Saturday, Jan 25 2020 | Time 01:52 Hrs(IST)
National

ದೆಹಲಿ ಚುನಾವಣೆ: 8 ಮಂದಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಎಎಪಿ

14 Jan 2020 | 9:40 PM

ನವದೆಹಲಿ, ಜ 14 (ಯುಎನ್‌ಐ) ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಎಲ್ಲಾ 70 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಇದರಲ್ಲಿ ಎಂಟು ಮಹಿಳಾ ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

 Sharesee more..
ದೆಹಲಿ ವಿಧಾನಸಭಾ ಚುನಾವಣೆ; ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಎಪಿ

ದೆಹಲಿ ವಿಧಾನಸಭಾ ಚುನಾವಣೆ; ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಎಪಿ

14 Jan 2020 | 8:53 PM

ನವದೆಹಲಿ, ಜ.14 (ಯುಎನ್ಐ) ಮತದಾನ ಅಧಿಸೂಚನೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಮಂಗಳವಾರ, ಫೆಬ್ರವರಿ 8ರಂದು ನಡೆಯಲಿರುವ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಿಂದ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು.

 Sharesee more..

ಜೆಎನ್‌ಯು ಹಿಂಸಾಚಾರ; ವಾಟ್ಸಪ್‌ ಗ್ರೂಪ್‌ನ 34 ಮಂದಿಯನ್ನು ಪ್ರಶ್ನಿಸಲಿರುವ ಪೊಲೀಸರು

14 Jan 2020 | 8:29 PM

ನವದೆಹಲಿ, ಜ 14 (ಯುಎನ್ಐ) ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್‌ನಲ್ಲಿ ಗಲಭೆಗೆ ಸಂಚು ರೂಪಿಸಿದ ಮೂವತ್ತನಾಲ್ಕು ಮಂದಿಗೆ ದೆಹಲಿ ಪೊಲೀಸರು ಶೀಘ್ರದಲ್ಲೇ ನೋಟಿಸ್ ನೀಡಲಿದ್ದು, ಈಗಾಗಲೇ ಎಂಟು ಜನರನ್ನು ಪ್ರಶ್ನಿಸಲಾಗಿದೆ.

 Sharesee more..
ಕೈಫಿ ಅಜ್ಮಿ ಜನ್ಮದಿನಾಚರಣೆ: ಗೂಗಲ್ ನಿಂದ ಡೂಡಲ್ ಅರ್ಪಣೆ

ಕೈಫಿ ಅಜ್ಮಿ ಜನ್ಮದಿನಾಚರಣೆ: ಗೂಗಲ್ ನಿಂದ ಡೂಡಲ್ ಅರ್ಪಣೆ

14 Jan 2020 | 5:50 PM

ಕೊಲ್ಕತಾ, ಜ 14(ಯುಎನ್‍ಐ)- ಇಪ್ಪತ್ತನೇ ಶತಮಾನದ ಖ್ಯಾತ ಉರ್ದು ಕವಿ, ಗೀತೆರಚನೆಕಾರ ಕೈಫಿ ಅಜ್ಮಿ ಅವರ 101ನೇ ಜನ್ಮದಿನದ ಅಂಗವಾಗಿ ಗೂಗಲ್ ಸಂಸ್ಥೆ ಡೂಡಲ್ ಮೂಲಕ ಗೌರವ ಅರ್ಪಿಸಿದೆ.

 Sharesee more..
ಕಾಶ್ಮೀರದಲ್ಲಿ ಹಿಮಪಾತದಿಂದ ಐವರು ಭದ್ರತಾ ಪಡೆ ಯೋಧರು ಹುತಾತ್ಮ

ಕಾಶ್ಮೀರದಲ್ಲಿ ಹಿಮಪಾತದಿಂದ ಐವರು ಭದ್ರತಾ ಪಡೆ ಯೋಧರು ಹುತಾತ್ಮ

14 Jan 2020 | 5:33 PM

ಶ್ರೀನಗರ, ಜ 14(ಯುಎನ್‍ಐ)- ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಹಿಮಪಾತಗಳಿಂದ ನಾಲ್ವರು ಸೇನಾ ಯೋಧರು ಹಾಗೂ ಗಡಿ ಭದ್ರತಾ ಪಡೆಯ ಓರ್ವ ಯೋಧ ಹುತಾತ್ಮರಾಗಿದ್ದು, ಓರ್ವ ಯೋಧನನ್ನು ರಕ್ಷಿಸಲಾಗಿದೆ.

 Sharesee more..
ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

14 Jan 2020 | 4:29 PM

ನವದೆಹಲಿ, ಜ 14 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿಗೆ ಹೋಲಿಸಿದ ಪುಸ್ತಕ ಬಿಜೆಪಿಗೆ ಸಂಬಂಧಿಸಿದಲ್ಲವಾದ್ದರಿಂದ ಈ ಕುರಿತು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಲಹೆ ನೀಡಿದ್ದಾರೆ.

 Sharesee more..

ಕದ್ರಿ ರಾಮಚಂದ್ರ ಭಟ್ ಅವರಿಗೆ ‘ಕುಂದೇಶ್ವರ ಸನ್ಮಾನ’ ಪ್ರಶಸ್ತಿ ಪ್ರಕಟ

14 Jan 2020 | 1:36 PM

ಮಂಗಳೂರು, ಜ14(ಯುಎನ್‍ಐ)- ಕಾರ್ಕಳ ತಾಲ್ಲೂಕಿನ ಹಿರಂಗದಲ್ಲಿನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಕೊಡಮಾಡುವ ‘ಕುಂದೇಶ್ವರ ಸನ್ಮಾನ’ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಕದ್ರಿ ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ ಪ್ರಶಸ್ತಿ ಪ್ರದಾನ ಸಮಾರಂಭ ಜ 21ರಂದು ನಡೆಯಲಿದೆ.

 Sharesee more..

ರಾಜಕಪೂರ್ ಪುತ್ರಿ ರಿತು ನಂದಾ ನಿಧನ

14 Jan 2020 | 12:41 PM

ನವದೆಹಲಿ, ಜ 14 (ಯುಎನ್ಐ) ಚಿತ್ರನಟ ರಾಜ್ ಕುಪೂರ್ ಅವರ ಹಿರಿಯ ಪುತ್ರಿ ಹಾಗೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದ ಅವರ ಅತ್ತೆ ರಿತು ನಂದಾ ಮಂಗಳವಾರ ನಿಧನರಾಗಿದ್ದಾರೆ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು.

 Sharesee more..

ಸಿಎಎ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

14 Jan 2020 | 12:33 PM

ನವದೆಹಲಿ, ಜ 14 (ಯುಎನ್ಐ) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಸಿಎಎ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಮೊದಲ ರಾಜ್ಯ ಇದಾಗಿದೆ.

 Sharesee more..

ಕೇಬಲ್ ಟಿವಿ ಶುಲ್ಕ ಪರಿಷ್ಕರಣೆ,130 ರೂಗೆ 200 ಚಾನಲ್ ಲಭ್ಯ

14 Jan 2020 | 10:04 AM

ನವದೆಹಲಿ, ಜನವರಿ 14 (ಯುಎನ್ಐ) ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿ ಶುಲ್ಕಪರಿಷ್ಕರಿಸಿದೆ ಹೊಸ ದರ ಆದೇಶದ ಅನ್ವಯ ಗ್ರಾಹಕರು 130 ರುಪಾಯಿಗೆ 200 ಚಾನಲ್ಗಳನ್ನು ವೀಕ್ಷಣೆ ಮಾಬಹುದಾಗಿದೆ .

 Sharesee more..

ದೆಹಲಿ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಜಾರಿ: ನಾಮಪತ್ರ ಸಲ್ಲಿಕೆ ಆರಂಭ

14 Jan 2020 | 9:50 AM

ನವದೆಹಲಿ, ಜ 14 [ಯುಎನ್ಐ] ಬಹು ನಿರೀಕ್ಷಿತ, ದೇಶದ ಗಮನ ಸೆಳೆದಿರುವ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಅಧಿಸೂಚನೆ ಜಾರಿಯಾಗಿದ್ದು ಈ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

 Sharesee more..

ಹಿಮದಲ್ಲಿ ಸಿಲುಕಿದ ಯೋಧನ ನಾಪತ್ತೆ

14 Jan 2020 | 8:41 AM

ನವದೆಹಲಿ, ಜನವರಿ 14 (ಯುಎನ್ಐ ) ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ.

 Sharesee more..

ಜಾಗತಿಕ ಕಾರಣಗಳಿಂದಾಗಿ ಆರ್ಥಿಕ ನಿಧಾನಗತಿ, ಹೂಡಿಕೆದಾರರಿಗಿದೆ ಭಾರತದ ಮೇಲೆ ವಿಶ್ವಾಶ : ಬಿಜೆಪಿ

13 Jan 2020 | 10:30 PM

ನವದೆಹಲಿ, ಜ 13 (ಯುಎನ್‌ಐ) ಭಾರತದ ಆರ್ಥಿಕ ನಿಧಾನಗತಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುಸಿತಕ್ಕೆ ಜಾಗತಿಕ ಅಂಶಗಳೇ ಕಾರಣವಾಗಿದ್ದು ಆರ್ಥಿಕತೆ ಚೇತರಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಮತ್ತು ಸರ್ಕಾರ ಪ್ರತಿಪಾದಿಸಿವೆ.

 Sharesee more..
ಠೇವಣಿ ಇಟ್ಟಿದ್ದ ಹಣ ಮರುಪಾವತಿಸುವಂತೆ ಕೋರಿ ಕಾರ್ತಿ ಅರ್ಜಿ ಸಲ್ಲಿಕೆ: ಇಡಿಗೆ ಸುಪ್ರೀಂ ನೋಟಿಸ್

ಠೇವಣಿ ಇಟ್ಟಿದ್ದ ಹಣ ಮರುಪಾವತಿಸುವಂತೆ ಕೋರಿ ಕಾರ್ತಿ ಅರ್ಜಿ ಸಲ್ಲಿಕೆ: ಇಡಿಗೆ ಸುಪ್ರೀಂ ನೋಟಿಸ್

13 Jan 2020 | 9:51 PM

ನವದೆಹಲಿ, ಜ.13 (ಯುಎನ್‌ಐ) ವಿದೇಶ ಪ್ರವಾಸಕ್ಕೆ ತೆರಳುವಾಗ ಭದ್ರತೆಗಾಗಿ ಇಟ್ಟಿದ್ದ 20 ಕೋಟಿ ರೂ. ಠೇವಣಿಯನ್ನು ಹಿಂದಿರುಗಿಸಬೇಕೆಂದು ಕಾರ್ತಿ ಚಿದಂಬರಂ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸುಪ್ರೀಂ ಕೋರ್ಟ್ ಸೋಮವಾರ ವಿವರವಾದ ಉತ್ತರ ಕೋರಿದೆ.

 Sharesee more..

ಸಿಎಎ ಹಿಂಪಡೆಯಿರಿ, ಎನ್‌ಆರ್‌ಸಿ, ಎನ್‌ಪಿಆರ್ ಪ್ರಕ್ರಿಯೆ ತಕ್ಷಣ ನಿಲ್ಲಿಸಿ: 20 ವಿರೋಧ ಪಕ್ಷಗಳಿಂದ ಕೇಂದ್ರಕ್ಕೆ ಒತ್ತಾಯ

13 Jan 2020 | 9:51 PM

ನವದೆಹಲಿ, ಜನವರಿ 13 (ಯುಎನ್‌ಐ) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವುದರ ಮಧ್ಯೆಯೇ 20 ವಿರೋಧ ಪಕ್ಷಗಳು ಸೋಮವಾರ "ಸಿಎಎ ಹಿಂಪಡೆದುಕೊಳ್ಳಬೇಕು ಮತ್ತು ರಾಷ್ಟ್ರವ್ಯಾಪಿ ಎನ್‌ಆರ್‌ಸಿ, ಎನ್‌ಪಿಆರ್‌ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.

 Sharesee more..