಚಂದ್ರಕುಮಾರ್ ಹಾಗೂ ಆರಾಧ್ಯ ನಾಯಕ,ನಾಯಕಿಯರಾಗಿ ಸ್ಯಾಂಡಲ್‍ವುಡ್‍ ಗೆ ಕಾಲಿಡುತ್ತಿದ್ದಾರೆ ಈ ಹಿಂದೆ ರಂಕಲ್ ರಾಟೆ ನಿರ್ದೇಶಿಸಿದ್ದ ಗೋಪಿ ಕೆರೂರ್‍, ಈ ಚಿತ್ರದ ಸಾರಥ್ಯವನ್ನೂ ವಹಿಸಿದ್ದಾರೆ ಹಿರಿಯ ರಂಗ ಕಲಾವಿದ ಕೃಷ್ಣಮೂರ್ತಿ ಕವಾತ್ತರ್, “ಈ ಚಿತ್ರದಲ್ಲಿ ನನಗೆ ನೆಗೆಟಿವ್ ಶೇಡ್ ಇದೆ ಪುಡಿ ರಾಜಕಾರಣಿಯಾಗಿ ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಾ, ಬೇರೆ ಮನೆಯವರ ಬೆಂಕೆಯಲ್ಲಿ ಬೇಳೆ ಬೇಯಿಸಿಕೊಳ್ಳುವವನ ಪಾತ್ರ ಎಂದು ವಿವರಿಸಿದ್ದಾರೆ ಶಿವಚಂದ್ರಕುಮಾರ್‍ ಹಾಗೂ ಆರಾಧ್ಯ ಅವರೊಂದಿಗೆ ಪೋಷಕ ಕಲಾವಿದರಾಗಿ ರಮೇಶ್ ಭಟ್, ಅರುಣ್ ಬಾಲರಾಜ್, ಮಿಮಿಕ್ರಿ ಗೋಪಿ, ಚಿತ್ಕಳ ಬಿರಾದಾರ್, ಕೃಷ್ಣಮೂರ್ತಿ ಕವಾತ್ತರ್ಮ ಸದಾನಂದ ಕಾಳೆ, ಚಕ್ರವರ್ತಿ ದಾವಣಗೆರೆ ಮೊದಲಾದವರಿದ್ದಾರೆ.

 Sharesee more..
‘ಪ್ರೆಸೆಂಟ್ ಪ್ರಪಂಚ ಝೀರೊ ಪಾಯಿಂಟ್ ಲವ್’ ನಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಫ್ಯಾಮಿಲಿ!

‘ಪ್ರೆಸೆಂಟ್ ಪ್ರಪಂಚ ಝೀರೊ ಪಾಯಿಂಟ್ ಲವ್’ ನಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಫ್ಯಾಮಿಲಿ!

07 Jan 2020 | 9:18 PM

ಬೆಂಗಳೂರು, ಜ 07 (ಯುಎನ್‍ಐ) ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಪ್ರೆಸೆಂಟ್ ಪ್ರಪಂಚ ಝೀರೊ ಪಾಯಿಂಟ್ ಲವ್’ ಸಿನಿಮಾ ಡಬ್ಬಿಂಗ್ ಮುಗಿಸಿದ್ದು, ಮಂಗಳವಾರ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನೂ ಮುಕ್ತಾಯಗೊಳಿಸಿದೆ

 Sharesee more..

‘ರಮೇಶ - ಸುರೇಶ’ ಮಾತಿನ ಭಾಗದ ಚಿತ್ರೀಕರಣ ಪೂರ್ಣ

07 Jan 2020 | 9:09 PM

ಬೆಂಗಳೂರು, ಜ 07 (ಯುಎನ್‍ಐ) ಆರ್ ಕೆ ಟಾಕೀಸ್, ಪಿ ಕೃಷ್ಣ ಹಾಗೂ ಬಿ ಶಂಕರ್ ಅವರು ಆರ್ ಕೆ ಟಾಕೀಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ‘ರಮೇಶ - ಸುರೇಶ‘ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಬೆಂಗಳೂರು, ತುಮಕೂರು, ಇಡಗುಂಜಿ, ಹೊನ್ನಾವರ ಮತ್ತು ಮುರುಡೇಶ್ವರದಲ್ಲಿ ಮೂವತ್ತೈದು ದಿನಗಳ ಚಿತ್ರೀಕರಣ ನಡೆದಿದೆ.

 Sharesee more..

ಸದ್ಯದಲ್ಲೇ ‘ಲೋಕಲ್ ಟ್ರೈನ್’ ಹಾಡುಗಳ ಬಿಡುಗಡೆ

07 Jan 2020 | 9:05 PM

ಬೆಂಗಳೂರು, ಜ 07 (ಯುಎನ್‍ಐ) ಸಂಜನಾ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್ ಹೆಚ್ ವಾಳ್ಕೆ ನಿರ್ಮಿಸುತ್ತಿರುವ ‘ಲೋಕಲ್ ಟ್ರೈನ್‘ ಚಿತ್ರದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ.

 Sharesee more..

‘ಪ್ರೇಮಯುದ್ಧಂ’ ಆಡಿಯೊ ರಿಲೀಸ್

07 Jan 2020 | 9:00 PM

ಬೆಂಗಳೂರು, ಜ 07(ಯುಎನ್‍ಐ) ಎಸ್‍ ಡಿ ಕ್ರಿಯೇಷನ್ಸ್ ಅಡಿಯಲ್ಲಿ ಶ್ರೀಮಂಜು ನಿರ್ದೇಶನದ ‘ಪ್ರೇಮಯುದ್ಧಂ’ ಚಿತ್ರದ ಆಡಿಯೊ ಬಿಡುಗಡೆಯಾಗಿದೆ ಅತಿಥಿಯಾಗಿ ಆಗಮಿಸಿದ್ದ ಜನಪ್ರಿಯ ನಟಿ ಸ್ಪರ್ಶ ರೇಖಾ ಆಡಿಯೊ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು ಚಿತ್ರಕ್ಕೆ ನಿರ್ಮಾಪಕ ಗುರುಮೂರ್ತಿ ಬಂಡವಾಳ ಹೂಡಿದ್ದು, ನಾಯಕನ ಪಾತ್ರದಲ್ಲಿ ಅನಿಲ್‍, ನಾಯಕಿಯಾಗಿ ಪಲ್ಲವಿ ಅಭಿನಯವಿದೆ “ಪ್ರೇಮಯುದ್ಧಂ ಹಳ್ಳಿಗಾಡಿನ ಶುದ್ಧ ಪ್ರೇಮಕಥೆ ಅನಿಲ್ ಹಳ್ಳಿ ಯುವಕನವಾಗಿದ್ದು, ಮೊಬೈಲ್ ಹಾಗೂ ಆಂಗ್ಲಭಾಷೆಯನ್ನು ಬಳಸದೇನೆ ಚಿತ್ರ ಮಾಡಿದ್ದೇವೆ” ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ 4 ಹಾಡುಗಳಿವೆ ಹಾಗೂ 4 ಸಾಹಸ ದೃಶ್ಯಗಳಿವೆ ಎಂದು ಚಿತ್ರತಂಡ ತಿಳಿಸಿದೆ.

 Sharesee more..